ಲಕ್ನೋ:ದೇಶದಲ್ಲಿನ ಅತೀ ದೊಡ್ಡ ಮತಾಂತರ ಜಾಲವನ್ನು ಬೇಧಿಸಿರುವುದಾಗಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬುಧವಾರ (ಸೆಪ್ಟೆಂಬರ್ 22) ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರತ್ ನಲ್ಲಿ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಖಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಧಾರಾವಾಡದಲ್ಲೊಂದು ಹೀನ ಕೃತ್ಯ : ತಿಂಡಿ ಆಸೆ ತೋರಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಹೇಳಿಕೆ ಪ್ರಕಾರ, ಧಾರ್ಮಿಕ ಮತಾಂತರಕ್ಕೆ ನೆರವು ನೀಡುತ್ತಿರುವ ಆರೋಪದ ಮೇಲೆ ಸಿದ್ದಿಖಿಯನ್ನು ಬಂಧಿಸಲಾಗಿದೆ. ಉಮರ್ ಗೌತಮ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾಗ ಸಿದ್ದಿಖಿ ಹೆಸರು ಬಯಲಾಗಿತ್ತು. ಮತಾಂತರ ದಂಧೆಯಲ್ಲಿ ತೊಡಗಿದ್ದ ಉಮರ್ ಗೌತಮ್ ನನ್ನು ಉತ್ತರಪ್ರದೇಶ ಪೊಲೀಸರು ಜೂನ್ ನಲ್ಲಿ ಬಂಧಿಸಿದ್ದು, ಈಗ ಜೈಲಿನಲ್ಲಿದ್ದಿರುವುದಾಗಿ ವರದಿ ಹೇಳಿದೆ.
64 ವರ್ಷದ ಮೌಲಾನಾ ಸಿದ್ದಿಖಿಯ ಸಂಶಯಾಸ್ಪದ ಚಟುವಟಿಕೆ ಮೇಲೆ ಭದ್ರತಾ ಏಜೆನ್ಸಿ ತೀವ್ರ ನಿಗಾ ಇರಿಸಿತ್ತು. ಮಂಗಳವಾರ ರಾತ್ರಿ ಸಿದ್ದಿಖಿ ಮೀರತ್ ಗೆ ಆಗಮಿಸಿದ್ದ ವೇಳೆ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಸ್ ವಕ್ತಾರರ ಪ್ರಕಾರ, ಮೌಲಾನಾ ಕಲೀಂ ಸಿದ್ದಿಖಿ ಉತ್ತರಪ್ರದೇಶ ಮುಜಾಫರ್ ನಗರದ ಫುಲತ್ ನಿವಾಸಿ. ಇಸ್ಲಾಮಿಕ ಮೌಲ್ವಿ ಸಿದ್ದಿಖಿ ಜಾಮೀಯಾ ಇಮಾಂ ವಲಿಯುಲ್ಲಾ ಟ್ರಸ್ಟ್ ಅನ್ನು ನಡೆಸುತ್ತಿದ್ದು, ಈ ಟ್ರಸ್ಟ್ ಮೂಲಕ ಹಲವಾರು ಮದರಸಾಗಳಿಗೆ ಧನಸಹಾಯ ಮಾಡುತ್ತಿದ್ದು, ಟ್ರಸ್ಟ್ ಗೆ ವಿದೇಶದಿಂದ ಭಾರೀ ಪ್ರಮಾಣದ ಹಣ ಬರುತ್ತಿದೆ ಎಂದು ಆರೋಪಿಸಲಾಗಿದೆ.