Advertisement

ಯಾವುದೇ ಮೈತ್ರಿಯಿಲ್ಲದೆ ಚುನಾವಣಾ ಕಣಕ್ಕಿಳಿಯಲಿದ್ದೇವೆ  :  ಎಐಎಮ್ಐಎಮ್  

10:52 AM Jul 25, 2021 | Team Udayavani |

ಹೈದರಾಬಾದ್ : ಮುಂಬರುವ ಉತ್ತರ ಪ್ರದೇಶದ ವಿಧಾನ ಸಭಾ ಚನಾವಣೆಗೆ ಅಸದುದ್ದೀನ್ ಒವೈಸಿ ನಾಯಕತ್ವದ ಎಐಎಮ್ಐಎಮ್ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಾ ಕಣಕ್ಕೆ ಇಳಿಯುತ್ತದೆ ಎಂದು  ಹೇಳಿದೆ.

Advertisement

ಅಖಿಲೇಶ್ ಯಾದವ್ ಮುಖಂಡತ್ವದ ಸಮಾಜವಾದಿ ಪಕ್ಷದೊಂದಿಗೆ ಎಐಎಮ್ಐಎಮ್ ಮೈತ್ರಜಿ ವಿಚಾರ ಉತ್ತರ ಪ್ರದೇಶದ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಎಐಎಮ್ಐಎಮ್ ಘಟಕ ಮೈತ್ರಿ ವಿಚಾರವನ್ನು ನಿರಾಕರಿಸಿದೆ.

ಇದನ್ನೂ ಓದಿ : ಸಂಜೆಯವರೆಗೆ ಕಾದು ನೋಡೋಣ, ವರಿಷ್ಠರ ಮೇಲೆ ನನಗೆ ವಿಶ್ವಾಸವಿದೆ: ಯಡಿಯೂರಪ್ಪ

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ನೊಂದಿಗೆ ಮಾತನಾಡಿದ ಉತ್ತರ ಪ್ರದೇಶದ ಎಐಎಮ್ಐಎಮ್ ಪಕದ ರಾಜ್ಯ ಘಟಕದ ಅಧ್ಯಕ್ಷ ಶೌಕತ್ ಅಲಿ, ನಾವು ಯಾವಿದೇ ಪಕ್ಷದೊಂದಿಎಗ ಮೈತ್ರಿಗೆ ಮುಂದಾಗುತ್ತಿಲ್ಲ. ವಿಧಾನ ಸಭಾ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.

ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿದರೇ ಉಪ ಮುಖ್ಯಮಂತ್ರಿ ಸ್ಥಾನವನ್ನು ಮುಸಲ್ಮಾನ್ ನಾಯಕನಿಗೆ ನೀಡುವುದಾದರೇ ಮಾತ್ರ ಮೈತ್ರಿಗೆ ಒಪ್ಪುತ್ತೇವೆಂದು ಎಲ್ಲಿಯೂ ಹೇಳಿಲ್ಲ.  ನಾನಾಗಲಿ ಅಥವಾ ಪಕ್ಷದ ಮುಖಂಡ ಅಸದುದ್ದೀನ್ ಒವೈಸಿ ಎಲ್ಲಿಯೂ, ಎಂದೂ ಈ ಬಗ್ಗೆ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಒವೈಸಿ ಈ ಹಿಂದೆ ಲಕ್ನೋಗೆ ಭೇಟಿ ನೀಡಿ, ಪ್ರಾದೇಶಿಕ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ಬಗ್ಗೆ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ವರದಿಗಳಾಗಿವೆ. ಮಾತ್ರವಲ್ಲದೇ, ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖಂಡ ಓಂ ಪ್ರಕಾಶ್ ರಾಜ್ ಭಾರ್, ಪ್ರಗತಿಶೀಲ್ ಸಮಾಜವಾದಿ ಪಕ್ಷದ ಮುಖಂಡ ಶಿವ್ ಪಾಲ್ ಸಿಂಗ್ ಯಾದವ್, ಕೇಶವ್ ದೇವ್ ಮೌರ್ಯ, ಮೋಹನ್ ದಾಲ್, ಅಪ್ನಾ ದಳದ ಕೃಷ್ಣ ಪಟೇಲ್ ಅವರೊಂದಿಗೆ ಚುನಾವಣೆಯ ಉದ್ದೇಶದೊಂದಿಗೆ ನಿಕಟ ಸಂಪರ್ಕದೊಂದಿಗೆ ಇದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್: ಮೊದಲ ಪಂದ್ಯ ಗೆದ್ದ ಪಿ.ವಿ.ಸಿಂಧು ಶುಭಾರಂಭ

Advertisement

Udayavani is now on Telegram. Click here to join our channel and stay updated with the latest news.

Next