Advertisement

UP; ಹಾಥರಸ್‌ ಕಾಲ್ತುಳಿತಕ್ಕೆ ಆಡಳಿತ ವೈಫ‌ಲ್ಯ ಕಾರಣ: ರಾಹುಲ್‌

01:07 AM Jul 06, 2024 | Team Udayavani |

ಹಾಥರಸ್‌/ಅಲಿಗಢ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ ಹಾಥರಸ್‌ಗೆ ಭೇಟಿ ನೀಡಿ, ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಹಾಥರಸ್‌ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟಿದ್ದಾರೆ.

Advertisement

ಭೇಟಿಯ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ, ಕಾಲು¤ಳಿತ ಘಟನೆ ಕುರಿತು ರಾಜಕೀಯ ದೃಷ್ಟಿಯಿಂದ ಮಾತನಾಡುವುದಿಲ್ಲ. ಆದರೆ ಈ ಘಟನೆಗೆ ಆಡಳಿತದಲ್ಲಿನ ಕೆಲವು ವೈಫ‌ಲ್ಯಗಳೂ ಕಾರಣವಾಗಿವೆ. ಆಡಳಿತ ಮನಸ್ಸು ಮಾಡಿದ್ದರೆ ಈ ದುರ್ಘ‌ಟನೆಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು. ಅಲ್ಲದೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕು.ಈ ಕುರಿತು ಸಂಸತ್ತಿನಲ್ಲೂ ಪ್ರಸ್ತಾವಿಸಲಾಗುವುದು ಎಂದರು.

90 ಹೇಳಿಕೆ ದಾಖಲು-ಎಸ್‌ಐಟಿ: ಕಾಲ್ತುಳಿತ ಘಟನೆ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ, ಈವರೆಗೆ 90 ಹೇಳಿಕೆಗಳನ್ನು ದಾಖಲಿಸಿದೆ. ಘಟನೆಗೆ ಕಾರ್ಯಕ್ರಮ ಆಯೋಜಕರೇ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದೆ. ಈ ಕುರಿತಂತೆ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದೂ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next