Advertisement

UP; ನೂಡಲ್ಸ್‌ ಜತೆ ಅನ್ನ ಸೇವಿಸಿ 10 ವರ್ಷದ ಬಾಲಕ ಸಾವು: 6 ಮಂದಿ ಅಸ್ವಸ್ಥ

11:46 PM May 12, 2024 | Team Udayavani |

ಪೀಲೀಭೀತ್‌: ನೂಡಲ್ಸ್‌ ಜತೆಗೆ ಅನ್ನವನ್ನು ಸೇವಿಸಿ 10 ವರ್ಷದ ಬಾಲಕ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪೀಲೀಭೀತ್‌ನಲ್ಲಿ ನಡೆದಿದೆ. ಜತೆಗೆ 6 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯೊಂದರಲ್ಲಿ ನೂಡಲ್ಸ್‌ ಹಾಗೂ ಅನ್ನ ಸಿದ್ಧಪಡಿಸಿ ಸೇವಿಸಿದ್ದರು.

Advertisement

ತಡರಾತ್ರಿಯಲ್ಲಿ ಎಲ್ಲರೂ ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಎಲ್ಲರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಬಾಲಕ ವಿವೇಕ್‌ನ ಆರೋಗ್ಯ ಸ್ಥಿತಿ ಕೈಮೀರಿತು. ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಆತನನ್ನು ಮತ್ತೂಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಆರೋಗ್ಯ ಇಲಾಖೆ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next