Advertisement

Exam: ಪರೀಕ್ಷೆ ಆರಂಭವಾದ ಒಂದೇ ಗಂಟೆಯಲ್ಲಿ ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

08:58 AM Mar 01, 2024 | Team Udayavani |

ಆಗ್ರಾ: ಆಗ್ರಾ: ಯುಪಿಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯ ಪೇಪರ್ ಸೋರಿಕೆ ವಿವಾದ ಇದೀಗ ಶಮನಗೊಂಡಿತ್ತು, ಇದೀಗ ಯುಪಿ ಬೋರ್ಡ್ ಪರೀಕ್ಷೆಯ ಪೇಪರ್ ಸೋರಿಕೆ ವಿಷಯ ಬೆಳಕಿಗೆ ಬಂದಿದೆ. ಗುರುವಾರ ಪರೀಕ್ಷೆ ಪ್ರಾರಂಭವಾದ ಒಂದು ಗಂಟೆಯಲ್ಲೆ ಆಗ್ರಾದ ಎರಡು ವಾಟ್ಸಾಪ್ ಗ್ರೂಪ್‌ಗಳಲ್ಲಿ 12ನೇ ತರಗತಿಯ ಜೀವಶಾಸ್ತ್ರ ಮತ್ತು ಗಣಿತ ಪತ್ರಿಕೆ ವೈರಲ್ ಆಗಲು ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ.

Advertisement

ಯುಪಿ ಬೋರ್ಡ್ 12ನೇ ತರಗತಿ ಪತ್ರಿಕೆ ಸೋರಿಕೆಯಾಗಿರುವ ಕುರಿತು ತನಿಖೆ ಆರಂಭವಾಗಿದೆ. ಪರೀಕ್ಷೆ ಪ್ರಾರಂಭವಾದ ಕೇವಲ ಒಂದು ಗಂಟೆಯಲ್ಲಿ ವಿನಯ್ ಚಹರ್ ಎಂಬ ವ್ಯಕ್ತಿಯಿಂದ ಈ ಪ್ರಶ್ನೆ ಪತ್ರಿಕೆಯನ್ನು ಎಲ್ಲಾ ಪ್ರಿನ್ಸಿಪಲ್ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾಗಿದೆ. ಗುಂಪಿನಲ್ಲಿ ಕಾಮೆಂಟ್‌ಗಳನ್ನು ಮಾಡಿದ ತಕ್ಷಣ, ಪ್ರಶ್ನಾ ಪತ್ರಿಕೆಯನ್ನು ತಕ್ಷಣವೇ ಗ್ರೂಪಿನಿಂದ ಅಳಿಸಲಾಗಿದೆ. ಮಧ್ಯಾಹ್ನ 3.13ಕ್ಕೆ ವಾಟ್ಸ್ ಆ್ಯಪ್ ನಲ್ಲಿ ಜೀವಶಾಸ್ತ್ರದ ಪೇಪರ್ ಲೀಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.

ರೋಜೌಲಿಯ ಅತಾರ್ ಸಿಂಗ್ ಇಂಟರ್ ಕಾಲೇಜಿನ ಕಂಪ್ಯೂಟರ್ ಆಪರೇಟರ್ ಇದನ್ನು ಸೋರಿಕೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ವಿನಯ್ ಚಹಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿನಯ್ ಅವರಲ್ಲದೆ, ಸ್ಟಾಟಿಕ್ ಮ್ಯಾಜಿಸ್ಟ್ರೇಟ್ ಕೇಂದ್ರದ ಆಡಳಿತಾಧಿಕಾರಿ ಮತ್ತು ಹೆಚ್ಚುವರಿ ಕೇಂದ್ರದ ಆಡಳಿತಾಧಿಕಾರಿ ವಿರುದ್ಧವೂ ದೂರು ದಾಖಲಾಗಿದೆ. ಜೀವಶಾಸ್ತ್ರ ಮತ್ತು ಗಣಿತದ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸಲು ಶಿಕ್ಷಣ ಇಲಾಖೆ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಈಗ ಘಟನೆಯ ತನಿಖೆ ನಡೆಸುತ್ತಿದ್ದಾರೆ, ಇದೆಲ್ಲ ಹೇಗೆ ಸಂಭವಿಸಿತು? ಜೀವಶಾಸ್ತ್ರ ಮತ್ತು ಗಣಿತದ ಪತ್ರಿಕೆ ಗುರುವಾರ ಮಧ್ಯಾಹ್ನ 2:00 ಗಂಟೆಗೆ ಪ್ರಾರಂಭವಾಯಿತು. ಪರೀಕ್ಷೆ ಪ್ರಾರಂಭವಾದ 1 ಗಂಟೆಯಲ್ಲೇ ಎರಡೂ ಪತ್ರಿಕೆಗಳನ್ನು ವಿನಯ್ ಚಾಹರ್ ಮೊಬೈಲ್ ಸಂಖ್ಯೆಯಿಂದ ಆಲ್ ಪ್ರಿನ್ಸಿಪಾಲ್ ಆಗ್ರಾ ಗ್ರೂಪ್‌ನಲ್ಲಿ ಗ್ರೂಪ್‌ಗೆ ಹಾಕಲಾಗಿತ್ತು ಎನ್ನಲಾಗಿದೆ.

ಬಯಾಲಜಿ ಪೇಪರ್‌ನ ಎಲ್ಲಾ ಪುಟಗಳನ್ನು ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾಗಿದೆ. ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾದ ಗಣಿತ ಪತ್ರಿಕೆಯ ಕೋಡ್ 324 FC ಆಗಿದೆ. ಈ ಎರಡು ಪೇಪರ್‌ಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ ಮೊಬೈಲ್ ನಂಬರ್‌ನಲ್ಲಿ ವಿನಯ್ ಚಹರ್ ಹೆಸರನ್ನು ಬರೆಯಲಾಗಿದೆ. ಪತ್ರಿಕೆ ಸೋರಿಕೆಯಾದ ಮಾಹಿತಿ ಬಳಿಕ ಶಿಕ್ಷಣ ಇಲಾಖೆಯಲ್ಲಿ ತಲ್ಲಣ ಉಂಟಾಗಿದ್ದು, ಶಿಕ್ಷಣ ಇಲಾಖೆಯಲ್ಲಿ ಪೇಪರ್ ಸೋರಿಕೆ ಕುರಿತು ತನಿಖೆಯ ಕಾರ್ಯ ಆರಂಭವಾಗಿದೆ.

Advertisement

ಡಾ. ಇಂದರ್ ಪ್ರಕಾಶ್ ಸಿಂಗ್ ಸೋಲಂಕಿ ಡಿಐಒಎಸ್ ಅವರ ದೂರಿನ ಮೇರೆಗೆ ಫತೇಪುರ್ ಸಿಕ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಗ್ರಾದ ಶಿಕ್ಷಣ ಉಪನಿರ್ದೇಶಕರು ತಿಳಿಸಿದ್ದಾರೆ. ತನಿಖೆಗಾಗಿ ಮೂವರು ಸದಸ್ಯರ ತಂಡ ರಚಿಸಲಾಗಿದೆ.

ಇದನ್ನೂ ಓದಿ: BJP ಮೊದಲ ಪಟ್ಟಿಗೆ ಸಿದ್ದತೆ; ಹಿರಿಯ ನಾಯಕರೊಂದಿಗೆ ಮೋದಿ-ಶಾ ಮಿಡ್ ನೈಟ್ ಮೀಟಿಂಗ್

Advertisement

Udayavani is now on Telegram. Click here to join our channel and stay updated with the latest news.

Next