Advertisement

ಮಳಖೇಡ ಮೂಲ ವೃಂದಾವನದ ಅಪಪ್ರಚಾರಕ್ಕೆ ಖಂಡನೆ

04:34 PM Jul 05, 2022 | Shwetha M |

ವಿಜಯಪುರ: ಮಳಖೇಡದಲ್ಲಿರುವ ಮೂಲ ವೃಂದಾವನದ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡುತ್ತಿರುವುವುದು ನೋವಿನ ಸಂಗತಿ. ಈ ರೀತಿ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಬ್ರಾಹ್ಮಣ ಸಮಾಜದ ಗುರುಗಳು, ಮುಖಂಡರು ಪ್ರತಿಭಟನಾ ರ್ಯಾಲಿ ನಡೆಸಿದರು.

Advertisement

ನಗರದ ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ| ಮಧ್ವಾಚಾರ್ಯ ಮೊಕಾಶಿ ಮಾತನಾಡಿ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಉತ್ತರಾದಿ ಮಠದ ಯತಿಗಳಾದ ಜಯತೀರ್ಥರ ಮೂಲ ವೃಂದಾವನವಿದೆ. 650 ವರ್ಷಗಳಿಂದಲೂ ಅನೇಕ ಸನ್ಯಾಸಿಗಳು, ಹರಿದಾಸರು ಇವರು ಮಳಖೇಡದಲ್ಲಿಯೇ ಇರುವರೆಂದು ಕೊಂಡಾಡಿದ್ದಾರೆ. ಅನೇಕ ಸರ್ಕಾರಿ ದಾಖಲೆಗಳೂ ಇದನ್ನೇ ಸಾರಿವೆ. ಆದರೆ ವಿನಾಕಾರಣ ಕೆಲವರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ ಎಂದರು.

ಪ್ರಸ್ತುತ ಕೆಲವರು ಈ ಮೂಲ ವೃಂದಾವನ ಮಳಖೇಡದಲ್ಲಿಲ್ಲ. ಆನೆಗುಂದಿ ತಾಲೂಕಿನ ನವ ವೃಂದಾವನದಲ್ಲಿರುವ ರಘುವರ್ಯ ತೀರ್ಥರ ವೃಂದಾವನವೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಚಾರ ಜಯತೀರ್ಥರ ಭಕ್ತ ವೃಂದಕ್ಕೆ ದೊಡ್ಡ ಆಘಾತವಾಗಿದೆ. ಈ ಬಗ್ಗೆ ಯಾವ ಗೊಂದಲವಿಲ್ಲದಿದ್ದರೂ ಸಹ ವಿನಾಕಾರಣ ಗೊಂದಲ ಸೃಷ್ಟಿಸಿ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಬೆಳವಣಿಗೆಗಳ ಮೇಲೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪಂ| ಸಂಜೀವಾಚಾರ್ಯ ಮಧಭಾವಿ ಮಾತನಾಡಿದರು. ಪ್ರಮುಖರಾದ ಆನಂದ ಜೋಶಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಅರವಿಂದ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ಸು ಧೀಂದ್ರ ಕುಲಕರ್ಣಿ, ರಾಜಶ್ರೀ ಕುಲಕರ್ಣಿ, ಸಂದೀಪ ಅರ್ಜುಣಗಿ, ರಘೋತ್ತಮ ಅರ್ಜುಣಗಿ, ಗೋವಿಂದ ಜೋಶಿ ಸೇರಿದಂತೆ ಇತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next