Advertisement

ಬಸವಣ್ಣನವರ ಭಾವಚಿತ್ರ ಅನಾವರಣ ಕಾಟಾಚಾರಕ್ಕೆ: ಬಸವಾಭಿಮಾನಿಗಳ ಆಕ್ರೋಶ

03:19 PM Feb 17, 2024 | Team Udayavani |

ಕಲಬುರಗಿ: ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ, ಭಾವಚಿತ್ರ ಅನಾವರಣ ಸಮಾರಂಭವೂ ಒಂದು ಬ್ಯಾನರ್ ಸಹ ಕಟ್ಟದಿರುವ  ಅವ್ಯಸ್ಥೆಯ ವಿರುದ್ಧ ಬಸವಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ‌

Advertisement

ನಗರದ ಡಾ.‌ಎಸ್.‌ಎಂ ಪಂಡಿತ ರಂಗ ಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ನಿಗದಿಯಾದ ಕಾರ್ಯಕ್ರಮಕ್ಕೆ ಒಂದುವರೆ ಗಂಟೆ ವಿಳಂಬವಾಗಿ ಆಗಮಿಸಿದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದಕ್ಕೆ  ಆಕ್ರೋಶಿತ ಬಸವ ಭಕ್ತರು ಕನಿಷ್ಠ ಸೌಜನ್ಯ, ಸಮಯಪ್ರಜ್ಞೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮ ಇರೋದೆ ಜಗಜ್ಯೋತಿ ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂಬ ಭಾವಚಿತ್ರ ಅನಾವರಣ. ಆದರೆ ಕಾರ್ಯಕ್ರಮದ ವೇದಿಕೆ ಮೇಲೆ ಕನಿಷ್ಠ ಒಂದು ಬ್ಯಾನರ್ ಕಟ್ಟಲು ಸಹ ಆಗುವುದಿಲ್ಲವೇ, ಇಡೀ ಸಮಾಜಕ್ಕೆ ಮಹತ್ವದ ಸಂದೇಶ ಸಾರಬೇಕಾದ ಕಾರ್ಯಕ್ರಮ ಕಾಟಾಚಾರಕ್ಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಬ್ಯಾನರ್ ಕಟ್ಟುವವರೆಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ವಾಗ್ವಾದ ನಡೆಸಿದರು. ಒಂದು ಗಂಟೆ ಕಾದು ಬ್ಯಾನರ್ ಪ್ರಿಂಟ್ ಹಾಕಿಸಿಕೊಂಡು ಬಂದ ನಂತರವೇ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಯಿತು.

ಬ್ಯಾನರ್ ಇಲ್ಲದೇ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಶಾಸಕ ಅಲ್ಲಮಪ್ರಭು ಪಾಟೀಲ್ ಎಷ್ಟೇ ಮನವೊಲಿಸಿದರು ಬಸವ ಭಕ್ತರು ಪಟ್ಟು ಸಡಿಲಿಸಲಿಲ್ಲ. ಇದರಿಂದ ಅನಿವಾರ್ಯಕ್ಕೆ ಒಳಗಾದ ಜಿಲ್ಲಾಡಳಿತ  ಬೃಹತ್ ಬ್ಯಾನರ್ ಪ್ರಿಂಟ್ ಹಾಕಿಸಿ ತಂದು ಅಳವಡಿಸಲಾಯಿತು.

Advertisement

ನಿಗದಿತ ಸಮಯಕ್ಕೆ ಬ್ಯಾನರ್  ಸುಮಾರು ಎರಡು ಗಂಟೆ ನಂತರ ಕಾರ್ಯಕ್ರಮ ಆರಂಭವಾಗಿ, ನಂತರ ಭಾವಚಿತ್ರ ಅನಾವರಣ ಗೊಳಿಸಲಾಯಿತು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆತಂದಿದ್ದು, ಅವರಿಗೆ ಕುಡಿಯಲು ನೀರು ಸಹ ವ್ಯವಸ್ಥೆ ಮಾಡಿರಲಿಲ್ಲ. ಮಕ್ಕಳ ಪರದಾಟ ಕಂಡು ಗಂಟೆ ನಂತರ ನೀರು ನೀಡಲಾಯಿತು. ಬೃಹತ್ ಸಮಾರಂಭದಲ್ಲಿ ಎರಡು ಸಣ್ಣ ಸೌಂಡ್ ಬಾಕ್ಸ್ ಗಳನ್ನು ಅಳವಡಿಸಿದ್ದು, ಕಂಡು ಬಂತು.

ವಿಶೇಷ ಉಪನ್ಯಾಸ ನೀಡದ ಮೀನಾಕ್ಷಿ ಬಾಳಿ ಅವರು, ಜಿಲ್ಲಾಡಳಿತದ ಅಚಾತುರ್ಯದಿಂದ ಕಾರ್ಯಕ್ರಮ ದಲ್ಲಿ ಎಡವಟ್ಟಾಗಿದೆ.‌ ಯಾವುದನ್ನು ಕಾಟಾಚಾರಕ್ಕೆ ಮಾಡಬೇಡಿ. ಮುಂದೆ ಹೀಗಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಲಿ‌ ಎಂದು ಅಸಮಾಧಾನ ಹೊರ ಹಾಕಿದರು. ಒಟ್ಟಾರೆ ಜಿಲ್ಲಾಡಳಿತ ಕಾರ್ಯಕ್ರಮ ಕ್ಕೆ ಯಾವುದೇ ಸಿದ್ದತೆ ಮಾಡಿಕೊಳ್ಳದಿರುವುದು ಕಂಡು ಬಂತು.‌

Advertisement

Udayavani is now on Telegram. Click here to join our channel and stay updated with the latest news.

Next