Advertisement

ಆನೆಗೊಂದಿ ಉತ್ಸವ ಲಾಂಛನ ಅನಾವರಣ

05:34 PM Dec 04, 2019 | Team Udayavani |

ಗಂಗಾವತಿ: ಆನೆಗೊಂದಿ ಉತ್ಸವವನ್ನು ಜನೋತ್ಸವವಾಗಿ ಆಚರಣೆ ಮಾಡಲು ಸ್ಥಳೀಯರ ಪೂರ್ಣ ಸಹಕಾರ ನೀಡಬೇಕು. ಆನೆಗೊಂದಿ ಉತ್ಸವವನ್ನು ಪ್ರತಿ ವರ್ಷ ಆಚರಣೆ ಮಾಡುವಂತೆ ಬಜೆಟ್‌ ನಲ್ಲಿ ಅಳವಡಿಸಲಾಗುತ್ತದೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ತಾಲೂಕಿನ ಆನೆಗೊಂದಿಯ ಶ್ರೀರಂಗನಾಥ ಸ್ವಾಮಿ ದೇಗುಲದಲ್ಲಿ ಮಂಗಳವಾರ ಆನೆಗೊಂದಿ ಉತ್ಸವ-2020ರ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಆನೆಗೊಂದಿ ಉತ್ಸವ ಇತಿಹಾಸವನ್ನು ಮೆಲುಕು ಹಾಕುವಉತ್ಸವವಾಗಿದೆ. ಸಂಸ್ಕೃತಿ ಪರಂಪರೆಯ ಮೂಲಕ ಭವಿಷ್ಯ ಕಂಡುಕೊಳ್ಳಲು ಉತ್ಸವಗಳು ಆಗತ್ಯವಾಗಿವೆ. ಆನೆಗೊಂದಿ ಮಂಡಲ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಹಿರಿಯರನ್ನು 21 ಉತ್ಸವ ಸಮಿತಿ ರಚನೆ ಮಾಡಲಾಗಿದೆ. ರಾಜಮನೆತನದ ರಾಮದೇವರಾಯಲು ಅವರ ಸಲಹೆ ಸೂಚನೆ ಪಡೆಯಲಾಗಿದೆ ಎಂದರು.

ಉತ್ಸವಕ್ಕೆ ಮುಖ್ಯಮಂತ್ರಿ ಸೇರಿ ಪ್ರಮುಖ ಸಚಿವರು, ಗಣ್ಯರು, ಸಿನೆಮಾ ನಟರನ್ನು ಆಹ್ವಾನಿಸಲಾಗಿದೆ. ಎರಡು ದಿನಗಳ ಉತ್ಸವಕ್ಕೆ ಎರಡು ವೇದಿಕೆ ನಿರ್ಮಿಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉತ್ಸವದ ಲಾಂಛನದಲ್ಲಿ ಕಿಷ್ಕಿಂದೆ ಅಂಜನಾದ್ರಿ, ಪಂಪಾ ಸರೋವರ, ಋಷಿಮುಖ ಪರ್ವತ ಸೇರಿ ಇನ್ನೂ ಸ್ಥಳೀಯ ಸ್ಥಳಗಳನ್ನು ಅಳವಡಿಸುವ ಕುರಿತು ಸಲಹೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಸಿದ್ದರಾಮಯ್ಯಸ್ವಾಮಿ, ಮುಖಂಡಎಚ್‌.ಸಿ. ಯಾದವ್‌, ಸಹಾಯಕ ಆಯುಕ್ತೆ ಸಿ.ಡಿ. ಗೀತಾ, ಕಿಷ್ಕಿಂದಾ ಟ್ರಸ್ಟ್‌ ಅಧ್ಯಕ್ಷೆ ಶಮಾ ಪವಾರ್‌, ತಾಪಂ ಸದಸ್ಯ ವೈ. ರಮೇಶ, ಗ್ರಾಪಂ ಅಧ್ಯಕ್ಷೆ ಅಂಜನಾದೇವಿ, ಹರಿಹರ ದೇವರಾಯಲು, ಪದ್ಮನಾಭರಾಜು, ಸುದರ್ಶನ್‌ ವರ್ಮಾ, ನರೇಂದ್ರವರ್ಮಾ, ರಾಜೇಶ್ವರಿ ಸುರೇಶ, ಹನುಮಂತಯ್ಯ, ಟಿ.ಜಿ. ಬಾಬು, ಕುಪ್ಪರಾಜು, ರಾಮಕೃಷ್ಣ ಇಲ್ಲೂರು, ತಾಪಂ ಇಒ ಡಾ|ಮೋಹನ್‌, ಪಿಡಿಒಗಳಾದ ಕೃಷ್ಣಪ್ಪ, ಬಸವರಾಜಗೌಡ, ಕನ್ನಡ ಪರ ಸಂಘಟನೆಗಳ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next