Advertisement

ಶ್ರೀಶೈಲ : 108 ಅಡಿ ಉದ್ದದ ಮಲ್ಲಯ್ಯನ ಧ್ವಜ ಅನಾವರಣ

10:24 PM Mar 29, 2021 | Team Udayavani |

ಅಮೀನಗಡ: ಶ್ರೀಶೈಲ ಪಾದಯಾತ್ರೆಯ ಜಾಗೃತಿ ಮೂಡಿಸಲು ಪಟ್ಟಣದ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆಯಲ್ಲಿ 108 ಅಡಿ ಉದ್ದದ ಮಲ್ಲಯ್ಯನ ಧ್ವಜದ ಮೆರವಣಿಗೆ ನಡೆಸಿದರು.

Advertisement

ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಹೊರಟ 108 ಅಡಿ ಉದ್ದದ ಮಲ್ಲಯ್ಯನ ಧ್ವಜದ ಮೆರವಣಿಗೆ ಎಂ.ಜಿ.ರೋಡ,ಬಾಲಾಜಿ ದೇವಸ್ಥಾನ, ಗಚ್ಚಿನಮಠ,ಪಟ್ಟಣ ಪಂಚಾಯತ,ಬೆಳಗಾವಿ-ರಾಯಚೂರ ಹೆದ್ದಾರಿಯ ಪ್ರಮುಖ ರಸ್ತೆ ಮಾರ್ಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯಲ್ಲಿ ಭಕ್ತರು ರಸ್ತೆಯುದ್ದಕ್ಕೂ ಮಲ್ಲಯ್ಯನ ಧ್ವಜಕ್ಕೆ 150 ಕೆಜಿ ಹೂ ಪುಷ್ಪಾರ್ಚನೆ ಮಾಡಿದರು ಹಾಗೂ ಧಾರ್ಮಿಕ ಘೋಷಣೆಗಳು ಮೋಳಗಿದವು.

ಕಾರ್ಯಕ್ರಮದ ರೂವಾರಿ ಉದ್ಯಮಿ ಮಂಜುನಾಥ ಬಂಡಿ ಹಾಗೂ ಅವರ ಬಳಗ ಶ್ರೀಶೈಲ ಪಾದಯಾತ್ರೆಯಲ್ಲಿ ಅತಿದೊಡ್ಡ ಮಲ್ಲಯ್ಯನ ಧ್ವಜ ಮೆರವಣಿಗೆ ಮಾಡುವ ಮೂಲಕ ಪಾದಯಾತ್ರೆಯ ಜಾಗೃತಿ ಮೂಡಿಸಿದನ್ನು ಕಂಡು ಇಡೀ ಅಮೀನಗಡ ನಗರವೇ ಮೆಚ್ಚುಗೆ ವ್ಯಕ್ತಪಡಿಸಿತು. ಮೆರವಣಿಗೆಯಲ್ಲಿ ಬೆಂಗಳೂರಿನ ಅಮ್ಮಾ ಸಂಸ್ಥೆ ಹಾಗೂ ಪಟ್ಟಣದ ಶ್ರೀಶೈಲ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ :ಕೋವಿಡ್ ಜಾಗೃತಿ : ಶ್ರೀಶೈಲ ಪಾದಯಾತ್ರೆಯಲ್ಲಿ ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣ

ಇದಕ್ಕೂ ಮುನ್ನಾ 108 ಅಡಿ ಉದ್ದದ ಮಲ್ಲಯ್ಯನ ಧ್ವಜ ಅನಾವರಣ ಹಾಗೂ ಮಲ್ಲಯ್ಯನ ಧ್ವಜದ ಮೆರವಣಿಗೆಯನ್ನು ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ,ಶ್ರೀಶೈಲ ಜಗದ್ಗುರು ಪೀಠದ ಶಾಖಾಮಠ ಸಂಡೂರ ತಾಲೂಕಿನ ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಚಾಲನೆ ನೀಡಿದರು.

Advertisement

ಈ ವೇಳೆ ಉದ್ಯಮಿ ಮಂಜುನಾಥ ಬಂಡಿ ಮಾತನಾಡಿ, ಮಾರ್ಚ್ ತಿಂಗಳು ಮಲ್ಲಯ್ಯನ ಪಾದಾಯತ್ರೆ ಮಾಡುವ ಭಕ್ತರಿಗೆ ಶ್ರೀಶೈಲ ಮಲ್ಲಿಕಾರ್ಜುನದೇ ಧ್ಯಾನ ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಗೆಳೆಯರಿಗೆ ಕರೆದುಕೊಂಡು ಪಟ್ಟಣದ ಶ್ರೀಶೈಲ ಭಕ್ತರೊಂದಿಗೆ ಶ್ರೀಶೈಲ ಮಲ್ಲಯ್ಯನ ಪಾದಾಯತ್ರೆ ಮಾಡುತ್ತೇವೆ.ಆದರೆ ಈ ಭಾರಿ ಪಾದಯಾತ್ರೆಯಲ್ಲಿ ವಿಶೇಷವಾಗಿ 108 ಅಡಿ ಉದ್ದದ ಮಲ್ಲಯ್ಯನ ಧ್ವಜ ಸಿದ್ದಪಡಿಸಿ ಪಾದಾಯತ್ರೆಯ ಜಾಗೃತಿ ಮೂಡಿಸಬೇಕು ಮತ್ತು ಅತಿ ದೊಡ್ಡ ಮಾಸ್ಕ ಸಿದ್ದಪಡಿಸಿ ಕೊರೊನಾ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

ಮೆರವಣಿಗೆಯಲ್ಲಿ ಬೆಂಗಳೂರ ಅಮ್ಮ ಪೌಂಡೇಶನ ಮತ್ತು ಪಟ್ಟಣದ ನೂರಾರು ಶ್ರೀಶೈಲ ಭಕ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next