Advertisement
ವಹಿವಾಟುಗಳಲ್ಲಿ ಬದಲಾವಣೆಕಾರ್ಡ್ದಾರರು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್ ಗಳನ್ನು ಬಳಸದೆ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್ ಬಳಸಿ ವಹಿವಾಟು ನಡೆಸಲು ಮತ್ತು ಚಿಪ್ ಕಾರ್ಡ್ ಅಥವಾ ಕಾಂಟ್ಯಾಕ್ಟೆಸ್ ವಹಿವಾಟುಗಳಲ್ಲಿ ತಮಗೆ ಬೇಕಿರು ವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.
ಈ ವರೆಗೆ ಯಾವುದೇ ಆನ್‌ಲೈನ್ ವಹಿವಾಟು ನಡೆಸದೆಯೇ ಇದ್ದಲ್ಲಿ ಅಂತಹ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ನಾಳೆಯಿಂದ ಬ್ಲಾಕ್ ಆಗಲಿವೆ. ಒಮ್ಮೆ ಬ್ಲಾಕ್ ಆದರೆ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ನಗದುರಹಿತ ವಹಿವಾಟು ಪುನರಾ ರಂಭಿಸಲು ಮತ್ತೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ. ಯಾರ ಕಾರ್ಡ್ ಬ್ಲಾಕ್ ?
ಇದು ಎಲ್ಲರಿಗೂ ಅನ್ವಯವಾಗಲಿದೆ. ಬ್ಯಾಂಕ್‌ನಿಂದ ಕಾರ್ಡು ಸ್ವೀಕರಿಸಿ ಆನ್‌ಲೈನ್ ವ್ಯವಹಾ ರಗಳಿಗೆ ಬಳಸದೇ ಇದ್ದವರಿಗೆ ಇದು ಅನ್ವಯವಾಗುತ್ತದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆಯಾಗುತ್ತಿರುವ ಸ್ವರೂಪದಲ್ಲಿ ಬದಲಾವಣೆ ತರಲು ಉದ್ಧೇಶಿಸ ಲಾಗಿದೆ. ಕಾರ್ಡ್ ವ್ಯವಹಾ ರಗಳಲ್ಲಿ ಭದ್ರತೆ ಯನ್ನು ಹೆಚ್ಚಿಸಲು ಮತ್ತು ಬಳಕೆದಾರ ಸ್ನೇಹಿಯಾಗುವಂತೆ ಮಾಡಲು ಆರ್‌ಬಿಐ ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.
Related Articles
ಎಟಿಎಂಗಳು ಮತ್ತು ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ (ಪಿಒಎಸ್) ಮಾತ್ರ ಬಳಸಲು ಬಳಕೆದಾರರಿಗೆ ಅವಕಾಶ ಕೊಡುವ ರೀತಿಯಲ್ಲಿ ಎಲ್ಲ ರೀತಿಯ ಕಾರ್ಡ್‌ಗಳನ್ನು ರೂಪಿಸಬೇಕು. ಕಾರ್ಡ್ ಬಳಸದೆ ವಹಿವಾಟು (ದೇಶಿ ಮತ್ತು ಅಂತಾರಾರಾಷ್ಟ್ರೀಯ), ಕಾರ್ಡ್ ಬಳಸಿ ವಹಿವಾಟು, ಮತ್ತು ಚಿಪ್ ಕಾರ್ಡ್ ಅಥವಾ ಕಾಂಟ್ಯಾಕ್ಟೆಲೆಸ್ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ವನ್ನು ಗ್ರಾಹಕರಿಗೆ ನೀಡಬೇಕು ಎಂದು ಆರ್‌ಬಿಐ ಹೇಳಿದೆ.
Advertisement
ಗ್ರಾಹಕರಿಗೆ ಹೊಸ ಆಯ್ಕೆಕಾರ್ಡ್ಗಳನ್ನು ಸಕ್ರಿಯ ಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್, ಎಟಿಎಂ, ಆನ್‌ಲೈನ್, ಚಿಪ್ ಕಾರ್ಡ್ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ (ಆನ್) ಮತ್ತು ಸ್ಥಗಿತ (ಆಫ್) ಮಾಡುವ ಅವಕಾಶವನ್ನು ಗ್ರಾಹಕನಿಗೆ ನೀಡಲಾಗಿದೆ. ಸಹಾಯವಾಣಿ ಸೌಲಭ್ಯ
ಮೊಬೈಲ್ ಅಪ್ಲಿಕೇಷನ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂಗಳು, ಐವಿಆರ್ ಅಥವ ಇಂಟರಾಕ್ಟೀವ್ ವಾಯ್ಸ… ರೆಸ್ಪಾನ್ಸ್ ಮೊದಲಾದವುಗಳನ್ನು ನಿವಾರಿಸಲು 24ಗಿ7 ಸಹಾಯವಾಣಿ ದೊರೆಯಲಿದೆ. ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳಾದರೆ ಬಳಕೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮೂಲಕ ಮಾಹಿತಿ ದೊರೆಯಲಿದೆ. ಮಾರ್ಚ್ 16ರಿಂದ
ನೂತನ ನಿಯಮ ಮಾರ್ಚ್ 16ರಿಂದ ಜಾರಿಗೆ ಬರಲಿವೆ. ದೇಶದಲ್ಲಿ 80 ಕೋಟಿ ಡೆಬಿಟ್ ಕಾರ್ಡ್ ಮತ್ತು 5 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆ ಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯ ವಾಗಲಿದೆ. ಇತ್ತೀಚೆಗೆ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ, ಮೌಲ್ಯ ಹೆಚ್ಚಾಗಿದೆ.