Advertisement

ಬಗೆಹರಿಯುತ್ತಿಲ್ಲ ಕಸ ವಿಲೇವಾರಿ ಸಮಸ್ಯೆ

08:20 AM Aug 02, 2019 | Suhan S |

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಇನ್ನೂ ಬಗೆಹರಿಯುತ್ತಿಲ್ಲ. ಕಳೆದ ಒಂದು ವಾರದಿಂದ ಪ್ರತಿ ವಾರ್ಡ್‌ನಲ್ಲಿ ನಿತ್ಯ ಒಂದು ಲೋಡ್‌ ಕಸ ವಿಲೇವಾರಿಯಾಗದೆ ಅಲ್ಲಲ್ಲಿ ಕಸದ ರಾಶಿಗಳು ನಿರ್ಮಾಣವಾಗಿದೆ. ವಿಲೇವಾರಿಯಾಗದೆ ಉಳಿದಿರುವ ಕಸ ಎರಡು ದಿನಗಳಲ್ಲಿ ಸಂಸ್ಕರಣಾ ಘಟಕಗಳಿಗೆ ಸಾಗಿಸುವುದಾಗಿ ಹೇಳಿದ್ದ ಬಿಬಿಎಂಪಿ ಹೇಳಿದಷ್ಟೇ ವೇಗವಾಗಿ ಕೆಲಸ ಮಾಡುತ್ತಿಲ್ಲ.

Advertisement

ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ನಿರ್ಮಾಣವಾಗಿದ್ದ ಕಸದ ರಾಶಿಗಳು ಹಾಗೆಯೇ ಇವೆ. ದಿನದಿಂದ ದಿನಕ್ಕೆ ಕಸದ ರಾಶಿ ಮಾತ್ರ ಬೆಳೆಯುತ್ತಿದೆ.ಆದರೆ ಇದರ ವಿಲೇವಾರಿ ಮಾತ್ರ ಕುಂಟಿತವಾಗಿ ಸಾಗುತ್ತಿದೆ.ಕೆಆರ್‌ ಮಾರ್ಕೆಟ್ ನಲ್ಲಿ ನಿರ್ಮಾಣವಾಗಿರುವ ಕಸ ರಾಶಿ ಈ ವರೆಗೆ ಖಾಲಿ ಮಾಡಿಲ್ಲ.ಇದರಿಂದಾಗಿ ಮಾರುಕಟ್ಟೆಗೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶೇಷಾದ್ರಿಪುರಂ, ಮಲ್ಲೇಶ್ವರಂ, ನಾಯಂಡ ಹಳ್ಳಿ, ಯಶವಂತಪುರ, ಶಿವಾಜಿನಗರ, ಕಲಾಸಿಪಾಳ್ಯ, ಹಲಸೂರು, ಇಂದಿರಾನಗರ, ವಿಜಯನಗರ, ಜಯನಗರ,ಬಿಟಿಎಂ ಲೇಔಟ್ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಕಸದ ರಾಶಿ ಹೆಗೆಯೇ ಇದ್ದು,ಪಾಲಿಕೆ ಮಾತ್ರ ವಿಲೇವಾರಿ ಬಗ್ಗೆ ಯಾವುದೇ ಆಸಕ್ತಿ ವಹಿಸುತಿಲ್ಲ.ಇದರಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ ನಿವಾಸಿಗಳು.

ಇನ್ನು ಎರಡು ದಿನಗಳಲ್ಲಿ ನಗರದ ಕಸದ ರಾಶಿಗಳನ್ನು ಖಾಲಿ ಮಾಡುವುದಾಗಿ ಹೇಳಿದ್ದ ಪಾಲಿಕೆ ಇನ್ನಾದರು ತನ್ನ ಕೆಲಸದ ವೇಗವನ್ನು ಹೆಚ್ಚಿಸಿಲ್ಲ.ಇನ್ನೆರಡು ದಿನ ಇದೇ ರೀತಿ ಮುಂದುವರೆದರೆ ನಗರದ ಎಲ್ಲಾ ಮೂಲೆಗಳಲ್ಲಿ ಬ್ಲಾಕ್‌ ಸ್ಪಾಟ್ ಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ ಎನ್ನುತಿದ್ದಾರೆ ಪರಿಸರ ತಜ್ಞ ಹರೀಶ್‌.

ಪ್ರತಿನಿತ್ಯ ನಗರದಲ್ಲಿ 4500 ಟನ್‌ ಕಸ ಉತ್ಪತ್ತಿಯಾಗುತ್ತಿದ್ದು,ಇದರಲ್ಲಿ 2500-3000 ಟನ್‌ ಮಾತ್ರ ಈಗ ವಿಲೇವಾರಿ ಆಗುತ್ತಿದೆ.ಕಳೆದ ವಾರದಿಂದ ಪ್ರತಿ ವಾರ್ಡ್‌ ನಲ್ಲಿ ನಿತ್ಯ ಒಂದು ಕಾಂಪ್ಯಾಕ್‌ ಕಸ ಹಾಗೆಯೇ ಉಳಿಯುತ್ತಿದೆ.ಈ ರೀತಿ ಉಳಿದಿರುವ ಕಸ ಸರಿಸುಮಾರು 10ಸಾವಿರ ಟನ್‌ ಗೂ ಅಧಿಕವಾಗಿದೆ ಎಂದು ಅಭಿಪ್ರಾಯ ಪಡುತಿದ್ದಾರೆ ನಗರ ತಜ್ಞ ಶ್ರೀಪಾದ್‌ ಹರಿ.

Advertisement

ನಗರದ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳ್ಳಳ್ಳಿ ಕ್ವಾರಿ ಸಂಸ್ಕರಣಾ ಘಟಕ ಸಿದ್ಧವಾಗಿದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ನಗರ ಸಂಪೂರ್ಣವಾಗಿ ಕಸದಿಂದ ಮುಕ್ತಿ ಹೊಂದಲಿದೆ. ● ಗಂಗಾಂಬಿಕೆ, ಬಿಬಿಎಂಪಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next