Advertisement

ಅವೈಜ್ಞಾನಿಕವಾಗಿ ರಸ್ತೆ , ಚರಂಡಿ ನಿರ್ಮಾಣ

01:00 PM Jan 25, 2022 | Team Udayavani |

ಹಾಸನ: ನಗರದ ಸಾಲಗಾಮೆ ರಸ್ತೆ, ಆಕಾಶವಾಣಿ ಸಮೀಪ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್‌ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಆರೋಪಿಸಿದರು.

Advertisement

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಸಾಲಗಾಮೆ ರಸ್ತೆಗೆಹೊಂದಿಕೊಂಡಂತಿರುವ ಬಾಗಡೇರ ಕೊಪ್ಪಲು ಗ್ರಾಮದ ಸರ್ವೆ ನಂ.176ರ ಭೂಮಿಯನ್ನು ಶಾಸಕಪ್ರೀತಂಗೌಡ ಅವರು ಕಬಳಿಸಲು ಪೂರಕವಾಗಿ ರಸ್ತೆವಿಸ್ತರಣೆ ಹಾಗೂ ಚರಂಡಿ ನಿರ್ಮಾಣ ನಡೆಯುತ್ತಿದೆ ಎಂದು ದೂರಿದರು.

ಜಾಗ ಕಬಳಿಸಲು ಯತ್ನ: ಈ ಹಿಂದೆ ಇದ್ದ ರಸ್ತೆ ನಕ್ಷೆಯನ್ನು ಬದಲಿಸಿ 50 ಅಡಿ ಇರಬೇಕಾದ ರಸ್ತೆಯನ್ನು 30 ಅಡಿಗೆ ಸೀಮಿತಗೊಳಿಸಿ ನಿರ್ಮಿಸಲಾಗಿದೆ. ಆಕಾಶವಾಣಿ ಕೇಂದ್ರದ ಮುಂಭಾಗದಿಂದ 50 ಅಡಿರಸ್ತೆಯಿದೆ. ಆದರೆ, ಸಿದ್ಧಿ ವಿನಾಯಕ ದೇವಸ್ಥಾನದಿಂದ ಕಾರ್ಪೋರೇಷನ್‌ ಬ್ಯಾಂಕ್‌ವರೆಗೆ ರಸ್ತೆಯನ್ನು 30 ಅಡಿಗೆ ಸೀಮಿತಗೊಳಿಸಲಾಗಿದೆ. ಹಾಗೆಯೇ ಚರಂಡಿಯನ್ನೂ 3 ಅಡಿಯಿಂದ ಒಂದು ಅಡಿಗೆ ವಿಸ್ತಾರಕ್ಕೆ ನಿರ್ಮಿಸಲಾಗಿದೆ. ಸಿದ್ಧಿ ವಿನಾಯಕ ದೇವಸ್ಥಾನದ ನಿವೇಶನದಲ್ಲಿ ಸಮುದಾಯ ಭವನಹಾಗೂ ಪಾರ್ಕ್‌ ನಿರ್ಮಾಣಕ್ಕೆ ಗುರ್ತಿಸಿರುವ ಜಾಗವನ್ನು ಶಾಸಕ ಪ್ರೀತಂಗೌಡ ಅವರು ಕಬಳಿಸಲು ಯತ್ನಿಸಿದ್ದರು. ಈ ಜಾಗವನ್ನು ಸಾರ್ವಜನಿಕ ಬಳಕೆಗೆ ಉಳಿಸಲು ತಮ್ಮ ತಂದೆ, ಮಾಜಿ ಶಾಸಕ ದಿ.ಎಚ್‌.ಎಸ್‌.

ಪ್ರಕಾಶ್‌ ಅವರು ನ್ಯಾಯಾಲಯದ ಮೆಟ್ಟಿಲು ಏರಿ ಜಾಗ ಕಬಳಿಸದಂತೆ ತಡೆಯಾಜ್ಞೆ ತಂದಿದ್ದರು. ಆನಂತರ ಶಾಸಕರು ತಮ್ಮ ಹಿಂಬಾಲಕರ ಹೆಸರಿಗೆದೇವಸ್ಥಾನದ ಆಸ್ತಿಯನ್ನು ಖಾತೆ ಮಾಡಿಸಿಕೊಂಡಿದ್ದು,ದೇವಾಲಯದ ಮುಂಭಾಗದಲ್ಲಿರುವ ವಿಶಾಲಮೈದಾನವನ್ನೂ ಕಬಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

ಯೋಜನೆಯಂತೆ ರಸ್ತೆ, ಚರಂಡಿ ನಿರ್ಮಿಸಿ: ಶಾಲಾ – ಕಾಲೇಜು ವಿದ್ಯಾರ್ಥಿಗಳು, ಬಾಗಡೇರು ಕೊಪ್ಪಲು,ದ್ಯಾವಪ್ಪನ ಕೊಪ್ಪಲು ನಿವಾಸಿಗಳು ಸಂಚರಿಸುವ ಈ ರಸ್ತೆಯನ್ನು ವಿಶಾಲವಾಗಿ ನಿರ್ಮಿಸಬೇಕಾಗಿತ್ತು.ಆದರೆ, ಲೋಕೋಪಯೋಗಿ ಇಲಾಖೆಎಂಜಿನಿಯರುಗಳು ಶಾಸಕರ ಒತ್ತಡಕ್ಕೆ ಮಣಿದು ರಸ್ತೆಮತ್ತು ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣಮಾಡಿದ್ದಾರೆ. ಮೂಲ ಯೋಜನೆಯಂತೆ ರಸ್ತೆ ಮತ್ತುಚರಂಡಿಯನ್ನು ನಿರ್ಮಿಸಬೇಕು. ಇಲ್ಲದಿದ್ದರೆಲೋಕೋಪಯೋಗಿ ಇಲಾಖೆ ಎಂಜಿನಿಯವರುಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಸ್ಥಳಕ್ಕೆ ಎಂಜಿನಿಯರ್‌ಗಳು ಬಂದಿಲ್ಲ: ಸ್ಥಳೀಯ ಮುಖಂಡ ಮಂಜುನಾಥ್‌ ಮಾತನಾಡಿ, ಒಟ್ಟು 30 ಮೀಟರ್‌ ರಸ್ತೆಯಲ್ಲಿ ರಸ್ತೆ ವಿಭಜಕದ ನಂತರಒಂದೊಂದು ರಸ್ತೆಗೆ 15 ಮೀಟರ್‌ ಬರುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಯಿಂದಲೂ 15 ಮೀಟರ್‌ನಂತೆಯೇ ನಕ್ಷೆತಯಾರಿಸಲಾಗಿದೆ. ಕಾಮಗಾರಿ ಮಾಡುವಾಗಲೇ ನಾನು 15 ಮೀಟರ್‌ ರಸ್ತೆ ಮತ್ತು ಚರಂಡಿ ನಿರ್ಮಿಸಿಎಂದು ಹೇಳಿದ್ದರೂ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು 6 ಮೀಟರ್‌ ರಸ್ತೆ ನಿರ್ಮಿಸಿಎಂದು ಸೂಚಿಸಿದ್ದಾರೆ ಎಂದು ಗುತ್ತಿಗೆದಾರರು ಹೇಳಿದರು.  ಎಂಜಿನಿಯರ್‌ ಸ್ಥಳಕ್ಕೆ ಕರೆಸುವಂತೆ ಹೇಳಿದರೂ ಎಂಜಿನಿಯರುಗಳು ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಮಾತುಕತೆ ಬಂದಿಲ್ಲ: ರಸ್ತೆ ಮತ್ತು ಚರಂಡಿ ಅವೈಜ್ಞಾನಿಕ ನಿರ್ಮಾಣಕ್ಕೆ ಲೋಕೋಪಯೋಗಿ ಎಂಜಿಜಿನಿಯರ್‌ಗಳೇ ಹೊಣೆಗಾರರು, ಸಿದ್ದಿ ವಿನಾಯಕ ಗಣಪತಿ ದೇವಸ್ಥಾನದ ಜಾಗವು

ಹೈಕೋರ್ಟಿನಲ್ಲಿದ್ದು, ಮಕ್ಕಳ ಆಟದ ಮೈದಾನಕ್ಕೆ ಬಳಸಿಕೊಳ್ಳಲು ಆದೇಶವಾಗಿದೆ. ಈ ಬಗ್ಗೆ ರಾಜೀಮಾಡಿಕೊಳ್ಳೊಣ ಎಂದು ಶಾಸಕ ಪ್ರೀತಂಗೌಡ ಅವರುಕೂಡ ನನ್ನ ಬಳಿ ಹೇಳಿದ್ದರೂ, ಇದುವರೆಗೂ ಅವರುಯಾವ ಮಾತುಕತೆ ಬಂದಿಲ್ಲ ಎಂದು ದೂರಿದರು.ಈಗಲೂ ನನ್ನ ಬಳಿ ಇರುವ ದಾಖಲೆಗಳಿದ್ದು,ಲೋಕಾಯುಕ್ತಕ್ಕೆ ಹೋಗುತ್ತೇನೆ ಎಂದು ಹೇಳಿದರು.ಸ್ವರೂಪ್‌ ಅವರು ಸ್ಥಳ ಪರಿಶೀಲನೆ ನಡೆಸುವಸಂದರ್ಭದಲ್ಲಿ ಬಾಗೇಡರ ಕೊಪ್ಪಲು ಮತ್ತಿತರಬಡಾವಣೆಗಳ ನಾಗರೀಕರೂ ಹಾಜರಿದ್ದು,ಲೋಕೋಪಯೋಗಿ ಇಲಾಖೆಯುವರುಅವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ನಿರ್ಮಿಸಿರುವುದನ್ನು ಖಂಡಿಸಿದರು.

ಸಿದ್ಧಿ ವಿನಾಯಕ ದೇವಸ್ಥಾನದನಿವೇಶನದಲ್ಲಿ ಸಮುದಾಯ ಭವನಹಾಗೂ ಪಾರ್ಕ್‌ ನಿರ್ಮಾಣಕ್ಕೆ ಗುರ್ತಿಸಿರುವ ಜಾಗವನ್ನು ಶಾಸಕರುಕಬಳಿಸಲು ಯತ್ನಿಸಿದ್ದರು. ಈ ಜಾಗವನ್ನುಸಾರ್ವಜನಿಕ ಬಳಕೆಗೆ ಉಳಿಸಲು ಮಾಜಿಶಾಸಕ ದಿ.ಎಚ್‌.ಎಸ್‌.ಪ್ರಕಾಶ್‌ನ್ಯಾಯಾಲಯದ ಮೆಟ್ಟಿಲು ಏರಿ ಜಾಗಕಬಳಿಸದಂತೆ ತಡೆಯಾಜ್ಞೆ ತಂದಿದ್ದರು. -ಎಚ್‌.ಪಿ.ಸ್ವರೂಪ್‌, ಜಿಪಂ ಮಾಜಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next