Advertisement

ಅವೈಜ್ಞಾನಿಕ ಒಳಚರಂಡಿ ಕಾಮಗಾರಿ: ದೂರು

12:37 AM Aug 04, 2019 | Sriram |

ಕುಂದಾಪುರ: ಪುರಸಭಾ ವ್ಯಾಪ್ತಿಯ ಮದ್ದುಗುಡ್ಡೆ ವಾರ್ಡ್‌ನ ವೆಂಕಟರಮಣ ಶಾಲೆಯ ಸಮೀಪ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದಾಗಿ ಮನೆಯೊಂದರ ಬಾವಿಯ ನೀರು ದುರ್ವಾಸನೆ ಹಾಗೂ ನೊರೆಯುತವಾಗಿದೆ. ಇದನ್ನು ಸರಿಪಡಿಸಬೇಕೆಂದು ಕುಂದಾಪುರದ ಎಸಿಗೆ ಮನವಿ ಸಲ್ಲಿಸಲಾಗಿದೆ.

Advertisement

ಮದ್ದುಗುಡ್ಡೆ ವಾರ್ಡಿನ ಗೋಪಾಲಕೃಷ್ಣ ಕೆ. ಅವರು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್‌. ಮಧುಕೇಶ್ವರ್‌ ಅವರಿಗೆ ಮನವಿ ಸಲ್ಲಿಸಿದ್ದು, ಮನೆಯ ಬಾವಿಗೆ ಅಸಮರ್ಪಕ ಕಾಮಗಾರಿಯಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ನಿಂತಿದೆ. ಈ ಚರಂಡಿಯ ಪೂರ್ವದಲ್ಲಿ ಫ್ಲ್ಯಾಟ್ ಒಂದರ ಟಾಯ್ಲೆಟ್ ಪಿಟ್ನಿಂದ ಕೊಳಚೆ ನೀರು ಹೊರಗೆ ಬರುತ್ತಿದೆ. ಇದರಿಂದ ಬಾವಿಯ ನೀರು ದುರ್ವಾಸನೆಯಿಂದ ಕೂಡಿದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ. ಕೊಳಚೆ ನೀರು ನಿಂತ ಜಾಗ ಈಗ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಈ ಬಗ್ಗೆ ಪುರಸಭೆಗೆ ಅನೇಕ ಬಾರಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next