Advertisement

ಅವೈಜ್ಞಾನಿಕತೆಯಿಂದ ಭೂಮಿ ಜವಳು

01:24 PM Apr 06, 2019 | keerthan |

ಜಮಖಂಡಿ: ಅವೈಜ್ಞಾನಿಕ ಪದ್ಧತಿಯಲ್ಲಿ ಅತಿಯಾದ ನೀರು, ರಾಸಾಯನಿಕ ಬಳಕೆಯಿಂದ ಪ್ರಕೃತಿ ನೀಡಿರುವ ಅಮೂಲ್ಯ ಭೂಮಿಯನ್ನು ನಾವುಗಳು ಕಳೆದುಕೊಳ್ಳುತ್ತಿದ್ದು, ಇದರಿಂದ ಸವಳು-ಜವಳು ಹೆಚ್ಚಾಗುತ್ತಿರುವದು ಆತಂಕಕಾರಿ ವಿಷಯವಾಗಿದೆ.ರೈತರು ಬೆಳೆಗಳಿಗೆ ಅನುಗುಣವಾಗಿ ನೀರು, ರಾಸಾಯನಿಕ ಗೊಬ್ಬರಬಳಸಬೇಕು ಎಂದು ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ನಗರದ ಹೊರವಲಯಲ್ಲಿ ಶುಕ್ರವಾರಹಮ್ಮಿಕೊಂಡಿದ್ದ ಬಸವೇಶ್ವರ ಅಮರಾಯಿ ಜಾನುವಾರು ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಶೇ.70ರಷ್ಟು ಕೃಷಿ ನಂಬಿದ್ದು, ಅದರ ಮೇಲೆ ಅವಲಂಬನೆ ಆಗಿದ್ದಾರೆ. ವಿಶ್ವ ತಂತ್ರಜ್ಞಾನದಲ್ಲಿ ಮುಂದುವರಿಯಲು ಕೃಷಿ ಕ್ಷೇತ್ರ ಮೂಲ ಮೆಟ್ಟಿಲು ಆಗಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚಾಗಿದ್ದು, ಇಸ್ರೆಲ್‌, ಚೀನಾ
ಕೃಷಿಯಲ್ಲಿ ಮಹತ್ತರ ಸಾಧನೆ ಮಾಡುತ್ತಿವೆ. ರೈತ ನೀಡುವ ಅನ್ನ ಮೇಲೆ ದೇಶ ಬದುಕುಳಿದಿದೆ. ಭೂಮಿ ನಾಶವಾದರೆ ಜಗತ್ತು ಉಳಿಯಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನದಲ್ಲಿ ದೇಶದ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.

ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ದೇಶದಲ್ಲಿ ಯಂತ್ರಗಳ ಬದಲಾಗಿ ಎತ್ತುಗಳ ಬಳಕೆ ಹೆಚ್ಚಾಗಬೇಕು. ಸಣ್ಣ ರೈತರಲ್ಲಿ ಜಾಗೃತಿ ಮೂಡುತ್ತಿರುವುದು ಸಂತಸ ಸಂಗತಿಯಾಗಿದೆ. ಮಹಾರಾಜರ ಕಾಲದಿಂದಲೂ
ಅಮರಾಯಿ ಜಾನುವಾರು ಜಾತ್ರೆ ವೈಭವದಿಂದ ಆಚರಿಸಲಾಗುತ್ತಿದೆ.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಾತ್ರೆ ರದ್ದಾಗುವ ಸಾಧ್ಯತೆ ಇದ್ದರೂ
ಜಮಖಂಡಿ ನಗರದ ಸಮಸ್ತ ಹಿರಿಯರು ಜವಾಬ್ದಾರಿ ಹೊತ್ತು ಜಾತ್ರೆ ಆಚರಣೆ ದಾರಿಯನ್ನು ಸುಗಮಗೊಳಿಸಿದ್ದಾರೆ ಎಂದರು. ಜಾತ್ರಾ ಕಮಿಟಿ ಅಧ್ಯಕ್ಷ ಮಲ್ಲಪ್ಪ ಉಳ್ಳಾಗಡ್ಡಿ, ಉಪಾಧ್ಯಕ್ಷ ನಂದೆಪ್ಪ ನ್ಯಾಮಗೌಡ, ಹನಮಂತ ಮರನೂರ, ದುಂಡಪ್ಪ ಹಿಪ್ಪರಗಿ, ಸಿದ್ರಾಮ ಜಂಬಗಿ, ವಿರುಪಾಕ್ಷಿ ಹಲ್ಯಾಳ, ಶ್ರೀಶೈಲ ತೆಲಬಕ್ಕನವರ, ಪ್ರಭು ಅರಕೇರಿ ಇದ್ದರು.

Advertisement

ಬಸವೇಶ್ವರ ಅಮರಾಯಿ ಜಾನುವಾರು ಜಾತ್ರೆಯಲ್ಲಿ ಏರ್ಪಡಿಸಿರುವ ಯಾವುದೇ ಸ್ಪರ್ಧೆಗಳು ರದ್ದು ಆಗಿರುವುದಿಲ್ಲ. ಏ.6ರಂದು ಬೆಳಿಗ್ಗೆ 11 ಗಂಟೆಗೆ ಜಾತ್ರಾ ಮೈದಾನದಲ್ಲಿ ತೆರಬಂಡಿ ಸ್ಪರ್ಧೆ, ಏ.7ರಂದು ಬೆಳಿಗ್ಗೆ 9ಗಂಟೆಗೆ ಎತ್ತಿನಗಾಡಿ ಓಟದ ಸ್ಪರ್ಧೆ, ಮಧ್ಯಾಹ್ನ 12ಗಂಟೆಗೆ ಜೋಡೆತ್ತಿನ ಕಲ್ಲು ಜಗ್ಗುವ ಸ್ಪರ್ಧೆ ನಡೆಯಲಿದೆ.
ಮಲ್ಲಪ್ಪ ಉಳ್ಳಾಗಡ್ಡಿ,

Advertisement

Udayavani is now on Telegram. Click here to join our channel and stay updated with the latest news.

Next