Advertisement

ದೇಶದಲ್ಲಿ ಅಶಾಂತಿ ವಾತಾವರಣ: ವಿನಯ ಕುಮಾರ್‌ ಸೊರಕೆ

12:54 AM Feb 18, 2020 | Sriram |

ಉಡುಪಿ: ಕೇಂದ್ರ ಸರಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದವರು ಪಡೆಯುತ್ತಿರುವ ಮೀಸಲಾತಿಯನ್ನು ತೆಗೆಯಲು ಯತ್ನಿಸುತ್ತಿದೆ. ಸವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡದೆ ಸಂವಿಧಾನಕ್ಕೆ ಅಡ್ಡಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ದೇಶದಲ್ಲಿ ಎಂದೂ ಕೂಡ ಕಾಣದ ಅಶಾಂತಿಯ ವಾತಾವರಣ ಕಂಡುಬರುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರಕಾರದ ನಿಲುವಿನ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್‌ ಹಾಗೂ ಮಹಿಳಾ ಕಾಂಗ್ರೆಸ್‌ ವತಿಯಿಂದ ಸೋಮವಾರ ಅಜ್ಜರಕಾಡು ಹುತಾತ್ಮ ಚೌಕದ ಮುಂಭಾಗ ನಡೆದ ಬೃಹತ್‌ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಸಿಎಎ, ಎನ್‌ಆರ್‌ಸಿ ಬಗ್ಗೆ ಹೋರಾ ಟಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಸುಮ್ಮನಿದೆ. ಕೇಂದ್ರ ಗೃಹಸಚಿವರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಧರ್ಮ, ಭಾಷೆ, ಸಂಸ್ಕೃತಿ ಮೂಲಕ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ರೈತರ, ನಿರುದ್ಯೋಗ ಸಮಸ್ಯೆಗಳಿಗೆ ಕೇಂದ್ರ ಸರಕಾರದ ಬಳಿ ಯಾವುದೇ ಉತ್ತರವಿಲ್ಲ ಎಂದರು.

ಬೆಲೆ ಏರಿಕೆ
ಗ್ಯಾಸ್‌ ಬೆಲೆಯನ್ನು ಒಂದೇ ಬಾರಿ 140 ರೂ.ಗಳವರೆಗೆ ಏರಿಸಲಾಗಿದೆ. ಈ ಬಗ್ಗೆ ಆಯ್ಕೆಯಾದ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸಚಿವರ ಮಕ್ಕಳು ಮಾಡಿದ ಆಕ್ಸಿಡೆಂಟ್‌ನಂತಹ ಪ್ರಕರಣಗಳಿಗೆ ಯಾವುದೇ ಶಿಕ್ಷೆ ನೀಡುತ್ತಿಲ್ಲ. ಅಧಿಕಾರಿಗಳು ಕೂಡ ಅವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜನರಿಗೆ ಅನ್ಯಾಯ
ಕಾಂಗ್ರೆಸ್‌ ಮುಖಂಡ ಎಂ.ಎ.ಗಫ‌ೂರ್‌ ಮಾತ ನಾಡಿ, ಇಂದಿರಾ ಗಾಂಧಿ, ಜವಾಹರಲಾಲ್‌ ನೆಹರೂ ಅವರ ಕಾಲದಲ್ಲಿ ದೇಶದ ಜನತೆಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಆದರೆ ಬಿಜೆಪಿ ಸರಕಾರ ತೈಲಬೆಲೆ ಸಹಿತ ಅಗತ್ಯ ವಸ್ತುಗಳ ಬೆಲೆಏರಿಕೆ ಮಾಡುವ ಮೂಲಕ ಜನರಿಗೆ ಅನ್ಯಾಯವೆಸಗುತ್ತಿದೆ. ಈ ಬಗ್ಗೆ ಧ್ವನಿ ಎತ್ತುವ ವರನ್ನು ದೇಶದ್ರೋಹಿಗಳು ಎನ್ನಲಾಗುತ್ತಿದೆ ಎಂದರು.

Advertisement

ಪೊಳ್ಳು ಭರವಸೆ ಮೂಲಕ ವಂಚನೆ
ಮಹಿಳಾ ಕಾಂಗ್ರೆಸ್‌ನ ವೆರೋನಿಕಾ ಕರ್ನೇಲಿಯೋ ಮಾತನಾಡಿ, ಕೇಂದ್ರ ಬಿಜೆಪಿಯ ಎರಡು ಅವಧಿಯ ಆಡಳಿತದಲ್ಲಿ ಆರ್ಥಿಕತೆ ದುರ್ಬಲ ಸ್ಥಿತಿಗೆ ತಲುಪಿದೆ. ಚುನಾವಣೆ ಸಮಯ ದಲ್ಲಿ ಪೊಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ವಂಚಿಸಲಾಗಿದೆ. ಇದರ ವಿರುದ್ದ ದೇಶದ ಎಲ್ಲ ಜನರು ಪ್ರತಿಭಟಿಸಬೇಕಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ನಾಯಕರಾದ ಬಿ.ನರಸಿಂಹ ಮೂರ್ತಿ, ಭಾಸ್ಕರ ರಾವ್‌ ಕಿದಿಯೂರು, ಉಪೇಂದ್ರ ಮೆಂಡನ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಹರೀಶ್‌ ಶೆಟ್ಟಿ ಪಾಂಗಾಳ, ಅಣ್ಣಯ್ಯ ಸೇರಿಗಾರ್‌, ಸತೀಶ್‌ ಅಮೀನ್‌ ಪಡುಕರೆ, ರೋಶನಿ ಒಲಿವೆರಾ, ಗೀತಾ ವಾಗೆÛ, ಡಾ| ಸುನೀತಾ ಶೆಟ್ಟಿ, ಪ್ರಖ್ಯಾತ್‌ ಶೆಟ್ಟಿ, ರಮೇಶ್‌ ಕಾಂಚನ್‌, ಕೇಶವ ಕೋಟ್ಯಾನ್‌, ಅನಂತ ನಾಯಕ್‌, ವಿಲಿಯಂ ಮಾರ್ಟಿಸ್‌, ಲೂವಿಸ್‌ ಲೋಬೋ, ಗಣೇಶ್‌ ನೆರ್ಗಿ, ಇಸ್ಮಾಯಿಲ್‌ ಆತ್ರಾಡಿ, ಹರೀಶ್‌ ಶೆಟ್ಟಿ, ಹಬೀಬ್‌ ಆಲಿ, ತಾರಾನಾಥ ಕಿದಿಯೂರು, ಜ್ಯೋತಿ ಹೆಬ್ಟಾರ್‌, ಯತೀಶ್‌ ಕರ್ಕೇರ, ರಾಜೇಶ್‌ ನಾಯಕ್‌, ರವೀನ್‌ಚಂದ್ರ ಶೆಟ್ಟಿ, ಆಕಾಶ್‌ ರಾವ್‌, ನವೀನ್‌ ಚಂದ್ರ, ಮಹಾಬಲ ಕುಂದರ್‌, ಪ್ರಕಾಶ್‌, ನಾರಾಯಣ ಕುಂದರ್‌, ನೀರೆ ಕೃಷ್ಣ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ವಿಶ್ವಾಸ್‌ ಅಮೀನ್‌, ಶಬೀರ್‌ ಅಹಮ್ಮದ್‌, ಹರೀಶ್‌ ಕಿಣಿ, ವಾಸುದೇವ, ಗಣೇಶ್‌ರಾಜ್‌ ಸರಳೇಬೆಟ್ಟು, ಉಮೇಶ್‌ ಶೆಟ್ಟಿ, ಯುವರಾಜ್‌, ಯತೀಶ್‌ ಕರ್ಕೇರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದಿವಾಳಿಯತ್ತ ಕೇಂದ್ರ ಸರಕಾರ
ನೆರೆಸಂತ್ರಸ್ತರಿಗೆ 6 ತಿಂಗಳು ಕಳೆದರೂ ಪರಿಹಾರ ನೀಡದೆ ವಂಚಿಸಲಾಗುತ್ತಿದೆ. ಕೇಂದ್ರ ಸರಕಾರ ದಿಂದ ರಾಜ್ಯಸರಕಾರಕ್ಕೆ ಬರಬೇಕಾದ ಪರಿಹಾರದ ಸುಮಾರು 31 ಸಾವಿರ ಕೋ.ರೂ. ಅನುದಾನ ಬಾಕಿಯಿದೆ. ಕೇಂದ್ರ ಸರಕಾರ ದಿವಾಳಿಯತ್ತ ಸಾಗುತ್ತಿದ್ದು, ಪರಿಹಾರ ನೀಡಲು ಹಣವಿಲ್ಲದಂತಾಗಿದೆ. ಎಲ್‌ಐಸಿ ಮುಳುಗಡೆಯಾಗಿದೆ. ಬಿಎಸ್‌ಎನ್‌ಎಲ್‌ ಶಿಥಿಲಗೊಂಡಿದೆ. ಭಾರತೀಯ ಸಂಸ್ಥೆಗಳನ್ನು ಶ್ರೀಮಂತರಿಗೆ ವಹಿಸಿಕೊಡಲಾಗುತ್ತಿದೆೆ ಎಂದು ಸೊರಕೆ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next