Advertisement

ರಾಜ್ಯದಲ್ಲಿ ನಿವಾರಣೆಯಾಗಿಲ್ಲ ಅಸಮಾನತೆ

10:56 AM Dec 31, 2017 | |

ಕಲಬುರಗಿ: ರಾಜ್ಯದಲ್ಲಿ ಈ ವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಅಸಮಾನತೆ ನಿವಾರಣೆ ಹೆಸರಲ್ಲಿ ಅಧಿಕಾರಕ್ಕೆ ಬಂದಿವೆ. ಆದರೆ ಈವರೆಗೂ ಅಸಮಾನತೆ ನಿವಾರಣೆಯಾಗಿಲ್ಲ ಎಂದು ಬೆಂಗಳೂರಿನ ಬಹುಜನ ಚಳವಳಿ ಮುಖಂಡ ಪ್ರೊ| ಹರಿರಾಮ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಬಹುಜನ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ಕೋರೆಗಾಂವ ವಿಜಯೋತ್ಸವಕ್ಕೆ 200 ವರ್ಷಗಳು-ಮುಂದೇನು ಕುರಿತ ವಿಭಾಗ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಶೋಷಿತ ಸಮುದಾಯ ಎಚ್ಚೆತ್ತುಕೊಳ್ಳಬೇಕು, ಎಲ್ಲರೂ ಸಂಘಟಿತರಾಗಬೇಕು. ಚುನಾವಣೆ ಸಂದರ್ಭದಲ್ಲಿ ಅಸಮಾನತೆ ಸೃಷ್ಟಿಸುವ ರಾಜಕೀಯ ಪಕ್ಷಗಳಿಗೆ ಅವುಗಳ ಸ್ಥಾನ ತೋರಿಸಬೇಕು. ಆಗ ಮಾತ್ರ ಕೋರೆಗಾಂವ ವೀರರಿಗೆ ಶೋಷಿತ ಸಮುದಾಯ ನಿಜವಾಗಿ ನಮನ ಸಲ್ಲಿಸದಂತಾಗುವುದು ಎಂದು ಹೇಳಿದರು.

ಶೋಷಿತರಿಗೆ ಅಧಿಕಾರ ಸಿಗಬೇಕೆಂಬ ಉದ್ದೇಶವನ್ನು ಭಾರತರತ್ನ ಡಾ| ಅಂಬೇಡ್ಕರ್‌ ಹೊಂದಿದ್ದರು. ಆದರೂ ರಾಜ್ಯ ಹಾಗೂ ದೇಶದ ರಾಜಕೀಯ ಪಕ್ಷಗಳು ಶೋಷಿತರ ಹೆಸರಲ್ಲಿ ಆಯ್ಕೆಯಾಗುತ್ತಿದ್ದಾರೆ, ಆದರೆ ಶೋಷಿತರಿಗೆ ಅಧಿಕಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

200 ವರ್ಷಗಳ ಹಿಂದೆ ಪೇಶ್ವೆಗಳ ಹುಟ್ಟಡಗಿಸಿದ ಮಹರ್‌ ಸೈನಿಕರಿಗೆ ನಿಜವಾದ ನಮನ ಸಲ್ಲಿಸಲು ಶೋಷಿತ ಸಮುದಾಯ ಮತದಾನ ಅಸ್ತ್ರವನ್ನು ಬಳಸುವ ಮೂಲಕ ಶೋಷಿತ ವರ್ಗದವರ ಹಿತವನ್ನು ಕಾಪಾಡುವಂತವರು ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದರು.

Advertisement

ನಿವೃತ್ತ ಅಧಿಕಾರಿ ಬಿ.ಬಿ.ರಾಂಪೂರೆ ಅವರು ಛತ್ರಪತಿ ಶಾಹು ಮಹಾರಾಜ , ಮಹಾತ್ಮಾ ಜ್ಯೋತಿಭಾಫುಲೆ ಹಾಗೂ ಡಾ| ಬಾಬಾಸಾಹೇಬ್‌ ಅಂಬೇಡ್ಕರರ ಭಾವಚಿತ್ರಗಳಿಗೆ ಪುಷ್ಪಗುತ್ಛ ಸಲ್ಲಿಸುವ ಮೂಲಕ ಶ್ರದ್ದಾನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ಪರ್ಶ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ರಾಹುಲ್‌ ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ, ರಾಜ್ಯ ಕಾರ್ಯದರ್ಶಿ ಹಣಮಂತ ಬೋಧನಕರ, ಜಿಲ್ಲಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ, ಶಿಕ್ಷಕ ಮನೋಜಕುಮಾರ ಭಾಗೇಕರ, ಉಪನ್ಯಾಸಕ ಡಾ| ರವೀಂದ್ರನಾಥ ಹೊಸ್ಮನಿ, ಶ್ರೀನಿವಾಸ, ಆಳಂದ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಶಿವಮೂರ್ತಿ ಶೀಲವಂತ ಆಗಮಿಸಿದ್ದರು.

ಕೆ.ಮಹೇಶ ಸ್ವಾಗತಿಸಿದರು. ನಿವೃತ್ತ ತಹಶೀಲ್ದಾರ್‌ ಕೆ.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀದರನ ಪ್ರದೀಪ ನಾಟೀಕಾರ, ದಿಲೀಪಚಂದ, ಯಾದಗಿರಿಯ ಪರಶುರಾಮ ಚಂಪೂ, ಸಿದ್ದಣ್ಣ ಪೂಜಾರಿ, ರಾಯಚೂರಿನ ಕೋರೆನಾಲ, ಧರ್ಮರಾಜ ಗೋನಾಳ, ಬಳ್ಳಾರಿಯ ನಾಗಪ್ಪ ಬೆನಕಲ್‌, ದೇವಿಂದ್ರಪ್ಪ ನಾಗನಳ್ಳಿ, ಕಲಬುರಗಿಯ ಅನಿಲ ಟೆಂಗಳಿ, ಪೃಥ್ವಿರಾಜ ಬೋಧನ ಹಾಗೂ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next