ಮಂಡ್ಯ: 2018-19ನೇ ಸಾಲಿನಲ್ಲಿ ಸಾಲ ಬಾಧೆಯಿಂದ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 33 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾ ಗಿದ್ದು, ಇದರಲ್ಲಿ 29 ಪ್ರಕರಣಗಳನ್ನು ನಿರ್ಣಯಿಸಲಾಗಿದೆ. 14 ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. 7 ಪ್ರಕರಣಗಳನ್ನು ತಿರಸ್ಕರಿಸಿದ್ದು, 8 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ.
ಮದ್ದೂರು ತಾಲೂಕಿನಲ್ಲಿ 12 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 4 ಪ್ರಕರಣಗಳನ್ನು ತಿರಸ್ಕರಿಸಿ 8 ಪ್ರಕರಣಗಳನ್ನು ಪರಿಹಾರಕ್ಕೆ ಒಪ್ಪಿದೆ. 3 ಪ್ರಕರಣಗಳಿಗೆ ಪರಿಹಾರ ವಿತರಿಸಿದ್ದು, 5 ಪ್ರಕರಣಗಳಿಗೆ ಪರಿಹಾರ ನೀಡಬೇಕಿದೆ.
ಮಳವಳ್ಳಿ ತಾಲೂಕಿನಲ್ಲಿ ವರದಿಯಾದ 8 ಆತ್ಮಹತ್ಯೆ ಪ್ರಕರಣಗಳಲ್ಲಿ 1 ಪ್ರಕರಣವನ್ನು ತಿರಸ್ಕರಿಸಿದೆ. ಪರಿಹಾರಕ್ಕೆ ಒಪ್ಪಲಾದ 4 ಪ್ರಕರಣಗಳಲ್ಲಿ ಎಲ್ಲರಿಗೂ ಪರಿಹಾರ ನೀಡಿದೆ. ಪಾಂಡವಪುರ ತಾಲೂಕಿನಲ್ಲಿ 7 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು 2 ಪ್ರಕರ ಣಗಳನ್ನು ತಿರಸ್ಕರಿಸಲಾಗಿದೆ. 5 ಪ್ರಕರಣ ಗಳನ್ನು ಪರಿಹಾರಕ್ಕೆ ಒಪ್ಪಿದ್ದು 3 ಪ್ರಕರಣಗಳಿಗೆ ಪರಿಹಾರ ನೀಡಿ, 2 ಪ್ರಕರಣಗಳಿಗೆ ಪರಿಹಾರ ನೀಡಬೇಕಿದೆ.
ಮಂಡ್ಯ ತಾಲೂಕಿನಲ್ಲಿ 3 ಆತ್ಮಹತ್ಯೆ ಪ್ರಕರಣಗಳು ನಡೆದು 2 ಪ್ರಕರಣಗಳನ್ನು ಪರಿಹಾರಕ್ಕೆ ಒಪ್ಪಿ ಈಗಾಗಲೇ ವಿತರಿಸಲಾಗಿದೆ. ಒಂದು ಪ್ರಕರಣದಲ್ಲಿ ಪರಿಹಾರ ಬಾಕಿ ಉಳಿಸಿಕೊಳ್ಳಲಾಗಿದೆ. ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನಲ್ಲಿ ತಲಾ ಒಂದೊಂದು ರೈತ ಆತ್ಮಹತ್ಯೆ ಪ್ರಕರಣಗಳು ಜರುಗಿದ್ದು, ಮೂರು ಪ್ರಕರಣಗಳನ್ನು ಇತ್ಯರ್ಥಪಡಿಸಿ ಪರಿಹಾರ ವಿತರಿಸಲಾಗಿದೆ.