Advertisement
ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಬಾರಿ ಚಿನ್ನ, ಬಿಡಬ್ಲ್ಯುಎಫ್ನ ಸೂಪರ್ 1000 ಕೂಟದಲ್ಲಿ ಪ್ರಶಸ್ತಿ, ವಿಶ್ವದ ನಂಬರ್ ವನ್ ಸ್ಥಾನದಲ್ಲಿ ವಿರಾಜಮಾನ ಆಗಿರುವುದು ಅವರ ಈ ವರ್ಷದ ಉತ್ಕೃಷ್ಟ ನಿರ್ವಹಣೆಗೆ ಸಾಕ್ಷಿಯಾಗಿದೆ. ಅವರು ಈ ಹಿಂದೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಅಲ್ಲದೇ ಭಾರತ ಥಾಮಸ್ ಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ನೆರವಾಗಿದ್ದರು. ಅವರ ಈ ವರ್ಷದ ಸಾಧನೆಯ ಹಿನ್ನೋಟ ಇಲ್ಲಿದೆ.
Related Articles
Advertisement
ಪ್ಯಾರಿಸ್‌ನಲ್ಲೂ ಪದಕ ನಿರೀಕ್ಷೆವರ್ಷದುದ್ದಕ್ಕೂ ಅಮೋಘ ನಿರ್ವಹಣೆ ನೀಡಿರುವ 23ರ ಸಾತ್ವಿಕ್-26ನ ಹರೆಯದ ಚಿರಾಗ್ ಅವರ ಮುಂದಿನ ದೊಡ್ಡ ಗುರಿ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸುವುದು ಆಗಿದೆ. ಈ ದಾರಿಯಲ್ಲಿ ಅವರಿಗೆ ತಡೆಯಾಗಿರುವ ಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು ಮುಂದಿನ ಕೂಟಗಳಲ್ಲಿ ಉರುಳಿಸಲು ಸಾತ್ವಿಕ್-ಚಿರಾಗ್ ಯೋಜನೆ ರೂಪಿಸುತ್ತಿದ್ದಾರೆ. ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಭಾರತೀಯ ಬ್ಯಾಡ್ಮಿಂಟನ್ ರಂಗದ ಅಪ್ರತಿಮ ಡಬಲ್ಸ್ ಆಟಗಾರರಾಗಿ ಮೆರೆಯುತ್ತಿದ್ದಾರೆ. 2023ರ ವರ್ಷದಲ್ಲಿ ಹಲವು ಅಮೋಘ ಪ್ರದರ್ಶನಗಳನ್ನು ನೀಡಿ ದಾಖಲೆಗೈದ ಅವರು ಸಾಧನೆಯ ಉನ್ನತ ಶಿಖರವನ್ನೇರಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಅವರ ಮುಂದಿನ ಗುರಿಯೂ ಆಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಬಾರಿ ಚಿನ್ನ, ಬಿಡಬ್ಲ್ಯುಎಫ್ನ ಸೂಪರ್ 1000 ಕೂಟದಲ್ಲಿ ಪ್ರಶಸ್ತಿ, ವಿಶ್ವದ ನಂಬರ್ ವನ್ ಸ್ಥಾನದಲ್ಲಿ ವಿರಾಜಮಾನ ಆಗಿರುವುದು ಅವರ ಈ ವರ್ಷದ ಉತ್ಕೃಷ್ಟ ನಿರ್ವಹಣೆಗೆ ಸಾಕ್ಷಿಯಾಗಿದೆ. ಅವರು ಈ ಹಿಂದೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಅಲ್ಲದೇ ಭಾರತ ಥಾಮಸ್ ಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ನೆರವಾಗಿದ್ದರು. ಅವರ ಈ ವರ್ಷದ ಸಾಧನೆಯ ಹಿನ್ನೋಟ ಇಲ್ಲಿದೆ. ವರ್ಷಾರಂಭದಲ್ಲಿ ಗಾಯದ ಸಮಸ್ಯೆಯಿಂದಾಗಿ ಈ ಜೋಡಿ ಇಂಡಿಯನ್ ಓಪನ್ ಸಹಿತ ಕೆಲವು ಕೂಟಗಳಿಂದ ಹಿಂದೆ ಸರಿದಿತ್ತು. ಮಾರ್ಚ್‌ನಲ್ಲಿ ಸ್ಪರ್ಧಾಕಣಕ್ಕೆ ಇಳಿದ ಸಾತ್ವಿಕ್-ಚಿರಾಗ್ ಸ್ವಿಸ್ ಓಪನ್ ಸೂಪರ್ 300 ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಗೆಲುವಿನ ನಾಗಲೋಟ ಮುಂದುವರಿಸಿದರು. ಎಪ್ರಿಲ್‌ನಲ್ಲಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್, ಜೂನ್‌ನಲ್ಲಿ ಇಂಡೋನೇಷ್ಯಾ ಓಪನ್ ಸೂಪರ್ 1000, ಅಕ್ಟೋಬರ್‌ನಲ್ಲಿ ಏಷ್ಯನ್ ಗೇಮ್ಸ್‌ನ ಡಬಲ್ಸ್‌ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದರಲ್ಲದೇ ವಿಶ್ವದ ನಂಬರ್ ವನ್ ಪಟ್ಟವನ್ನು ಅಲಂಕರಿಸಿ ಮೆರೆದಾಡಿದರು. ಇಂಡೋನೇಷ್ಯಾ ಓಪನ್ ಸೂಪರ್ 1000 ಮತ್ತು ಏಷ್ಯನ್ ಗೇಮ್ಸ್‌ನ ಚಿನ್ನ ಗೆದ್ದಿರುವುದು ಅವರ ಕ್ರೀಡಾ ಬಾಳ್ವೆಯ ಅತ್ಯುನ್ನತ ಸಾಧನೆಯಾಗಿದೆ. ಮಾತ್ರ ವಲ್ಲದೇ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರರೆಂಬ ಗೌರವವನ್ನು ಸಂಪಾದಿ ಸಿದ್ದಾರೆ. ಸೂಪರ್ 1000 ಕೂಟದ ಫೈನಲ್‌ನಲ್ಲಿ ಅವರು ಸೋಲಿಸಿದ್ದು ಬೇರೆ ಯಾರನ್ನೂ ಅಲ್ಲ, ಸತತ ಎಂಟು ಬಾರಿ ತಮ್ಮನ್ನು ಸೋಲಿದ್ದ ಆರನ್ ಚಿಯ ಮತ್ತು ಸೋಹ್ ವೂಯಿ ಯಿಕ್ ಅವರನ್ನು ಅದ್ಭುತ ರೀತಿಯಲ್ಲಿ ಸದೆಬಡಿದು ಅಪ್ರತಿಮ ಸಾಹಸ ಮೆರೆದರು. ಏಷ್ಯನ್ ಗೇಮ್ಸ್‌ನ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅವರ ಇನ್ನೊಂದು ಬಲುದೊಡ್ಡ ಸಾಧನೆಯಾಗಿದೆ. ಇದು ಬ್ಯಾಡ್ಮಿಂಟನ್‌ನಲ್ಲಿ ಭಾರತ ಗೆದ್ದ ಚೊಚjಲ ಚಿನ್ನದ ಪದಕವೂ ಆಗಿದೆ. ಈ ಸಾಧನೆಯಿಂದ ಅವರು ಮುಂದೆ ವಿಶ್ವದ ನಂಬರ್ ವನ್ ಪಟ್ಟವನ್ನೂ ಅಲಂಕರಿಸಿ ಸಂಭ್ರಮಿಸಿದರು. ಅವರ ಈ ಗೆಲುವಿನ ಅಭಿಯಾನ ವರ್ಷಾಂತ್ಯವರೆಗೂ ಸಾಗಿತ್ತು. ನವೆಂಬರ್ ಅಂತ್ಯದಲ್ಲಿ ನಡೆದ ಚೀನ ಮಾಸ್ಟರ್ 750 ಕೂಟದಲ್ಲೂ ಅಮೋಘ ನಿರ್ವಹಣೆ ಮುಂದುವರಿಸಿದ್ದ ಅವರು ಫೈನಲ್‌ನಲ್ಲಿ ಮಾತ್ರ ಎಡವಿದರು. ವಿಶ್ವದ ನಂಬರ್ ವನ್ ಚೀನದ ಲಿಯಾಂಗ್ ವೈ ಕೆಂಗ್ ಮತ್ತು ವಾಂಗ್ ಚಾಂಗ್ ಅವರೆದುರು ಕೂದಲೆಳೆಯ ಅಂತರದಲ್ಲಿ ಸೋತು ತಮ್ಮ ಸತತ 8 ಫೈನಲ್ ಗೆಲುವಿನ ಅಭಿಯಾನಕ್ಕೆ ಅಂತ್ಯ ಹಾಡಿದ್ದರು. 2019ರ ಅಕ್ಟೋಬರ್ ಬಳಿಕ ಅವರು ಡಬಲ್ಸ್ ಫೈನಲ್‌ನಲ್ಲಿ ಸೋತದ್ದು ಇದೇ ಕೂಟದಲ್ಲಿ ಆಗಿತ್ತು. ಇದರಲ್ಲಿ ಐದು ಗೆಲವು ಈ ವರ್ಷವೇ ದಾಖಲಾಗಿತ್ತು. ಪ್ಯಾರಿಸ್‌ನಲ್ಲೂ ಪದಕ ನಿರೀಕ್ಷೆ
ವರ್ಷದುದ್ದಕ್ಕೂ ಅಮೋಘ ನಿರ್ವಹಣೆ ನೀಡಿರುವ 23ರ ಸಾತ್ವಿಕ್-26ನ ಹರೆಯದ ಚಿರಾಗ್ ಅವರ ಮುಂದಿನ ದೊಡ್ಡ ಗುರಿ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸುವುದು ಆಗಿದೆ. ಈ ದಾರಿಯಲ್ಲಿ ಅವರಿಗೆ ತಡೆಯಾಗಿರುವ ಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು ಮುಂದಿನ ಕೂಟಗಳಲ್ಲಿ ಉರುಳಿಸಲು ಸಾತ್ವಿಕ್-ಚಿರಾಗ್ ಯೋಜನೆ ರೂಪಿಸುತ್ತಿದ್ದಾರೆ. ಅದ್ಭುತ ವರ್ಷ
ಈ ವರ್ಷ ನಮ್ಮ ಪಾಲಿಗೆ ಅದ್ಭುತವಾಗಿ ಸಾಗಿದೆ. ನಾವು ಅಲೋಚನೆ ಮಾಡಿದ ಎಲ್ಲ ಗುರಿಗಳನ್ನು ಸಾಧಿಸಿದ ಸಂತೋಷ ನಮಗಿದೆ. ಏಷ್ಯನ್ ಗೇಮ್ಸ್ ನಲ್ಲಿ ಪದಕ ಮತ್ತು ವಿಶ್ವದ 2 ಅಥವಾ 3ನೇ ರ್‍ಯಾಂಕ್‌ಗೆ ಏರುವುದು ನಮ್ಮ ಗುರಿಯಾಗಿತ್ತು. ಅದಕ್ಕಿಂತಲೂ ಉತ್ಕೃಷ್ಟ ಸಾಧನೆಯನ್ನು ನಾವು ಮಾಡಿದ ಖುಷಿಯಿದೆ. ಮುಂಬರುವ ದಿನಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಸಾತ್ವಿಕ್-ಚಿರಾಗ್ ಹೇಳಿದ್ದಾರೆ. ಶಂಕರನಾರಾಯಣ ಪಿ.