Advertisement

ಅಸಂಘಟಿತ ಕಾರ್ಮಿಕರು ಸರ್ಕಾರ ಸೌಲಭ್ಯ ಪಡೆಯಿರಿ

12:51 PM Jan 05, 2021 | Team Udayavani |

ಕಲಬುರಗಿ: ಅಸಂಘಟಿತ ಕಾರ್ಮಿಕರುಒಂದಾಗಿ ಸರ್ಕಾರದ ಸೌಲಭ್ಯಗಳನ್ನುಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ. ಹೇಳಿದರು.

Advertisement

ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ಕಲಾಮಂಡಳದಲ್ಲಿ ರಾಜ್ಯ ಟೈಲರ್ ಮತ್ತು ಸಹಾಯಕರ ಫೆಡರೇಷನ್‌ ಎ.ಐ.ಟಿ.ಯು.ಸಿವತಿಯಿಂದ ಹಮ್ಮಿಕೊಳ್ಳಲಾದ ಟೈಲ ರ್ಸ್ಗಳ ಪ್ರಥಮ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನು ಸೋಲು ಎಂಬ ರೋಗ ಕೊಲ್ಲಲು ಆತ್ಮವಿಶ್ವಾಸಮತ್ತು ಸತತ ಪರಿಶ್ರಮದ ಮೆಟ್ಟಿಲು ಹತ್ತಿದಾಮಾತ್ರ ಸಾಧನೆ ಶಿಖರವೇರಬಹುದು. ಟೈಲರ್‌ ಗಳ ವೃತ್ತಿ ಬಹಳ ಪವಿತ್ರವಾದುದು. ಪ್ರತಿಯೊಬ್ಬ ವ್ಯಕ್ತಿ ಚೆನ್ನಾಗಿ ಬಟ್ಟೆ ಧರಿಸಕೊಂಡು ಉತ್ತಮನಾಗಿ ಕಾಣುತ್ತಿದ್ದರೆ ಅದಕ್ಕೆ ಟೈಲ ರ್ಸ್ ಗಳೆ ಕಾರಣಿಕರ್ತರು.ಈ ವೃತ್ತಿ ಮಾಡುವವರು ವಯಸ್ಸಾದ ಮೇಲಜೀವನಕ್ಕೆ ಯಾವುದೇ ಭದ್ರತೆ ಇರದೇ ಸಂಕಷ್ಟದಲ್ಲಿಜೀವನ ಮಾಡುತ್ತಿದ್ದಾರೆ. ಇಂತಹವರನ್ನು ಕಡೆಗಣಿಸದೆ ಅವರನ್ನು ಗುರುತಿಸಿ ಸರ್ಕಾರದಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸಲು ಪ್ರಯತ್ನಿಸುತ್ತೇನೆ ಎಂದು ಪ್ರಕಟಿಸಿದರು.

ಎ.ಐ.ಟಿ.ಯು.ಸಿ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಭಾರತಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಅಖೀಲ ಭಾರತಯುವಜನ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಜಾಫರ ಚಿತ್ರದುರ್ಗ, ಕಾರ್ಯನಿರತ ಪತ್ರಕರ್ತರಸಂಘದ ಅಧ್ಯಕ್ಷ ಭವಾನಿಸಿಂಗ ಠಾಕೂರ,ಎ.ಐ.ಟಿ.ಯು.ಸಿ ಜಿಲ್ಲಾ ಕಾರ್ಯದರ್ಶಿ ಎಚ್‌ಎಸ್‌. ಪತಕಿ, ಎನ್‌.ಎಫ್‌.ಐ.ಡಬ್ಲ್ಯು. ಮಹಿಳಾ ಮುಖಂಡರಾದ ಪದ್ಮಾವತಿ ಮಾಲಿಪಾಟೀಲ, ಅಖೀಲ ಭಾರತ ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷ ಹಣಮಂತರಾಯ ಅಟ್ಟೂರ ಸೇರಿದಂತೆಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಟೇಲರ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಲಾಯಿತು.

ಪದಾಧಿಕಾರಿಗಳ ಆಯ್ಕೆ: ಗೌರವಾಧ್ಯಕ್ಷರಾಗಿಪ್ರಭುದೇವ ಯಳಸಂಗಿ, ಕಾನೂನುಸಲಹೆಗಾರರಾಗಿ ಹಣಮಂತರಾಯ ಅಟ್ಟೂರ, ಅಧ್ಯಕ್ಷರಾಗಿ ಅನಿತಾ ಡಿ. ಭಕರೆ, ಉಪಾಧ್ಯಕ್ಷರಾಗಿ ಸುಜಾತಾ ಪಾಟೀಲ, ಮಹಾದೇವಿ ಪೂಜಾರಿ, ರುಕ್ಮಿಣಿ ಎಸ್‌. ಖೇಳಗಿ, ಕಾರ್ಯದರ್ಶಿಯಾಗಿಕಲ್ಯಾಣಿ ತುಕ್ಕಾಣಿ, ಸಹ ಕಾರ್ಯದರ್ಶಿಯಾಗಿವಿಠ್ಠಲ ಕುಂಬಾರ, ಹೇಮಾ ಹೂಗಾರ, ಮೀನಾಕ್ಷಿ ವಿನೋದ ಕುಮಾರ, ಸೂರ್ಯಕಾಂತ ಹುಲಿ,ಖಜಾಂಚಿಯಾಗಿ ರಾಜೇಂದ್ರ ರೋಳೆ, ಜಿಲ್ಲಾ ಮಂಡಳಿ ಸದಸ್ಯರಾಗಿ ಗುಂಡಮ್ಮ ಕಣ್ಣಿ, ವಿದ್ಯಾ ದೇಶಮುಖ, ಶರಣಪ್ಪ ಹಿರಾ ಜಮಾದಾರ,ಶ್ರೀದೇವಿ ಹಿರೇಮಠ, ಮಹೇಶ್ವರಿ ಶಿರೂರಹೂಗಾರ, ನಂದಾ ಕೆ.ಎಚ್‌.ಬಿ. ಕಾಲೋನಿ, ಲಕ್ಷ್ಮೀ ಎಸ್‌. ಭಾಗೋಡಿ, ಶಿವರಾಜ ನಾಗೂರ,ಮಲ್ಲಿಕಾರ್ಜುನ ಖೇಳಗಿ, ಚಂದ್ರಕಾಂತ ದಾಡಗೆ,ಪ್ರಿಯಾಂಕ ರಾಠೊಡ, ಲಕ್ಷ್ಮೀ ಪೂಜಾರಿ, ಜಯಶ್ರೀ ಮಠಪತಿ ಆಯ್ಕೆಯಾಗಿದ್ದಾರೆ.

Advertisement

ಕಾರ್ಯಕ್ರಮದಲ್ಲಿ ಸೂರ್ಯಕಾಂತಎಂ. ಹುಲಿ, ಗುಂಡಮ್ಮಾ ಕಣ್ಣಿ, ರಾಜೇಂದ್ರ ರೋಳೆ, ಮಲ್ಲಿಕಾರ್ಜುನ ಖೇಳಗಿ, ಹೇಮಹೂಗಾರ, ಚಂದ್ರಕಾಂತ ದಾಡಗೆ, ಪ್ರಿಯಾಂಕರಾಠೊಡ, ಲಕ್ಷ್ಮೀ ಪೂಜಾರಿ, ಜಯಶ್ರೀಮಠಪತಿ, ಸಿದ್ದಯ್ಯಸ್ವಾಮಿ ಬೇಲೂರ,ಶಿವರಾಜ ನಾಗೂರ, ಪ್ರಭು ಶ್ರೀಚಂದ, ಲಕ್ಷ್ಮೀಭಾಗೋಡಿ, ನಂದಾ, ಮಹೇಶ್ವರಿ ಶಿರೂರ,ಶ್ರೀದೇವಿ ಹಿರೇಮಠ, ಶರಣಪ್ಪ ಹೀರಾ ಜಮಾದಾರ, ವಿದ್ಯಾ ದೇಶಮುಖ, ಮೀನಾಕ್ಷಿವಿನೋದಕುಮಾರ, ಕುಪೇಂದ್ರ ಬಿರಾದಾರ,ಮಹಾದೇವಿ ಬಿರಾದಾರ, ದಿಲೀಪ ಭಕರೆಸೇರಿದಂತೆ ನೂರಾರು ಜನ ಟೇಲರ್ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next