ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಂಡಿ¨ªಾರೆ. ಅನಾವಶ್ಯಕವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದರು.
Advertisement
ಹರಿಪ್ರಸಾದ್‌ಗೆ ನೋಟಿಸ್ ಅಗತ್ಯವಿಲ್ಲಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಂದರ್ಭ ಬಂದಾಗ ಅವರನ್ನೇ ಕೇಳ್ಳೋಣ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಹೇಳುವಾಗ ಒಂದಷ್ಟು ಮಾಹಿತಿ ಇರಬಹುದು. ಅವರಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ ಎಂದರು.
-ಆರ್.ಅಶೋಕ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರಿಗೆ ಅಶೋಕ್ ಆಕ್ಷೇಪ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರಿನ ಮುಂದೆ ಇರುವ ರಾಮನನ್ನು ತೆಗೆದು ಹಾಕಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
Related Articles
Advertisement
ಇತ್ತೀಚೆಗೆ ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದ ಸಿದ್ದರಾಮಯ್ಯ ಪೂಜೆ ಮಾಡಲು ಗರ್ಭಗುಡಿಯ ಒಳಕ್ಕೆ ಹೋಗಿಲ್ಲ. ಆದರೆ ಮಸೀದಿಗೆ ಕರೆದರೆ ಟೋಪಿ ಹಾಕಿಕೊಂಡು ಓಡುತ್ತಾರೆ. ಮೈಸೂರಿನ ಕುಸ್ತಿ ಕಾರ್ಯಕ್ರಮದಲ್ಲಿ ಕೇಸರಿ ಪೇಟವನ್ನು ಕೂಡ ಅವರು ಹಾಕಿಕೊಳ್ಳಲಿಲ್ಲ. ಮೊದಲು ರಾಮನನ್ನು ನಿಮ್ಮ ಹೆಸರಿನಿಂದ ತೆಗೆದು ಹಾಕಿ ಎಂದು ಕುಟುಕಿದರು. ಬಡ ಆಟೋ ಚಾಲಕನ ಮೇಲೆ ಸಿದ್ದರಾಮಯ್ಯ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ 65 ವರ್ಷದ ಶ್ರೀಕಾಂತ್ ಪೂಜಾರಿ ವಿರುದ್ಧ ಅಪರಾಧ ಸಾಬೀತಾಗದ ಪ್ರಕರಣದಲ್ಲಿ 30 ವರ್ಷದ ಬಳಿಕ ಬಂಧಿಸುವ ಮೂಲಕ ಹೇಡಿತನದ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.