Advertisement

ಮೋಟಾರು ಕಾಯ್ದೆಯಡಿ ಅನಗತ್ಯ ಪ್ರಕರಣ ದಾಖಲು

11:08 PM Jul 15, 2019 | Team Udayavani |

ಸುಳ್ಯ: ತಾಲೂಕಿನ ಬೆಳ್ಳಾರೆ, ಸುಬ್ರಹ್ಮಣ್ಯ, ಗುತ್ತಿಗಾರು, ಸುಳ್ಯ, ಪಂಜ, ಕಲ್ಲುಗುಂಡಿ ಪ್ರದೇಶದಲ್ಲಿ ಆಟೋ ಚಾಲಕರನ್ನು ಅನಗತ್ಯವಾಗಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸು ತ್ತಿರುವುದು ಸಂಘದ ಗಮನಕ್ಕೆ ಬಂದಿದ್ದು, ಅದನ್ನು ಕೈ ಬಿಡುವಂತೆ ಆಗ್ರಹಿಸಿ ಬಿಎಂಎಸ್‌ ಪ್ರಾಯೋಜಿತ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ವೃತ್ತ ನಿರೀಕ್ಷರಿಗೆ ಮತ್ತು ಪೊಲೀಸ್‌ ಉಪ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ.

Advertisement

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭ ರಿಕ್ಷಾ ಚಾಲಕರ ಮೇಲೆ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ. ಸಂಚಾರಿ ಹಾಗೂ ಮೋಟಾರು ವಾಹನ ಕಾಯ್ದೆಯನ್ನು ನಿರ್ದಿಷ್ಟವಾಗಿ ಆಟೋ ರಿಕ್ಷಾ ಚಾಲಕರ ಮೇಲೆ ವಿಧಿಸಿ ಕಾನೂನು ದುರ್ಬಳಕೆ ಮಾಡಲಾಗುತ್ತಿದೆ.

ಇದನ್ನು ಸಂಘ ವಿರೋಧಿಸುತ್ತದೆ. ಸಂಚಾರ ಮತ್ತು ಮೋಟಾರು ವಾಹನ ಕಾಯ್ದೆ ಇತರ ವಾಹನಗಳಿಗೆ ಜಾರಿ ಮಾಡದೆ ಆಟೋ ರಿಕ್ಷಾ ಚಾಲಕರ ಮೇಲೆ ಮಾತ್ರ ಜಾರಿ ಮಾಡಿದ್ದು, ಈಗ ಆಗುತ್ತಿರುವ ತೊಂದರೆ ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ಗಿರೀಶ್‌, ಮಾಜಿ ಅಧ್ಯಕ್ಷ ವಿಜಯ ಕುಮಾರ್‌ ಉಬರಡ್ಕ, ಸದಸ್ಯರಾದ ಮೋಹನ್‌ ಚೊಕ್ಕಾಡಿ, ಉದಯ ಕುಮಾರ್‌ ಮೇನಾಲ, ಪ್ರಕಾಶ್‌, ವಿನಯ ಕುಮಾರ್‌, ಹರ್ಷಿತ್‌, ಮೋಹನ್‌, ಪ್ರಶಾಂತ್‌, ನಾರಾಯಣ ಮುಳ್ಯ, ಸಂತೋಷ್‌, ಜಗದೀಶ್‌, ಸುಧಾಕರ ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next