Advertisement

Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್‌ ಅಲ್ಲ: ಹೈಕೋರ್ಟ್‌

02:12 AM May 05, 2024 | Team Udayavani |

ಹೊಸದಿಲ್ಲಿ: ಪತ್ನಿ ಜತೆಗೆ ಪತಿ ನಡೆಸುವ ಅಸ್ವಾಭಾವಿಕ ಸೇರಿ ಯಾವುದೇ ಲೈಂಗಿಕ ಚಟುವಟಿಕೆಯು ಅತ್ಯಾ ಚಾರ ಎನಿಸಿಕೊಳ್ಳುವುದಿಲ್ಲ ಎಂದು ಮಧ್ಯಪ್ರದೇಶದ ಹೈಕೋರ್ಟ್‌ ಹೇಳಿದೆ. ಗಂಡ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾನೆಂದು ಆರೋಪಿಸಿ ಮಹಿಳೆ ಯೊಬ್ಬರು 2019ರಲ್ಲಿ ಎಫ್ಐಆರ್‌ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಗುರ್ಪಾಲ್‌ ಸಿಂಗ್‌ ಅಹ್ಲುವಾಲಿಯಾ ನೇತೃತ್ವದ ಪೀಠವು, ಎಫ್ಐಆರ್‌ ರದ್ದು ಮಾಡಿ, ತನ್ನ ಆದೇಶವನ್ನು ಮೇ 1ರಂದು ನೀಡಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯು ಅಧಿಕೃತವಾಗಿ ಮದು ವೆಯಾಗಿ ಗಂಡನೊಂದಿಗೆ ವಾಸಿಸುತ್ತಿದ್ದರೆ ಮತ್ತು ಗಂಡ ನಡೆಸುವ ಯಾವುದೇ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದು ಪರಿಗಣೆಯಾಗುವುದಿಲ್ಲ ಎಂದು ಮಧ್ಯ ಪ್ರದೇಶ ಹೈಕೋರ್ಟ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next