Advertisement

ಉನ್ನಾವೋ ಗ್ಯಾಂಗ್‌ ರೇಪ್‌ : ಬಿಜೆಪಿ ಶಾಸಕನ ಕೃತ್ಯ ದೃಢಪಡಿಸಿದ ಸಿಬಿಐ

11:50 AM May 11, 2018 | udayavani editorial |

ಹೊಸದಿಲ್ಲಿ : ಭಾರೀ ಮಹತ್ವದ  ಬೆಳವಣಿಗೆಯೊಂದರಲ್ಲಿ ಸಿಬಿಐ ಉತ್ತರ ಪ್ರದೇಶದ ಉನ್ನಾವೋ ರೇಪ್‌ ಕೇಸ್‌ ಆರೋಪಿಯಾಗಿರುವ ಬಂಗರಮಾವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ವಿರುದ್ಧದ ರೇಪ್‌ ಆರೋಪಗಳನ್ನು ದೃಢಪಡಿಸಿದೆ. 

Advertisement

ಬಿಜೆಪಿ ಶಾಸಕನ ವಿರುದ್ಧ ರೇಪ್‌ ಆರೋಪವನ್ನು ದೃಢೀಕರಿಸುತ್ತಾ ಸಿಬಿಐ, ಆರೋಪಿ ಶಾಸಕ ಸೆಂಗರ್‌ನ ಸಹವರ್ತಿ ಶಶಿ ಸಿಂಗ್‌ ಎಂಬಾತನು ಕಳೆದ ವರ್ಷ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯನ್ನು ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಸೆಂಗರ್‌ ಮನೆಗೆ ಕರೆತಂದಿದ್ದ ಎಂದು ಹೇಳಿದೆ.

ರೇಪ್‌ ಕೃತ್ಯ ನಡೆದಿದ್ದ ಉತ್ತರ ಪ್ರದೇಶದ ಮಾಖೀ ಗ್ರಾಮದಲ್ಲಿನ ಸೆಂಗರ್‌ ಮನೆಗೆ ಆತನ ಸಹವರ್ತಿ ಶಶಿ ಸಿಂಗ್‌ 2017ರ ಜೂನ್‌ 4ರಂದು ಸಂತ್ರಸ್ತೆಯನ್ನು ಕರೆತಂದಿದ್ದ. ಅಂದೇ ಆಕೆಯ ಮೇಲೆ ಶಾಸಕ ಮತ್ತು ಆತನ ಸಹವರ್ತಿಗಳು ಅತ್ಯಾಚಾರ ಎಸಗಿದ್ದರು.

ಸೆಂಗರ್‌ ಮತ್ತು ಆತನ ಸಹವರ್ತಿಗಳು ಬಾಲಕಿಯ ಮೇಲೆ ಸರದಿ ಪ್ರಕಾರ ರೇಪ್‌ ನಡೆಸುವಾಗ ಪೊಲೀಸರು ಸೆಂಗರ್‌ ಮನೆಯ ಹೊರಗೆ ಕಾವಲು ಕರ್ತವ್ಯ ನಿರತರಾಗಿದ್ದರು ಎಂದು ಸಿಬಿಐ ಹೇಳಿದೆ. 

ರೇಪ್‌ ಪ್ರಕರಣದ ಬಗ್ಗೆ ದೂರು ದಾಖಲಾದಾಗ ಪೊಲೀಸರು ಶಾಸಕ ಸೆಂಗರ್‌ನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. 

Advertisement

ಜೂನ್‌ 11ರಂದು ರೇಪ್‌ ಸಂತ್ರಸ್ತೆಯನ್ನು ಮೂವರು ಯುವಕರು ಪುನಃ ಅಪಹರಿಸಿದ್ದರು.  ಈ ಯುವಕರು ರೇಪ್‌ ಸಂತ್ರಸ್ತೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಸುಮಾರು 8ರಿಂದ 9 ದಿನಗಳ ಕಾಲ ಆಕೆಯನ್ನು ಎಸ್‌ಯುವಿ ವಾಹನದಲ್ಲಿ ಕೂಡಿ ಹಾಕಿದ್ದರು. 

ರೇಪ್‌ ಸಂತ್ರಸ್ತೆ ದೂರು ನೀಡಿದ ಹೊರತಾಗಿಯೂ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಲ್ಲಿ ವಿಳಂಬಿಸಿರುವುದು ಮತ್ತು ಅವರು ಆರೋಪಿ ಬಿಜೆಪಿ ಶಾಸಕನ ಒತ್ತಡಕ್ಕೆ ಅನುಗುಣವಾಗಿ ನಡೆದುಕೊಂಡಿರುವುದನ್ನೂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿರುವ ಕಾರಣ ಸಿಬಿಐ ಈ ರೇಪ್‌ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ಪಾತ್ರದ ಬಗ್ಗೆಯ ತನಿಖೆ ನಡೆಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next