Advertisement
ಇದಕ್ಕೆ ಪೂರಕವೆಂಬಂತೆ ಪಶ್ಚಿಮ ಬಂಗಾಲ ಸರಕಾರವು ಈಗಾಗಲೇ ಅನ್‌ಲಾಕ್ 5ರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದೆ. ಹೀಗಾಗಿ ದೇಶದ ಇತರೆಡೆಯೂ ಸಿನೆಮಾ ಥಿಯೇಟರ್‌ಗಳು ಆರಂಭವಾಗಬಹುದು ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು 7 ರಾಜ್ಯಗಳ ಸಿಎಂಗಳ ಜತೆ ನಡೆಸಿದ ಸಭೆಯಲ್ಲಿ “ಮೈಕ್ರೋ ಕಂಟೈನ್‌ಮೆಂಟ್’ ಝೋನ್‌ಗೆ ಒತ್ತು ನೀಡಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವಂತೆ ಸಲಹೆ ನೀಡಿದ್ದರು. ಆದರೆ ದೇಶಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಶಾಲೆ-ಕಾಲೇಜುಗಳು ಅಕ್ಟೋಬರ್‌ನಲ್ಲೂ ಮುಚ್ಚಿರುವ ಸಾಧ್ಯತೆ ಇದೆ.
ಕೇರಳ ಸರಕಾರವು ಶಬರಿಮಲೆ ಯಾತ್ರೆಗೆ ಅವಕಾಶ ನೀಡಲು ನಿರ್ಧರಿಸಿದೆ. ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ನೀಲಕ್ಕಲ್ ಮತ್ತು ಪಂಪಾ ಶಿಬಿರದಲ್ಲಿ ಭಕ್ತರು ಪರೀಕ್ಷೆಗೆ ಒಳಗಾಗಬೇಕು. ವರ್ಚುವಲ್ ಕ್ಯೂಗೆ ಅವಕಾಶ ಇದೆ. ಆದರೆ ಸನ್ನಿಧಾನದಲ್ಲಿ ರಾತ್ರಿ ಉಳಿಯುವ ಅವಕಾಶ ಇರುವುದಿಲ್ಲ.