Advertisement

ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟ :ಸೆ.7ರಿಂದ ಮೆಟ್ರೋ ಸೇವೆ ಆರಂಭ,ಸದ್ಯಕ್ಕಿಲ್ಲ ಶಾಲಾ ಕಾಲೇಜು

08:43 PM Aug 29, 2020 | sudhir |

ನವದೆಹಲಿ : ಕೇಂದ್ರದ ಅನ್ ಲಾಕ್ 4.0 ಮಾರ್ಗ ಸೂಚಿ ಪ್ರಕಟಗೊಂಡಿದ್ದು ಸೆಪ್ಟೆಂಬರ್ 7ರಿಂದ ದೇಶಾದ್ಯಂತ ಮೆಟ್ರೋ ಸಂಚಾರ ಆರಂಭಗೊಳ್ಳಲಿದ್ದು ಶಾಲಾ ಕಾಲೇಜುಗಳು ಮಾತ್ರ ಸಧ್ಯ ಆರಂಭಗೊಳ್ಳುವುದಿಲ್ಲ ಎನ್ನಲಾಗಿದೆ.

Advertisement

ಕೇಂದ್ರದ ಮಾರ್ಗಸೂಚಿಯಂತೆ ಶಾಲಾ ಕಾಲೇಜುಗಳು ಸೆಪ್ಟೆಂಬರ್ 30ರವರೆಗೆ ತೆರೆಯುವಂತಿಲ್ಲ ಬದಲಾಗಿ ಆನ್ ಲೈನ್ ತರಗತಿಗಳನ್ನು ಮುಂದುವರೆಸಲು ಸೂಚಿಸಲಾಗಿದೆ. ಕಂಟೈನ್‌ಮೆಂಟ್ ವಲಯಗಳು ಅಲ್ಲದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ತಮ್ಮ ಹೆತ್ತವರ ಅನುಮತಿಯನ್ನು ಪಡೆದು ಶಾಲೆಗಳಿಗೆ ಭೇಟಿ ನೀಡಬಹುದಾಗಿದೆ.

ಸೆಪ್ಟೆಂಬರ್ 21ರಿಂದ ಸಭೆ ಸಮಾರಂಭಗಳಿಗೆ, ಮನೋರಂಜನೆ , ಧಾರ್ಮಿಕ , ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲು ಅನುಮತಿಯನ್ನು ನೀಡಲಾಗಿದ್ದು ಸಭೆ ಸಮಾರಂಭಗಳಲ್ಲಿ 100 ಜನರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್ ತೆರೆಯಲು ಅವಕಾಶ ನೀಡಲಾಗುವುದು ಎನ್ನಲಾಗಿದೆ.
ಹಂತ ಹಂತವಾಗಿ ಒಂದೊಂದೇ ವಲಯಗಳನ್ನು ಸಡಿಲಿಸುವ ಕ್ರಮ ಕೈಗೊಂಡಿದ್ದು ಮೊದಲ ಹಂತವಾಗಿ ಮೆಟ್ರೋ ಸಂಚಾರ ಆರಂಭಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಡೆಸಲು ಅನುಮತಿ ನೀಡಲಾಗುವುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next