Advertisement

PFI ನಂಟು: ಅಕ್ರಮ ಚಟುವಟಿಕೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ ಎನ್‌ಐಎ

07:31 PM Nov 03, 2023 | Team Udayavani |

ಜೈಪುರ: ರಾಜಸ್ಥಾನದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಗೆ ಸಂಬಂಧಿಸಿದ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ಕೋಟಾದ ನಿವಾಸಿಗಳಾದ ವಾಜಿದ್ ಅಲಿ ಮತ್ತು ಮುಬಾರಿಕ್ ಅಲಿ ಅವರನ್ನು ಯುವ ಪಿಎಫ್‌ಐ ಸದಸ್ಯರಿಗೆ ತರಬೇತಿಯನ್ನು ಆಯೋಜಿಸುವಲ್ಲಿ ಇತರ ಮೂವರಾದ ಮೊಹಮ್ಮದ್ ಆಸಿಫ್, ಸಾದಿಕ್ ಸರ್ರಾಫ್ ಮತ್ತು ಮೊಹಮ್ಮದ್ ಸೊಹೈಲ್ ಅವರೊಂದಿಗೆ ತೊಡಗಿಸಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.

2047ರಲ್ಲಿ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಪಿಎಫ್‌ಐನ ದೀರ್ಘಕಾಲೀನ ಕಾರ್ಯಸೂಚಿಯನ್ನು ಸಾಧಿಸಲು ಜೈಪುರ ಮತ್ತು ಕೋಟಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದ ಪ್ರಕರಣದಲ್ಲಿ ಆಸಿಫ್, ಸರ್ರಾಫ್ ಮತ್ತು ಸೊಹೈಲ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಹಿಂದೆ ಚಾರ್ಜ್ ಶೀಟ್ ಮಾಡಿತ್ತು ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next