ಗಂಗಾವತಿ: ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬುಧವಾರ ಬೆಳ್ಳಿಗ್ಗೆ ಪ್ರತ್ಯಕ್ಷನಾದ ಅಪರಿಚಿತ ಯುವಕನಿಂದಾಗಿ ಇಡೀ ಬಸ್ ನಿಲ್ದಾಣದಲ್ಲಿದ್ದ ಜನರು ಮತ್ತು ಅಧಿಕಾರಿಗಳು ಭಯಭೀತಗೊಂಡ ಘಟನೆ ಜರುಗಿದೆ.
ಕೊಪ್ಪಳ ಜಿಲ್ಲಾಡಳಿತ ಬಿಗಿಯಾದ ಕ್ರಮಗಳಿಂದ ಕೊವಿಡ್-19 ರೋಗವನ್ನು ಜಿಲ್ಲೆಗೆ ಕಾಲಿಡದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಗಂಗಾವತಿಗೆ ಬುಧವಾರ ಯಾವ ಮಾರ್ಗದಲ್ಲಿ ಅಪರಿಚಿತ ಯುವಕ ಆಗಮಿಸಿದ ಎನ್ನುವ ಕುರಿತು ಸರಿಯಾದ ಟ್ರಾವೆಲ್ ಹಿಸ್ಟರಿ ಹೇಳುತ್ತಿಲ್ಲ. ಪೊಲೀಸರು ಕೇಳಿದಾಗ ಮಂಜುನಾಥ- ಪುರುಷೋತ್ತಮ ಎಂದೂ, ಸ್ವಂತ ಊರು ಮಂಗಳೂರು, ಕಾರವಾರ, ದಾವಣಗೆರೆ ಎಂದು ಅಸಂಬಧವಾಗಿ ಉತ್ತರ ನೀಡುತ್ತಿದ್ದ. ಯುವಕನ ಹತ್ತಿರ ಇರುವ ಮೊಬೈಲ್ ನಲ್ಲಿ ಕೆಲ ಯುವತಿಯರ ಹೆಸರು ಇದ್ದು ಈತ ಅನಾರೋಗ್ಯ ಪೀಡಿತನಾಗಿದ್ದು ಮಾತನಾಡಲು ಕಷ್ಟಪಡುತ್ತಿದ್ದ.
ಕೇಂದ್ರ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ ಕಂದಾಯ, ತಾ.ಪಂ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವಲಸೆ ಕೂಲಿಕಾರ್ಮಿಕರು ಆಗಮಿಸಿದ ವೇಳೆ ದೇಹದ ಉಷ್ಣತೆ ಜ್ವರ ಆರೋಗ್ಯ ಸ್ಥಿತಿ ದಾಖಲಿಸು ಸೂಚನೆ ನೀಡಿದೆ. ಅಪರಿಚಿತ ಯುವಕ ಸ್ವಂತ ಊರು ಹೆಸರು ಹೇಳದೆ ಇರುವ ಕಾರಣ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗಂಟಲು ದ್ರವ ತೆಗೆದುಕೊಂಡು ಲ್ಯಾಬಿ ಕಳುಹಿಸಲು ವೈದ್ಯರು ಸೂಚನೆ ನೀಡಿದ್ದಾರೆಂದು ಆರೋಗ್ಯ ಇಲಾಖೆಯ ಗುರುರಾಜ ಹಿರೇಮಠ ಉದಯವಾಣಿ ಗೆ ತಿಳಿಸಿದ್ದಾರೆ.
ಬಸ್ ನಿಲ್ದಾಣ ಸ್ವಚ್ಚತೆ: ಅಪರಿಚಿತ ಯುವಕ ಬೆಳಗಿನ ಜಾವದಿಂದ ಇಡೀ ಬಸ್ ನಿಲ್ದಾಣದಲ್ಲಿ ಸುತ್ತಾಡಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಇಡೀ ನಿಲ್ದಾಣ ವನ್ನು ಸ್ಯಾನಿಟೈಜರ್ ನೀರು ಹಾಕಿ ಸ್ವಚ್ಚತೆ ಮಾಡಲಾಗುತ್ತದೆ ಎಂದು ಸಂಚಾರಿ ನಿಯಂತ್ರಕ ಶಿವನಗೌಡ ಉಳೆನೂರು ತಿಳಿಸಿದ್ದಾರೆ