ತೀರ್ಥಹಳ್ಳಿ: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ನರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಳಗೇರಿ ಬಸ್ ನಿಲ್ದಾಣ ಬಳಿ ಶನಿವಾರ ನಡೆದಿದೆ.
ಚೇತನ್ (27) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಶನಿವಾರ ಮುಂಜಾನೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಬಸ್ ನಿಲ್ದಾಣ ಸಮೀಪ ಸ್ಪ್ಲೆಂಡರ್ ಬೈಕ್ ನಿಂತಿದ್ದು, ಪಾದರಕ್ಷೆ ಸಹ ಅಲ್ಲೇ ಇದೆ ಎನ್ನಲಾಗಿದೆ. ಬೈಕ್ ನಿಂತ ಸ್ಥಿತಿಯಲ್ಲೇ ಇರುವುದರಿಂದ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕ್ಷಮಾ ಸ್ವಯಂ ವಿವಾಹಕ್ಕೆ ಅಡ್ಡಿ: ದೇವಸ್ಥಾನದಲ್ಲಿ ವಿವಾಹಕ್ಕೆ ಅವಕಾಶವಿಲ್ಲವೆಂದ ಬಿಜೆಪಿ
ಯುವಕನ ಮೃತದೇಹವನ್ನು ಜೆಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.