Advertisement

ಶಿಕಾರಿಪುರ: ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಮೃತ ದೇಹ ಪತ್ತೆ

02:43 PM Oct 25, 2022 | Team Udayavani |

ಶಿಕಾರಿಪುರ: ಪಟ್ಟಣ ಸಮೀಪದ ಮಾಸೂರು ರಸ್ತೆ ಪಕ್ಕದ ಮರದ ಕೆಳಗೆ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಮಂಗಳವಾರ ಮಂಜಾನೆ ಪತ್ತೆಯಾಗಿದೆ.

Advertisement

ವ್ಯಕ್ತಿಗೆ ಮರದ ದಿಮ್ಮಿಯಿಂದ ಅಥವಾ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು,ತನಿಖೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ ಪಿ ಶಿವಾನಂದ ಮದರಖಂಡಿ,ಸಿಪಿಐ ಲಕ್ಷ್ಮಣ್, ಪಟ್ಟಣ ಪೊಲೀಸ್ ಠಾಣೆ ಪಿಎಸ್ ಐ ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next