Advertisement

ಪ್ರವಾಸೋದ್ಯಮ ತಾಣವಾಗಿ ಉಣಕಲ್ಲ ಕೆರೆ ಅಭಿವೃದ್ಧಿ

10:38 AM Nov 17, 2019 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಉಣಕಲ್ಲ ಕೆರೆಯನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ  ಜಗದೀಶ ಶೆಟ್ಟರ ಹೇಳಿದರು.

Advertisement

ಹು-ಧಾ ಮಹಾನಗರ ಪಾಲಿಕೆ, ಉಣಕಲ್ಲ ಅಭಿವೃದ್ಧಿ ಸಂಘ, ದೇಶಪಾಂಡೆ ಫೌಂಡೇಶನ್‌, ಟಾಟಾ ಹಿಟಾಚಿ ಸಹಯೋಗದಲ್ಲಿ ಉಣಕಲ್ಲ ಕೆರೆಯ ಅಂತರಗಂಗೆ ಕಳೆ ಶುದ್ಧೀಕರಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಉಣಕಲ್ಲ ಕೆರೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ನ. 18ರಂದು ಸಭೆ ನಡೆಸಿ ಕೆರೆಯ ಶಾಶ್ವತ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಿದೆ. ನಾಗರಿಕರು ಸಹ ತಮ್ಮ ಸಲಹೆಗಳನ್ನು ಸಮಿತಿಗೆ ನೀಡಬಹುದು. ಉಣಕಲ್ಲ ಅಭಿವೃದ್ಧಿ ಸಂಘದ ಯುವಕರ ಕಾರ್ಯ ಶ್ಲಾಘನೀಯ. ಕೆರೆಯಲ್ಲಿ ಬೆಳೆಯುವ ಅಂತರಗಂಗೆ ಕಳೆ ಪ್ರತಿವರ್ಷವು ಮರುಕಳಿಸುತ್ತದೆ. ಇದಕ್ಕೆ ಕೆರೆಗೆ ಸೇರುವ ಕೊಳಚೆ ನೀರು ಕಾರಣ. ಈಗಾಗಲೇ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ

ಬಿಡಲು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಘಟಕ ಕಾರ್ಯಾರಂಭ ಮಾಡಲಿದೆ. ಕೆರೆಯ ಮಧ್ಯದ ವಿವೇಕಾನಂದರ ಪ್ರತಿಮೆಯ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಯುವಕರು ನಡೆಸಿದ ಕಳೆ ತೆಗೆಯುವ ಕಾರ್ಯವನ್ನು ಸಚಿವರು ಸ್ವತಃ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉಣಕಲ್ಲ ಕೆರೆಯ ಸುತ್ತಲಿನ ನಿವಾಸಿಗಳ ಸಮಸ್ಯೆ ಆಲಿಸಿ, ಮಹಾಮಳೆಗೆ ಕೊಚ್ಚಿಹೋದ ಸೇತುವೆಗಳ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಎರಡು ತಿಂಗಳೊಳಗಾಗಿ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲಾಧಿಕಾರಿ ದೀಪಾ ಚೋಳನ್‌, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ದೇಶಪಾಂಡೆ ಫೌಂಡೇಷನ್‌ ಸಿಇಒ ವಿವೇಕ ಪವಾರ, ಟಾಟಾ ಹಿಟಾಚಿಯ ಪ್ರಸನ್ನ ದೀಕ್ಷಿತ, ಅಜಿತ ಕುಲಕರ್ಣಿ, ಉಣಕಲ್ಲ ಅಭಿವೃದ್ಧಿ ಸಂಘದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next