ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಇಲ್ಲಿನಕುವೆಂಪು ವಿಶ್ವವಿದ್ಯಾಲಯ 2020ರಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ್‍ಯಾಂಕಿಂಗ್(ಎನ್‌ಐಆರ್‌ಎಫ್) ನಲ್ಲಿ 81ನೇ ರ್‍ಯಾಂಕ್‌ಗಳಿಸುವುದರೊಂದಿಗೆ ಸತತ ನಾಲ್ಕನೇವರ್ಷ ದೇಶದ ಟಾಪ್ 100ರ ಪಟ್ಟಿಯಲ್ಲಿಸ್ಥಾನ ಪಡೆದಿದೆ.
ರಾಜ್ಯಗಳ ಸಾಂಪ್ರದಾಯಿಕವಿವಿಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.ನವದೆಹಲಿಯಲ್ಲಿ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರಪ್ರಧಾನ್ ಅವರು ಬುಧವಾರಅಂತರ್ಜಾಲದಲ್ಲಿ ರ್‍ಯಾಂಕಿಂಗ್ ಪಟ್ಟಿಬಿಡುಗಡೆಗೊಳಿಸಿದ್ದಾರೆ.
ದೇಶದ 4,100ಕ್ಕೂ ಹೆಚ್ಚು ಶೈಕ್ಷಣಿಕಸಂಸ್ಥೆಗಳು ಭಾಗವಹಿಸಿದ್ದ ಈ ರ್‍ಯಾಂಕಿಂಗ್‌ಪಟ್ಟಿಯಲ್ಲಿ ಕುವೆಂಪು ವಿವಿ 40.40ಅಂಕಗಳನ್ನು ಪಡೆಯುವ ಮೂಲಕ ಇಡೀದೇಶದ ವಿಶ್ವವಿದ್ಯಾಲಯಗಳ ಪೈಕಿ 81ನೇಸ್ಥಾನ ಪಡೆದಿದೆ. 2017ರಲ್ಲಿ 150ರಿಂದ 200ರವರ್ಗದಲ್ಲಿ ಸ್ಥಾನಪಡೆದಿದ್ದ ವಿಶ್ವವಿದ್ಯಾಲಯ,2018ರಲ್ಲಿ ಭಾರೀ ಜಿಗಿತ ಕಂಡಿದ್ದು78ನೇ ಸ್ಥಾನಕ್ಕೇರಿತ್ತು.
ಪ್ರಸಕ್ತ ಸಾಲಿನಲ್ಲಿ81ನೇ ರ್‍ಯಾಂಕ್ ಪಡೆಯುವುದರೊಂದಿಗೆ,ಕೋವಿಡ್ ಕಾರಣದಿಂದ ಉನ್ನತ ಶಿಕ್ಷಣದಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದರೂ,ಟಾಪ್ 100 ರೊಳಗೆ ಸ್ಥಾನ ಪಡೆದಿದೆ.ಕೇಂದ್ರೀಯ ವಿಶ್ವವಿದ್ಯಾಲಯಗಳು,ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕಸಂಸ್ಥೆಗಳು, ಎಂಜಿನಿಯರಿಂಗ್‌ನಂತಹವೃತ್ತಿಪರ ಕೋರ್ಸ್‌ಗಳನ್ನು ನಡೆಸುವಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ವಿಶ್ವವಿದ್ಯಾಲಯಗಳು ಸೇರಿದಂತೆದೇಶಾದ್ಯಂತ (4,100) ಶಿಕ್ಷಣ ಸಂಸ್ಥೆಗಳು ಶ್ರೇಣೀಕರಣಕ್ಕೆ ಒಳಪಟ್ಟಿವೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 19 ಮತ್ತು 69ನೇ ರ್‍ಯಾಂಕ್ ಪಡೆಯುವುದರೊಂದಿಗೆ ರಾಜ್ಯ ಮಟ್ಟದಲ್ಲಿ ಮೊದಲೆರಡು ಸ್ಥಾನಪಡೆದಿವೆ.
ದೇಶದ ಶೈಕ್ಷಣಿಕ ಸಂಸ್ಥೆಗಳಗುಣಮಟ್ಟವನ್ನು ಉತ್ತಮಪಡಿಸಲು ಮತ್ತುಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವನಿಟ್ಟಿನಲ್ಲಿ 2015 ರಲ್ಲಿ ಮಾನವ ಸಂಪನ್ಮೂಲಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಪ್ರಾರಂಭಿಸಿದ್ದು, ಈಗಆರನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್,ವೈದ್ಯಕೀಯ, ವಾಸ್ತುಶಿಲ್ಪ, ಕಾನೂನುವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನುಎನ್‌ಐಆರ್‌ಎಫ್ ಅಡಿಯಲ್ಲಿ ಮಾನವಸಂಪನ್ಮೂಲ ಇಲಾಖೆ ಪ್ರತಿ ವರ್ಷಕೈಗೊಳ್ಳುತ್ತದೆ.
ರಾಜ್ಯಮಟ್ಟದಲ್ಲಿ ಏಳನೇ ಸ್ಥಾನ: ರಾಜ್ಯದಉನ್ನತ ಶಿಕ್ಷಣದ ಶೈಕ್ಷಣಿಕ ಸಂಸ್ಥೆಗಳ ಪೈಕಿಕುವೆಂಪು ವಿಶ್ವವಿದ್ಯಾಲಯ 7ನೇ ಸ್ಥಾನಪಡೆದಿದೆ. ಬೆಂಗಳೂರಿನ ಇಂಡಿಯನ್‌ಇನ್ಸಿrಟ್ಯೂಟ್ ಆಫ್ ಸೈನ್ಸ್ (1), ಮಣಿಪಾಲಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(7), ಮೈಸೂರು ವಿಶ್ವವಿದ್ಯಾಲಯ(19), ಮೈಸೂರಿನ ಜೆ.ಎಸ್.ಎಸ್.ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ಆ್ಯಂಡ್ ರಿಸರ್ಚ್ (34), ಬೆಂಗಳೂರುವಿಶ್ವವಿದ್ಯಾಲಯ (69), ಮಂಗಳೂರಿನನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯ (77) ಸ್ಥಾನಪಡೆದಿವೆ. ಇನ್ನುಳಿದಂತೆ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ (82),ಬೆಳಗಾವಿಯಕೆಎಲ್‌ಈ ಸಂಸ್ಥೆ (91) ಮತ್ತುಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ (99)ಟಾಪ್ 100ರಲ್ಲಿರುವ ಕರ್ನಾಟಕದ ಇತರೆಶೈಕ್ಷಣಿಕ ಸಂಸ್ಥೆಗಳು.