Advertisement
ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದ ನಾಗೇಶ ಹಾಗೂ ಮಹಾದೇವಿ ದಂಪತಿಯ ದ್ವಿತೀಯ ಪುತ್ರಿ ಸುಜಾತಾ ಜೋಡಳ್ಳಿಯೇ ಈ ಸಾಧನೆ ಮಾಡಿದವಳು. ಕವಿವಿಯ ಗಾಂಧಿಭವನದಲ್ಲಿ ಜರುಗಿದ 72ನೇ ಘಟಿಕೋತ್ಸವದಲ್ಲಿ ಎಂಎ ಪತ್ರಿಕೋದ್ಯಮ ಪದವಿಯಲ್ಲಿ ಬರೋಬ್ಬರಿ 9 ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾಳೆ.
Related Articles
Advertisement
ಚಿನ್ನದ ಬೇಟೆಕವಿವಿಯ 72ನೇ ಘಟಿಕೋತ್ಸವದಲ್ಲಿ 103 ವಿದ್ಯಾರ್ಥಿಗಳಿಗೆ 233 ಚಿನ್ನದ ಪದಕ ಪ್ರದಾನ ಮಾಡಲಾಗಿದ್ದು, ಇದರ ಜತೆಗೆ 42 ಪಾರಿತೋಷಕ, 76 ಶಿಷ್ಯವೇತನ, 67 ರ್‍ಯಾಂಕ್ ಗಳನ್ನು ನೀಡಲಾಗಿದೆ. ಈ ಪೈಕಿ ಎಂಎ ಕನ್ನಡದಲ್ಲಿ ಅಕ್ಕಮ್ಮಾ ಯಾದವಾಡ 7 ಚಿನ್ನದ ಪದಕ, ಎಂಎ ರಾಜಕೀಯ ವಿಜ್ಞಾನದಲ್ಲಿ ಮೇಘಾ ಹವಣಗಿ, ಎಂಎಸ್‌ಸಿ ಗಣಿತದಲ್ಲಿ ಸ್ವಾತಿ ಜೋಶಿ, ರಸಾಯನಶಾಸ್ತ್ರದಲ್ಲಿ ಸಹನಾ ನಾಗೇಶ ಶೇಟ್ ತಲಾ 6 ಚಿನ್ನದ ಪದಕ, ಎಂಎ ಇಂಗ್ಲಿಷ್‌ದಲ್ಲಿ ಮೈದಿನಿ ನಾಯಕ, ಅರ್ಥಶಾಸ್ತ್ರದಲ್ಲಿ ತೇಜಸ್ವಿನಿ ತಳವಾರ, ಎಂಎಸ್ಸಿ ಸಸ್ಯಶಾಸ್ತ್ರದಲ್ಲಿ ನಮ್ರತಾ ಉದಯ ಶೆಟ್ಟಿ, ಎಂಬಿಎ ವಿಭಾಗದಲ್ಲಿ ರಹೇಲಾ ಅಜುಮ್, ಎಲ್‌ಎಲ್‌ಬಿಯಲ್ಲಿ
ಅಖೀಲ್ ಬಿ.ಎಸ್. ತಲಾ 5 ಚಿನ್ನದ ಪದಕ, ಬಿಎಂಯಲ್ಲಿ ಜೋತಿ ಗೋನವಾರ, ಸುಧಾ ಎಂ. ತಲಾ 4 ಚಿನ್ನದ ಪದಕ ಪಡೆದಿದ್ದಾರೆ. ವಾಟರ್‌ಮ್ಯಾನ್ ಆಗಿರುವ ತಂದೆ ಕಷ್ಟದ ದಿನಗಳಲ್ಲಿಯೂ ಅಧ್ಯಯನಕ್ಕೆ ಯಾವುದಕ್ಕೂ ಕೊರತೆ ಆಗದಂತೆ ಓದಿಸಿದ್ದಾರೆ. ಓದಿಗೆ ನೀರೆರೆದ ತಂದೆಯ ಹಿಂದಿನ ಶ್ರಮ ಹಾಗೂ ಕಷ್ಟಪಟ್ಟು ಅಧ್ಯಯನ ಮಾಡಿದ ಫಲದಿಂದ 9 ಚಿನ್ನದ ಪದಕ ಲಭಿಸಿದ್ದು, ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಪಿಎಚ್‌ಡಿ
ಮಾಡಿ, ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿ ಇದೆ.
*ಸುಜಾತಾ ಜೋಡಳ್ಳಿ, 9 ಚಿನ್ನದ ಪದಕ ವಿಜೇತೆ ಚಿಕ್ಕೋಡಿ ತಾಲೂಕಿನ ಜಾಗನೂರು ನಮ್ಮೂರು. ತಂದೆ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪೋಷಕರ ಆಸೆಯಂತೆ ಈ ಸಾಧನೆ ಮಾಡಿದ್ದೇನೆ. ಈಗಾಗಲೇ ಕೆ-ಸೆಟ್, ಗೇಟ್ ಪರೀಕ್ಷೆ ಪಾಸಾಗಿದ್ದು, ಮುಂದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುವ ಗುರಿ ಇದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಸಂಪಾದಿಸುವ ಇಚ್ಚೆ ಹೊಂದಿದ್ದೇನೆ.
*ಲಕ್ಷ್ಮಣ ಹಂಜಿ, 8 ಚಿನ್ನದ ಪದಕ ವಿಜೇತ, ಎಂಎಸ್ಸಿ ಪ್ರಾಣಿಶಾಸ ಮನೆಯಲ್ಲಿ ತಾಯಿಯ ಸಹಕಾರ-ಉಪನ್ಯಾಸಕರ ಮಾರ್ಗದರ್ಶನ ಇತ್ತು. ಮುಂದಿನ ದಿನಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತೇನೆ.
*ಪವಿತ್ರಾ ಗುಳ್ಳಣ್ಣವರ, ಬಾಗಲಕೋಟೆ,
8 ಚಿನ್ನದ ಪದಕ ವಿಜೇತೆ, ಲೈಬ್ರರಿ ಆ್ಯಂಡ್ ಇನ್ಫಾರ್ಮೇಷನ್ ಸೈನ್