Advertisement
ಏನಿದು ಸಮೀಕ್ಷೆ ?ಟೈಮ್ಸ್ ಉನ್ನತ ಅಧ್ಯಯನ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸುತ್ತಿದೆ. ಜಾಗತಿಕ ಮಟ್ಟದಲ್ಲಿರುವ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಇದು ನಿರ್ಧರಿಸುತ್ತದೆ. ಕಳೆದ 16 ವರ್ಷಗಳಿಂದ ಈ ಸಮೀಕ್ಷೆ ನಡೆಯುತ್ತಿದೆ. ವಿ.ವಿ.ಗಳು ಶೈಕ್ಷಣಿಕವಾಗಿ ಸಮರ್ಥವಾಗಿದೆಯೇ ಎಂಬುದನ್ನು ತಿಳಿಯುವುದೇ ಇದರ ಗುರಿ.
ಬೋಧನೆ: ಇದರ ಅಡಿಯಲ್ಲಿ ಕಲಿಕೆಗೆ ಪೂರಕವಾದ ವಾತವಾರಣ ಕಲ್ಪಿಸಿಕೊಡುವಲ್ಲಿ ಎಷ್ಟರ ಮಟ್ಟಿಗೆ ವಿ.ವಿ.ಯಶಸ್ವಿಯಾಗಿದೆ ಹಾಗೂ ಶಿಕ್ಷಕರ ಬೋಧನೆಯ ಮಟ್ಟ ಹೇಗಿದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಸಂಶೋಧನೆ: ವಿ.ವಿ. ತನ್ನ ಖ್ಯಾತಿಯನ್ನು ಆದಾಯದ ಪರಿಮಾಣವನ್ನು ಹೆಚ್ಚಿಕೊಳ್ಳುವಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಂಡಿದೆಯೇ ಎಂಬುದನ್ನು ಪರೀಕ್ಷಿಸುವುದು.
Related Articles
Advertisement
ಅಂ.ರಾ. ದೃಷ್ಟಿಕೋನ : ಎಷ್ಟು ವಿದೇಶ ವಿದ್ಯಾರ್ಥಿಗಳು, ಸಿಬ್ಬಂದಿಗಳು ವಿಶ್ವವಿದ್ಯಾನಿಲಯದಲ್ಲಿ ಇದ್ದಾರೆ ಹಾಗೂ ಸಂಸ್ಥೆಯ ಸಮೀಕ್ಷಾ ವರದಿಗಳು ಅಂ.ರಾ. ಮಟ್ಟದಲ್ಲಿ ಮನ್ನಣೆ ಪಡೆದಿವೆಯೇ ಎಂದು ಪರಿಶೀಲಿಸುವುದು.
ಆದಾಯ ಮಟ್ಟ : ಪ್ರತಿಷ್ಠಿತ ಉದ್ಯಮಗಳೊಂದಿಗೆ ಕೈ ಜೋಡಿಸುವ ಮೂಲಕ ಆವಿಷ್ಕಾರಗಳನ್ನು ಹಾಗೂ ಸಂಶೋಧನೆಗಳನ್ನು ನಡೆಸಿದೆಯೇ ಎಂದು ಪರೀಕ್ಷಿಸುವುದು.
ಅಂಕ ಹಂಚಿಕೆ ಹೇಗೆ ?ಬೋಧನೆ – ಶೇ.30
ಸಂಶೋಧನೆ – ಶೇ.30 %
ಅಂ.ರಾ. ದೃಷ್ಟಿಕೋನ – ಶೇ.7.5
ಆದಾಯ ಮಟ್ಟ – ಶೇ.2.5 86 ದೇಶಗಳಲ್ಲಿ ಸಮೀಕ್ಷೆ
ಒಟ್ಟು 86 ದೇಶಗಳ 1,250 ವಿಶ್ವವಿದ್ಯಾನಿಯಗಳು ಸಮೀಕ್ಷೆಯಲ್ಲಿ ಭಾಗಿಯಾಗಿವೆ. ಟಾಪ್ 300ರ ಪಟ್ಟಿಯಲ್ಲಿ ಭಾರತದ ವಿ.ವಿ. ಇಲ್ಲ!
ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2020ರ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದ ಅಗ್ರ 300 ವಿಶ್ವವಿದ್ಯಾನಿಲಯ ಪಟ್ಟಿಯಲ್ಲಿ ಭಾರತದ ಒಂದೇ ಒಂದು ವಿ.ವಿ.ಯೂ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. 50 ಸ್ಥಾನಗಳಷ್ಟು ಹಿಂದೆ
ಕಳೆದ ವರ್ಷ 251-300 ಶ್ರೇಯಾಂಕದ ಸಮೂಹದಲ್ಲಿ ಸ್ಥಾನ ಪಡೆದಿದ್ದ ಭಾರತದ ವಿಶ್ವವಿದ್ಯಾನಿಲಯಗಳು 50 ಸ್ಥಾನಗಳಷ್ಟು ಹಿಂದೆ ಸರಿದ್ದು, 301- 350 ನೇ ಶ್ರೇಯಾಂಕದಲ್ಲಿದೆ. ಟಾಪ್ 500 ರಲ್ಲಿ ತೃಪ್ತಿ
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ರೋಪರ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) 301-350 ಶ್ರೇಯಾಂಕದ ನಡುವೆ ಸ್ಥಾನ ಪಡೆದುಕೊಂಡಿದ್ದು, ಐಐಟಿ ಮುಂಬೈ, ದೆಹಲಿ ಮತ್ತು ಖರಗ್ಪುರದ ವಿಶ್ವವಿದ್ಯಾನಿಲಯಗಳು 401-500 ದರ್ಜೆಯಲ್ಲಿ ಸ್ಥಾನಗಳಿಸುವುದರಲ್ಲಿ ತೃಪ್ತಿ ಪಡೆದುಕೊಂಡಿದೆ. ಸ್ಥಾನಗಳಿಸುವಲ್ಲಿ ವಿಫಲ ಯಾಕೆ?
– ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು ಗುರುತಿಸಿಕೊಳ್ಳದೇ ಇರುವುದು.
– ಸಂವಹನ ಕೌಶಲ್ಯದ ಕೊರತೆ.
– ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಫಲ.
– ಹೆಚ್ಚಾಗಿ ಸಂಶೋಧನೆ ಚಟುವಟಿಕೆಗಳಲ್ಲಿ ಭಾಗವಹಿಸದೇ ಇರುವುದು. ನಾಲ್ಕನೇ ಬಾರಿ ಅಗ್ರಸ್ಥಾನ
2020 ಆವೃತ್ತಿಯಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸತತ ನಾಲ್ಕನೇ ವರ್ಷವೂ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತಕ್ಕೆ ಏಷ್ಯಾದಲ್ಲಿ 3 ನೇ ಸ್ಥಾನ
ಸಮೀಕ್ಷೆಯಲ್ಲಿ ಭಾರತದ ಅತೀ ಹೆಚ್ಚು ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದು, ಜಾಗತಿಕ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದ್ದರೆ, ಏಷ್ಯಾದಲ್ಲಿ ಮೂರನೇ ಶ್ರೇಯಾಂಕದಲ್ಲಿದೆ. ಶ್ರೇಯಾಂಕಗಳ ಪ್ರಕಾರ ಟಾಪ್ 10 ವಿ.ವಿ.ಗಳು
1. ಆಕ್ಸ್‌ಫರ್ಡ್ ವಿ.ವಿ. ಯು.ಕೆ.
2. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೆರಿಕ
3. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯು.ಕೆ.
4. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಅಮೆರಿಕ
5. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೆರಿಕ
6. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಅಮೆರಿಕ
7. ಹಾರ್ವರ್ಡ್ ವಿಶ್ವವಿದ್ಯಾಲಯ, ಅಮೆರಿಕ
8. ಯೇಲ್ ವಿಶ್ವವಿದ್ಯಾಲಯ, ಅಮೆರಿಕ
9. ಚಿಕಾಗೊ ವಿಶ್ವವಿದ್ಯಾಲಯ, ಅಮೆರಿಕ
10. ಇಂಪೀರಿಯಲ್ ಕಾಲೇಜು ಲಂಡನ್, ಯು.ಕೆ. ಭಾರತದ ಟಾಪ್ 10 ವಿವಿಗಳು
2019 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಶೇನ್ ರ‍್ಯಾಕಿಂಗ್ ಫ್ರೆàಮ್ ವರ್ಕ್ ನಡೆಸಿದ ಸಮೀಕ್ಷೆಯ ಪ್ರಕಾರ
1. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್,ಬೆಂಗಳೂರು.
2. ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯ, ಹೊಸದಿಲ್ಲಿ.
3. ಬನರಸ್ ಹಿಂದೂ ವಿಶ್ವವಿದ್ಯಾಲಯ, ವಾರಾಣಸಿ.
4. ಹೈದರಾಬಾದ್ ವಿಶ್ವವಿದ್ಯಾಲಯ.
5. ಕಲ್ಕತ್ತಾ ವಿಶ್ವವಿದ್ಯಾಲಯ.
6. ಜಾಧವ್‌ಪುರ್ ವಿಶ್ವವಿದ್ಯಾಲಯ.
7. ಅಣ್ಣ ವಿಶ್ವವಿದ್ಯಾಲಯ, ತಮಿಳುನಾಡು.
8. ಅಮ್ರಿತ ವಿಶ್ವ ವಿದ್ಯಾಪೀಠಂ, ಕೇರಳ.
9. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್.
10. ಸಾವಿತ್ರಿ ಪುಲೇ ಪುಣೆ ವಿಶ್ವವಿದ್ಯಾಲಯ, ಪುಣೆ.