Advertisement

ಧಾರವಾಡ ಕೃಷಿ ವಿವಿ ಇನ್ನು ಸ್ಮಾರ್ಟ್‌!

03:43 PM Mar 22, 2021 | Team Udayavani |

ಧಾರವಾಡ: ಮಣ್ಣಿನ ಗುಣಕ್ಕೆ ತಕ್ಕ ಬೀಜದ ಆಯ್ಕೆ,ಬೀಜದ ಗುಣಕ್ಕೆ ತಕ್ಕ ವಾತಾವರಣ ಸೃಷ್ಟಿ, ಬೆಳೆಗೆಬೇಕಾದ ರಸಗೊಬ್ಬರ, ಬೆಳೆ ಬೆಳೆಯುವ ಪ್ರತಿಯೊಂದುಕ್ಷಣವನ್ನೂ ದಾಖಲಿಸುವ ತಂತ್ರಜ್ಞಾನ,ಬೆಳೆ ರೋಗಗಳ ಬಗ್ಗೆ ಹದ್ದಿನ ಕಣ್ಣಿಡುವ ವ್ಯವಸ್ಥೆ…

Advertisement

ಹೀಗೆ ಕೃಷಿಯ ಪ್ರತಿಯೊಂದುಅಂಶವೂ ಹೈಟೆಕ್‌ ತಾಂತ್ರಿಕತೆಯ ತೊಟ್ಟಿಲಲ್ಲಿಯೇ ಸೃಷ್ಟಿಯಾದರೆ ಖಂಡಿತಾ ಸ್ಮಾರ್ಟ್‌ ಆಗಿರುತ್ತದೆ.ದೇಶದ ಅತ್ಯುನ್ನತ ಹತ್ತುವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವಧಾರವಾಡದ ಕೃಷಿ ವಿವಿ ಇದೀಗ ಇಡೀ ಕ್ಯಾಂಪಸ್‌ ಸ್ಮಾರ್ಟ್‌ ಮಾಡಲು ಹೊರಟಿದೆ.

ವಿದೇಶಿ ನೆಲದಲ್ಲಿ ಅತ್ಯಾಧುನಿಕವಾಗಿ ಬೆಳೆಯುತ್ತಲೇ ನಡೆದಿರುವ ಕೃಷಿ ತಂತ್ರಜ್ಞಾನಗಳಿಗೆ ಸರಿಸಮವಾಗಿತನ್ನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದಕ್ಕಾಗಿವಿನೂತನವಾದ, ಸ್ಮಾರ್ಟ್‌ ತಂತ್ರಾಧಾರಿತವಾಗಿನಡೆಯುವ ಯೋಜನೆಯೊಂದನ್ನು ಸಿದ್ಧಪಡಿಸಿರುವಧಾರವಾಡ ಕೃಷಿ ವಿವಿ ಸ್ಮಾರ್ಟ್‌ ಕ್ಯಾಂಪಸ್‌ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ತೀವ್ರಗತಿಯಲ್ಲಿದೇಶ-ವಿದೇಶಗಳಲ್ಲಿ ಬೆಳೆಯುತ್ತಿರುವ ಅತ್ಯಾಧುನಿಕ ಕೃಷಿ ಕಂಪನಿಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸುತ್ತಿವೆ. ಆದರೆಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ವೇಗಕ್ಕೆ ತಕ್ಕಂತೆಇಲ್ಲಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ದೊಡ್ಡಸವಾಲಾಗುತ್ತಿದೆ. ಹೀಗಾಗಿ ಓದುವ ಹಂತದಲ್ಲಿಯೇಕೃಷಿ ವಿದ್ಯಾರ್ಥಿಗಳಿಗೆ ಮತ್ತು ಅವರು ಕೈಗೊಳ್ಳುವಸಂಶೋಧನೆಗಳಿಗೆ ಅನ್ವಯವಾಗುವಂತೆ ಹೈಟೆಕ್‌ತಂತ್ರಜ್ಞಾನ ಬಳಸುವುದಕ್ಕೆ ಸ್ಮಾರ್ಟ್‌ ಕ್ಯಾಂಪಸ್‌ ಸಹಾಯಕವಾಗಲಿದೆ.

ದೇಶದಲ್ಲೇ ಮೊದಲ ಪ್ರಯತ್ನ: ಈಗಾಗಲೇ ಧಾರವಾಡದ ಕೃಷಿ ವಿವಿ 22,210 ಕ್ವಿಂಟಲ್‌ನಷ್ಟು ಉತ್ತಮ ತಳಿ ಬೀಜಗಳನ್ನು ಉತ್ಪಾದಿಸಿ ಸೈ ಎನಿಸಿಕೊಂಡಿದೆ.ಕಳೆದ ಎರಡು ವರ್ಷದಲ್ಲಿ ತಳಿ ಅಭಿವೃದ್ಧಿ, ಅರಣ್ಯ ಬೆಳೆಸುವುದು, ಸಂಶೋಧನೆ ಕ್ಷೇತ್ರ ಹಾಗೂ ಕೃಷಿನವೋದ್ಯಮದಲ್ಲೂ ಅತ್ಯಂತ ಮುಂಚೂಣಿಯಲ್ಲಿ ನಿಂತಿದ್ದು, ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಬಾಚಿಕೊಂಡಿದೆ. ಇದೀಗ ಇದರ ಮುಂದುವರಿದ ಭಾಗ ಎನ್ನುವಂತೆ ಹೈಟೆಕ್‌ ಸ್ಮಾರ್ಟ್‌ ಕ್ಯಾಂಪಸ್‌ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡು ಸರ್ಕಾರಕ್ಕೆ 52 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ.

Advertisement

ಕೃಷಿಯಲ್ಲಿ ವಿಶ್ವದ ಇತರೆ ಹೈಟೆಕ್‌ವಿಶ್ವವಿದ್ಯಾಲಯಗಳು ಬಳಸಿಕೊಳ್ಳುತ್ತಿರುವ ಅತ್ಯಾಧುನಿಕತಂತ್ರಜ್ಞಾನ ಬಳಸಿಕೊಳ್ಳಲು ಇಲ್ಲಿಯೂ ಸಾಧ್ಯವಿದ್ದು,ಅದರ ಮಾದರಿ ಪ್ರಯೋಗ ಇಲ್ಲಿ ಮಾಡಬಹುದು ಎನ್ನುವುದನ್ನು ಕೃಷಿ ವಿವಿ ಪ್ರಸ್ತಾವನೆಯಲ್ಲಿ ವಿವರಣೆ ನೀಡಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಅನುದಾನದಲ್ಲಿಸ್ಮಾರ್ಟ್‌ ಕ್ಯಾಂಪಸ್‌ಗೆ ಅನುಕೂಲ ಮಾಡಿಕೊಡುವಂತೆ ಕೋರಲಾಗಿದೆ.

ಏನಿದು ಸ್ಮಾರ್ಟ್‌ ಕ್ಯಾಂಪಸ್‌? :ಸ್ಮಾರ್ಟ್‌ ಕ್ಯಾಂಪಸ್‌ ಎಂದರೆ ಎಲ್ಲವೂ ಹೈಟೆಕ್‌ಆಗಿ ಪರಿವರ್ತನೆಯಾಗುವುದು. ಬೋಧನೆ,ಕಲಿಕೆ, ಸಂಶೋಧನೆ, ಆವಿಷ್ಕಾರಗಳು,ಪ್ರಯೋಗಶೀಲತೆಯ ಮಜಲುಗಳು.ವಿದ್ಯಾರ್ಥಿಗಳಿಗೆ ವಿಭಿನ್ನ ತರಬೇತಿ, ತರಬೇತಿನೀಡುವ ವಿಧಾನಗಳು, ಬಳಸುವಯಂತ್ರೋಪಕರಣಗಳು ಸಹ ಹೈಟೆಕ್‌ಸ್ವರೂಪದಲ್ಲಿರುತ್ತವೆ. ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಮತ್ತು ತಳಿ ಅಭಿವೃದ್ಧಿಯಂತಹಪ್ರಯೋಗಗಳು ಪ್ರಯೋಗಾಲಯದಲ್ಲೇ ನಡೆದುಹೋಗುತ್ತವೆ. ಇನ್ನಷ್ಟು ಹೈಟೆಕ್‌ ಉಪಕರಣಗಳುಬರಲಿದ್ದು, ನಿಖರ ಮಾಹಿತಿ ಮತ್ತು ಸಂಶೋಧನೆಗೆಪೂರಕವಾಗಲಿವೆ. ಇನ್ನು ವಿದ್ಯಾರ್ಥಿಗಳುಕೃಷಿ ವಿವಿ ಕ್ಯಾಂಪಸ್‌ಗೆ ಬಂದ ದಿನದಿಂದ ಇಲ್ಲಿ ಪದವಿ ಅಥವಾ ಸಂಶೋಧನೆ ಮುಗಿಸಿ ಹೊರಗೆ ಹೋಗುವ ದಿನದವರೆಗಿನ ಅವರ ಪ್ರತಿಯೊಂದು ಕಾರ್ಯ ಚಟುವಟಿಕೆಗಳು ದಾಖಲಾಗುತ್ತವೆ. ಅವರ ಎಲ್ಲಾ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ನಡೆಯುತ್ತವೆ. ಅವರು ಬ್ಯಾಂಕಿಗೆಹೋಗಿ ಹಣ ಕಟ್ಟಬೇಕಿಲ್ಲ. ತಮ್ಮ ಮೊಬೈಲ್‌ಮೂಲಕವೇ ವಿವಿಯ ಎಲ್ಲ ವ್ಯವಹಾರಮಾಡಬಹುದು. ಇಂತಹ ಹತ್ತಾರು ವಿಚಾರಗಳು ಸ್ಮಾರ್ಟ್‌ ಕ್ಯಾಂಪಸ್‌ ಯೋಜನೆಯಡಿ ಬರಲಿವೆ.

ಕೋವಿಡ್ ದಿಂದ ಹಿನ್ನಡೆ  : ಕಳೆದೊಂದು ವರ್ಷದಿಂದ ಕೋವಿಡ್ ಲಾಕ್‌ಡೌನ್‌ನಿಂದ ಕೃಷಿ ವಿವಿಯ ಅನೇಕ ಚಟುವಟಿಕೆಗಳಿಗೆ ಕೊಂಚಹಿನ್ನಡೆಯುಂಟಾಗಿದೆ. ವಿಶ್ವಮಟ್ಟದ ಕೃಷಿ ಅಧ್ಯಯನ ನಡೆಸಲು 120 ವಿದ್ಯಾರ್ಥಿಗಳು ವಿದೇಶ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣ ಅವರೆಲ್ಲಕಾಯುತ್ತಲೇ ಕುಳಿತಿದ್ದಾರೆ. ಅದರಂತೆಯೇ ಕೃಷಿ ವಿವಿಹತ್ತಾರು ಅಂತಾರಾಷ್ಟ್ರೀಯ ವಿವಿ ಜತೆ ಸಂಶೋಧನೆ, ತಂತ್ರಜ್ಞಾನ ಮತ್ತು ತಳಿಗಳ ಅಭಿವೃದ್ಧಿ ಸೇರಿದಂತೆ ಅನೇಕಒಡಂಬಡಿಕೆ ಮಾಡಿಕೊಂಡಿದ್ದು, ಆ ಯೋಜನೆಗಳ ಬೆಳವಣಿಗೆಗೂ ಕೊಂಚ ಹಿನ್ನಡೆಯಾಗಿದೆ.ಘಿ

ಧಾರವಾಡ ಕೃಷಿ ವಿವಿ ಈಗಾಗಲೇ ದೇಶದ ಅತ್ಯುನ್ನತ 10 ವಿವಿಗಳಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಅಂತಾರಾಷ್ಟ್ರೀಯ ಮತ್ತು ಖಾಸಗಿಕೃಷಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ಗಳಿದ್ದು,ಅದಕ್ಕೆ ವಿದ್ಯಾರ್ಥಿಗಳನ್ನುಸಜ್ಜುಗೊಳಿಸಬೇಕಿದೆ. ಹೀಗಾಗಿ ಸ್ಮಾರ್ಟ್‌ ಕ್ಯಾಂಪಸ್‌ ಗಾಗಿ ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿದ್ದೇವೆ. ಯೋಜನೆಆರಂಭಗೊಂಡು ಎರಡು ವರ್ಷದಲ್ಲಿ ಕ್ಯಾಂಪಸ್‌ಸಂಪೂರ್ಣ ಸ್ಮಾರ್ಟ್‌ ಆಗಲಿದೆ. – ಡಾ| ಎಂ.ಬಿ. ಚೆಟ್ಟಿ, ಧಾರವಾಡ ಕೃಷಿ ವಿವಿ ಕುಲಪತಿ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next