ನೆಲಮಂಗಲ: ಐತಿಹಾಸಿಕ ಸಿದ್ದರಬೆಟ್ಟದ ಅಭಿವೃದ್ಧಿ ಹಾಗೂ ಹಿಂದೂ ದೇವಾಲಯಗಳ ಜೀಣೋìದ್ದಾರಕ್ಕಾಗಿ ಹನುಮಜಯಂತಿಯಂದು ಪಾದಯಾತ್ರೆಯಲ್ಲಿ ಬೆಟ್ಟಕ್ಕೆ ಬಂದ ಸಾವಿರಾರುಹನುಮ ಭಕ್ತರಿಗೆ ಮುಸ್ಲಿಂ ಮುಖಂಡರು ಸಕ್ಕರೆ ನೀಡಿ ಸ್ವಾಗತಿಸಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಸೋಂಪುರ ಹೋಬಳಿಯ ಸಿದ್ದರಬೆಟ್ಟವು 500 ವರ್ಷಗಳ ಇತಿಹಾಸ ಹೊಂದಿದ್ದು, ಸಿದ್ದಪ್ಪ, ಹನುಮಂತ, ಗಣೇಶ, ನರಸಿಂಹಸ್ವಾಮಿ, ಕಲ್ಯಾಣಿಗಳು ಸೇರಿದಂತೆ ಹತ್ತಾರು ಹಿಂದೂ ದೇವಾಲಯಗಳು ಅಳಿವಿನಂಚಿನಲ್ಲಿರುವುದನ್ನು ಗಮನಿಸಿದ ಸ್ಥಳೀಯರು ದೇವಾಲಯಗಳ ಅಭಿವೃದ್ಧಿಗೆ ಹನುಮಜಯಂತಿಯೊಂದು ಅಡಿಗಲ್ಲು ನೆಟ್ಟಿದ್ದು ಮುಂದಿನ ದಿನಗಳಲ್ಲಿ ಸಿದ್ದರಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
ಸಾವಿರಾರು ಭಕ್ತರ ದಂಡು: ಶ್ರೀ ನಿಜಗಲ್ಲು ಸಿದ್ದರಬೆಟ್ಟ ಸೇವಾಸಮಿತಿಯು ಕೇವಲ 500 ಜನರ ಸಮ್ಮುಖದಲ್ಲಿ ಹನುಮಜಯಂತಿ ಆಚರಣೆ ಮಾಡಲು ತೀರ್ಮಾನಿಸಿತ್ತು. ಆದರೆ ಸಿದ್ದರಬೆಟ್ಟಕ್ಕೆ ಲೇಸರ್ ಬೆಳಕಿನ ಕಲರವ ಹಾಗೂ ಹನುಮಭಕ್ತರ ದಂಡು ಯಾರೂ ಊಹಿಸಲಾಗದಂತೆ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಹಾಗೂ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಟ್ಟವನ್ನು ಹತ್ತಿ ದೇವರ ದರ್ಶನ ಪಡೆದು ಕುಣಿದು ಕುಪ್ಪಣಿಸಿದ್ದಾರೆ.
ಪಾದಯಾತ್ರೆ: ನೆಲಮಂಗಲ, ತ್ಯಾಮಗೊಂಡ್ಲು,ಸೋಂಪುರ, ಗೊಲ್ಲಹಳ್ಳಿ ಹಾಗೂ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಹನುಮಮಾಲೆ ಧರಿಸಿದ ಭಕ್ತರು 30ಕಿ.ಮೀಗೂ ಹೆಚ್ಚು ದೂರದ ಸಿದ್ದರ ಬೆಟ್ಟಕ್ಕೆಪಾದಯಾತ್ರೆಯ ಮೂಲಕ ಬಂದವರಿಗೆ ಸೋಂಪುರದ ಮಹಿಳೆಯರು ಪೂರ್ಣಕುಂಭ ಸ್ವಾಗತವನ್ನು ಮಾಡಿದರು. 2 ಕಿ.ಮೀ. ದೂರು ಹನುಮಮಾಲೆದಾರರು, ಪೂರ್ಣಕುಂಭ ಹಾಗೂ ಹನುಮ ಭಕ್ತರದ ದಂಡು ಸೇರಿದ್ದು ಐತಿಹಾಸಿಕ ಸ್ಥಳದಲ್ಲಿ ಇತಿಹಾಸ ಸೃಷ್ಟಿಸಿದ ರೀತಿ ಕಂಡುಬಂತು. ಪಾದಯಾತ್ರೆಯಲ್ಲಿ ಶ್ರೀ ಸಿದ್ಧಲಿಂಗಸ್ವಾಮೀಜಿ, ಶ್ರೀ ಡಾ.ಬಸವರಮಾನಂದಸ್ವಾಮಿ ಭಾಗವಹಿಸಿದ್ದರು.
ಸಂಪೂರ್ಣ ಬೆಟ್ಟಕ್ಕೆ ಲೇಸರ್: ಸಿದ್ದರ ಬೆಟ್ಟದ ಬಂಡೆಗಳು ಲೇಸರ್ ಲೈಟ್‌ಗಳ ಮೂಲಕ ಬೆಳಕಿನ ಚಿತ್ತಾರದಲ್ಲಿ ಮುಳುಗಿ ಹೋಗಿದ್ದರೆಸಾವಿರಾರು ಭಕ್ತರು ಬೆಟ್ಟದ ಸುಂದರ ಬೆಳಕಿನ ದೃಶ್ಯನೋಡಲು ನೂರಾರು ಕಿಲೋಮೀಟರ್‌ಗಳಿಂದ ಬೆಟ್ಟಕ್ಕೆ ಬಂದಿರುವುದು ವಿಶೇಷವಾಗಿತ್ತು. ಬಿದ್ದು ಹೋಗಿರುವ ಹನುಮನ ದೇವಾಲಯದಲ್ಲಿ ಹನುಮ ವಿಗ್ರಹಕ್ಕೆ ಅಭಿಷೇಕ, ಹೋಮಹವನ ಮಾಡುವ ಮೂಲಕ ಶುದ್ಧಿ ಮಾಡಿ ವಿಶೇಷ ಅಲಂಕಾರ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಹನುಮ ಮಾಲೆ ಧಾರಿಗಳು ಹನುಮಂತನ ದರ್ಶನ ಪಡೆದು ಪುನೀತರಾದರು.ಸೋಂಪುರದಿಂದ ಸಿದ್ದರಬೆಟ್ಟದವರೆಗೂ ರಸ್ತೆಪೂರ್ಣ ಕೇಸರಿ ಧರಿಸಿದ ಹನುಮಭಕ್ತರ ಸಾಲು ಕಂಡರೇ ಸಿದ್ದರಬೆಟ್ಟ ಬಂದ ಹನುಮಭಕ್ತರಿಂದ ಬೆಟ್ಟ ಕೇಸರಿಮಯದಂತೆ ಕಂಡುಬಂತು.
32 ಕಿ.ಮೀ. ನಡೆದ ಅಜ್ಜಿ :
ನೆಲಮಂಗಲದಿಂದ ಸಿದ್ದರಬೆಟ್ಟಕ್ಕೆ ಹನುಮಮಾಲೆ ಧರಿಸಿದ 70 ವರ್ಷ ತುಂಬಿದ ಅಜ್ಜಿಯೊಬ್ಬರು32ಕಿ.ಮೀ. ಪಾದಯಾತ್ರೆಯನ್ನು ಭಾಗವಹಿಸಿ ಸಿದ್ದರಬೆಟ್ಟವನ್ನು ಹತ್ತಿ ದೇವರ ದರ್ಶನ ಮಾಡಿದ್ದು ಅಚ್ಚರಿಯ ಜತೆ ಅದ್ಭುತ. ಸಿದ್ದರಬೆಟ್ಟದಲ್ಲಿ ಮಸೀದಿ ಇದೇ ಅಲ್ಲಿ ಕೋಮುಸಂಘರ್ಷಕ್ಕೆ ಕಾರಣವಾಗುತ್ತದೆ ಆದ್ದರಿಂದ ಹನುಮಜಯಂತಿ ಕಾರ್ಯಕ್ರಮ ಮಾಡದಂತೆ ಸುಳ್ಳು ಪ್ರಚಾರ ಮಾಡಿದವರಿಗೆ ಪಾಠವಾಗುವಂತೆ ಮುಸ್ಲಿಂ ವ್ಯಕ್ತಿಗಳು ಹನುಮಮಾಲೆ ಧರಿಸಿ ಸಿದ್ದರ ಬೆಟ್ಟಕ್ಕೆ ಬಂದ ಹನುಮಭಕ್ತರಿಗೆ ಸಕ್ಕರೆ ನೀಡಿ ಸ್ವಾಗತನೀಡುವುದಲ್ಲದೇ ಬೆಟ್ಟದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸುಳ್ಳು ಪ್ರಚಾರದಿಂದ ಏನನ್ನು ಸಾಧಿಸಲಾಗುವುದಿಲ್ಲ ಎಂದು ಶ್ರೀ ನಿಜಗಲ್ಲು ಸಿದ್ದರಬೆಟ್ಟ ಸೇವಾಸಮಿತಿ ಸದಸ್ಯರು ತಿಳಿಸಿದ್ದಾರೆ.