Advertisement
ಗಂಭೀರ ಗಾಯಗೊಂಡಿದ್ದ ಥಾಂಪ್ಸನ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.
ಬುಧವಾರ ಮ್ಯಾನ್‌ಹ್ಯಾಟನ್‌ನಲ್ಲಿ ಯುನೈಟೆಡ್‌ಹೆಲ್ತ್‌ನ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತು ಅದರಂತೆ ಎಲ್ಲ ತಯಾರಿಗಳೂ ನಡೆದಿತ್ತು ಇನ್ನೇನು ಗಣ್ಯರು ಸಭೆಗೆ ಆಗಮಿಸುತ್ತಿದ್ದರು ಹಾಗೆಯೇ ಯುನೈಟೆಡ್ ಹೆಲ್ತ್‌ನ ವಿಮಾ ಘಟಕದ ಸಿಇಒ ಬ್ರಿಯಾನ್ ಥಾಂಪ್ಸನ್ ಅವರೂ ಹೋಟೆಲ್ ಕಡೆಗೆ ಬರುತ್ತಿದ್ದರು ಈ ವೇಳೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಹೂಡಿಕೆದಾರರ ಸಮಾವೇಶವನ್ನು ಮುಂದೂಡಲಾಯಿತು.
Related Articles
ಏಪ್ರಿಲ್ 2021 ರಲ್ಲಿ ಯುನೈಟೆಡ್ ಹೆಲ್ತ್ ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬ್ರಿಯಾನ್ ಥಾಂಪ್ಸನ್, ಅವರ ನಾಯಕತ್ವದಿಂದ ಸಂಸ್ಥೆ ಉನ್ನತಮಟ್ಟಕ್ಕೆ ಏರುವಲ್ಲಿ ಅವರ ಶ್ರಮ ಮಹತ್ವದ್ದು ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ ಇದೀಗ ಅವರ ಅಗಲುವಿಕೆ ಸಂಸ್ಥೆಗೆ ಅಪಾರ ನಷ್ಟ ಎಂದು ಹೇಳಿಕೊಂಡಿದ್ದಾರೆ.
Advertisement
ಜೀವ ಬೆದರಿಕೆ ಇತ್ತು: ಇತ್ತ ಥಾಂಪ್ಸನ್ ಹತ್ಯೆ ಬೆನ್ನಲ್ಲೇ ಪೊಲೀಸರು ಹಂತಕನ ಪತ್ತೆ ಕಾರ್ಯಾಚರಣೆ ನಡೆಸುತ್ತಿರುವ ನಡುವೆ ಥಾಂಪ್ಸನ್ ಅವರ ಪತ್ನಿ ನನ್ನ ಪತಿಗೆ ಜೀವ ಬೆದರಿಕೆ ಕರೆಗಳು ಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.