Advertisement

ಒಗ್ಗಟ್ಟಿದ್ದರೆ ರಾಜ್ಯಭಾರ: ಉಗ್ರಪ್ಪ

11:58 AM Sep 17, 2017 | Team Udayavani |

ಧಾರವಾಡ: ವಾಲ್ಮೀಕಿ ಸಮಾಜ ಪಕ್ಷ ಬೇಧ ಮರೆತು ಒಗ್ಗಟ್ಟಿನಿಂದ ಜಾಗೃತರಾದರೆ ಮುಂದಿನ ಸರ್ಕಾರದಲ್ಲಿ ಶೇ.50ರಷ್ಟು ಸಮಾಜದ ನಾಯಕರು ರಾಜ್ಯಭಾರ ನಡೆಸಬಹುದು ಎಂದು ವಿಪ ಸದಸ್ಯ ವಿ.ಎಸ್‌. ಉಗ್ರಪ್ಪ ಹೇಳಿದರು. ನಗರದಲ್ಲಿ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಸಹಕಾರ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ರಾಯಾಪುರ ಇಸ್ಕಾನ್‌ ಮಂದಿರದ ಹಿಂಬದಿಯ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅಡ್ಡಿಯಾಗಿರುವ ತೊಂದರೆ ನಿವಾರಿಸಿ ಭವನ ನಿರ್ಮಾಣ ಮಾಡುವ ಕಾರ್ಯ ಹಾಗೂ ವಾಲ್ಮೀಕಿ ಪೀಠ ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚಿಸಲಾಗುವುದು ಎಂದರು. ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಬಿ.ವಿ. ನಾಯಕ, ಸಮಾಜದ ಜಿಲ್ಲಾಧ್ಯಕ್ಷ ಸುರೇಶ ತಳವಾರ ಇತರರಿದ್ದರು. 

ಇನ್ನೂ ತಡವೇಕೆ..?
ಹುಬ್ಬಳ್ಳಿ:
ಜನಮನ್ನಣೆ ದೊರೆಯದೆ ಯಡಿಯೂರಪ್ಪ ಹತಾಶರಾಗಿದ್ದು, ಮುಖ್ಯಮಂತ್ರಿ, ಸಚಿವರ ವಿರುದ್ಧದ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಇದ್ದಾರೆ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಬೇಡ ಎನ್ನುವವರು ಯಾರು ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ತಿಳಿಸಿದರು.

“ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೂವರು ಸಚಿವರ ವಿರುದ್ಧದ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡುವೆ ಎಂದಿದ್ದರು. ಇದೀಗ ಮುಖ್ಯಮಂತ್ರಿಯವರನ್ನೂ ಸೇರಿಸಿಕೊಂಡಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಬಿಡುಗಡೆಗೆ ತಡವೇಕೆ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next