Advertisement

ಅಮೆರಿಕದಲ್ಲಿ ಒಂದೇ ದಿನ 1.77 ಲಕ್ಷ ದಾಖಲೆ ಪ್ರಮಾಣದ ಕೋವಿಡ್ ಪ್ರಕರಣ ಪತ್ತೆ

03:05 PM Nov 14, 2020 | Nagendra Trasi |

ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡತೊಡಗಿದ್ದು, ಕಳೆದ 24ಗಂಟೆಯಲ್ಲಿ (ನವೆಂಬರ್ 13, 2020) 1,77, 000 ಹೊಸ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಪತ್ತೆಯಾಗಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

Advertisement

ಅಮೆರಿಕದ ಪ್ರತಿಯೊಂದು ರಾಜ್ಯದಲ್ಲಿಯೂ ಕೋವಿಡ್ 19 ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿದೆ. ಇದರಲ್ಲಿ ಇಲಿನಾಯ್ಸ್, ಲೋವಾ, ಕಾನ್ಸಾ, ಒಹಿಯೋ ಸೇರಿದಂತೆ ಹತ್ತು ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ದಾಖಲಾಗಿರುವುದಾಗಿ ವರದಿ ತಿಳಿಸಿದೆ.

ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಮತ್ತೊಂದು ಸುತ್ತಿನ ಹೊಸ ನಿರ್ಬಂಧಗಳು ಜಾರಿಯಾಗತೊಡಗಿದೆ. ಪಶ್ಚಿಮ ವರ್ಜಿನಿಯಾದಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ಮುಖದ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ. ನ್ಯೂಯಾರ್ಕ್ ನಗರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳನ್ನು ತೆರೆಯುವ ಸಮಯದ ಮೇಲೆ ಮಿತಿ ಹೇರಿದೆ ಎಂದು ಹೇಳಿದೆ.

ಕೋವಿಡ್ 19 ಲಸಿಕೆ ಲಭ್ಯವಾಗುವವರೆಗೂ ಹೆಚ್ಚಿನ ಮುಂಜಾಗ್ರತೆ ಅನುಸರಿಸಬೇಕೆಂದು ತಜ್ಞರು ಎಚ್ಚರಿಕೆ ನೀಡಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.  ಅಮೆರಿಕದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣ 1,07, 28,497ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next