Advertisement

ದಕ್ಷಿಣ ಏಷ್ಯಾ ಐಸಿಸ್‌ ಉಗ್ರ ಸಂಘಟನೆ ನಿಷೇಧಿಸಿದ ವಿಶ್ವಸಂಸ್ಥೆ

01:19 AM May 16, 2019 | mahesh |

ವಾಷಿಂಗ್ಟನ್‌: ಪುಲ್ವಾಮಾ ದಾಳಿಯ ಸಂಚುಕೋರ ಹಾಗೂ ಜೈಶ್‌ ಎ ಮೊಹಮದ್‌ ಉಗ್ರ ಸಂಘಟನೆಯ ನಾಯಕ ಮಸೂದ್‌ ಅಜರ್‌ಗೆ ನಿಷೇಧ ಹೇರಿರುವ ವಿಶ್ವಸಂಸ್ಥೆ ಈಗ ಪಾಕಿಸ್ಥಾನದ ಮತ್ತೂಂದು ಉಗ್ರ ಸಂಘಟನೆಯನ್ನು ನಿಷೇಧಿಸಿದೆ.

Advertisement

ಐಎಸ್‌ಐಎಲ್‌ಖೋರಾ ಸಾನ್‌ ಎಂಬ ಈ ಉಗ್ರ ಸಂಘಟನೆಯನ್ನು ಐಸಿಸ್‌ನ ದ. ಏಷ್ಯಾ ಶಾಖೆ ಎಂದೇ ಪರಿಗಣಿಸ ಲಾಗುತ್ತಿತ್ತು. ತಾಲಿಬಾನ್‌ ಉಗ್ರ ಸಂಘಟನೆ  ಹುಟ್ಟುಹಾಕಿದ ಅಬೂಬಕರ್‌ ಅಲ್‌ ಬಾಗ್ಧಾದಿಯೇ 2015ರ ಜನವರಿ 10ರಂದು ಈ ಉಗ್ರ ಸಂಘಟನೆಯನ್ನು ಪಾಕಿಸ್ಥಾನದಲ್ಲಿ ಸ್ಥಾಪಿಸಿದ್ದ ಎನ್ನಲಾಗಿದೆ. ಅಫ್ಘಾನಿಸ್ಥಾನ, ಪಾಕ್‌ನ‌ಲ್ಲಿ ಹಲವು ಉಗ್ರ ಕೃತ್ಯಗಳನ್ನು ಈ ಸಂಘಟನೆ ನಡೆಸಿದೆ.

ಈವರೆಗೆ ಸುಮಾರು 150 ಕ್ಕೂ ಹೆಚ್ಚು ಜನರನ್ನು ಈ ಸಂಘಟನೆ ಹತ್ಯೆಗೈದಿದೆ. ಪಾಕಿಸ್ಥಾನದ ಖೆಟ್ಟಾ ಪ್ರಾಂತ್ಯದಲ್ಲಿ ಈ ಸಂಘಟನೆಯ ಪ್ರಭಾವ ಹೆಚ್ಚಾಗಿತ್ತು. ಲಷ್ಕರ್‌, ಜೆಯುಡಿ, ಹಕ್ಕಾನಿ ನೆಟ್‌ವರ್ಕ್‌, ಇತರ ಕೆಲವು ಸಂಘ ಟನೆಯ ಸದಸ್ಯರು ಐಎಸ್‌ಐಎಲ್‌ಕೆಗೆ ಸೇರಿಕೊಂಡಿದ್ದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next