Advertisement

ಇರಾನ್‌ ಜತೆಗೆ ಹೊಸ ಒಪ್ಪಂದ ; ಅಧ್ಯಕ್ಷ ಟ್ರಂಪ್‌ ಸಲಹೆ ಅನುಸರಿಸೋಣ: ಬ್ರಿಟನ್‌ ಪ್ರಧಾನಿ

09:07 AM Jan 16, 2020 | Hari Prasad |

ಹೊಸದಿಲ್ಲಿ/ಲಂಡನ್‌: ಇರಾನ್‌ ಜತೆಗೆ 2015ರಲ್ಲಿ ಮಾಡಿಕೊಂಡಿರುವ ಅಣು ಒಪ್ಪಂದ ಸರಿ ಇಲ್ಲದೇ ಇದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದಂತೆ ಹೊಸ ಒಡಬಂಡಿಕೆ ಮಾಡಿಕೊಳ್ಳೋಣ ಎಂದಿದ್ದಾರೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌. ಲಂಡನ್‌ನಲ್ಲಿ ‘ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕದ ದೃಷ್ಟಿಯಿಂದ ಹಾಲಿ ಒಪ್ಪಂದದಿಂದ ಪ್ರಯೋಜನವಿಲ್ಲ. ಒಬಾಮ ಅವಧಿಯದ್ದನ್ನು ಬದಲಿಸೋಣ ಎಂದರು.

Advertisement

ಅದಕ್ಕೆ ತಿರುಗೇಟು ನೀಡಿರುವ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಯಾವುದೇ ರೀತಿಯಲ್ಲಿ ಹೊಸ ಒಪ್ಪಂದ ಸಾಧ್ಯವೇ ಇಲ್ಲ. 2015ರ ಒಪ್ಪಂದವೇ ಜಾರಿಯಲ್ಲಿದೆ. ಬ್ರಿಟನ್‌ ಪ್ರಧಾನಿ ಲಂಡನ್‌ನಲ್ಲಿ ಕುಳಿತು ಏನು ಮಾತ ನಾಡುತ್ತಿದ್ದಾರೋ ತಿಳಿಯದಾಗಿದೆ ಎಂದಿದ್ದಾರೆ. ಇದೇ ವೇಳೆ ಜರ್ಮನಿ, ಫ್ರಾನ್ಸ್‌, ಬ್ರಿಟನ್‌ ಹಾಲಿ ಒಪ್ಪಂದವನ್ನು ಇರಾನ್‌ ಉಲ್ಲಂಘಿಸಿದೆ ಎಂದು ದೂರಿವೆ.

ದೊವಾಲ್‌ ಜತೆಗೆ ಭೇಟಿ: ಇರಾನ್‌ ವಿದೇಶಾಂಗ ಸಚಿವ ಜಾವದ್‌ ಝಾಫ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ ಜತೆಗೆ ಮಾತುಕತೆ ನಡೆಸಿದ್ದಾರೆ. ಸದ್ಯ ಉಂಟಾಗಿರುವ ಬಿಕ್ಕಟ್ಟನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮಾರ್ಗೋಪಾಯಗಳನ್ನೂ ಉಭಯ ನಾಯಕರು ಚರ್ಚಿಸಿದ್ದಾರೆ.

ಅಮೆರಿಕ ಮತ್ತು ಇರಾನ್‌ ನಡುವೆ ಉಂಟಾಗಿರುವ ಬಿಕ್ಕಟ್ಟು ಬಗೆ ಹರಿಸುವ ನಿಟ್ಟಿನಲ್ಲಿ ಭಾರತ ಪ್ರಧಾನ ಪಾತ್ರ ವಹಿಸಬೇಕು ಎಂದು ಇರಾನ್‌ ವಿದೇಶಾಂಗ ಸಚಿವ ಜಾವದ್‌ ಝಾಫ್ರಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ‘ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ರಷ್ಯಾ ವಿದೇಶಾಂಗ ಸಚಿವ ಸರ್ಗಿ ಲಾರ್ವೊ ಜತೆಗೆ ಝಾ ಫ್ರಿ ಮಾತುಕತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next