Advertisement

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

04:24 PM Apr 06, 2020 | Hari Prasad |

ಲಂಡನ್‌: ಭಾರತದಲ್ಲಿ 35 ಸಾವಿರ ಮಂದಿ ಬ್ರಟಿಷ್‌ ಪ್ರಜೆಗಳಿದ್ದು, ಸ್ವದೇಶಕ್ಕೆ ಮರುಳಲು ಇಚ್ಛಿಸಿರುವ ಅವರನ್ನು ಮುಂದಿನ ವಾರ ಏಳು ವಿಶೇಷ ವಿಮಾನಗಳ ಮೂಲಕ ಕರೆತರಲಾಗುವುದು ಎಂದು ಬ್ರಿಟನ್‌ ಸರಕಾರ ಭಾನುವಾರ ತಿಳಿಸಿದೆ.

Advertisement

ಕೋವಿಡ್ 19 ವೈರಸ್ ಹಿನ್ನೆಲೆ ಲಾಕ್‌ಡೌನ್‌ ಆಗಿರುವುದರಿಂದ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದೀಗ ಭಾರತದಲ್ಲಿ 35 ಸಾವಿರ ಬ್ರಿಟಷ್‌ ನಾಗರಿಕರಿದ್ದು, ಈ ಪೈಕಿ 20 ಸಾವಿರ ಮಂದಿ ಬ್ರಿಟಿಷ್‌ ಹೈ ಕಮಿಷನ್‌ ಸಂಪರ್ಕದಲಿದ್ದಾರೆ.

ತಮ್ಮನ್ನು ತವರಿಗೆ ಆದಷ್ಟು ಬೇಗ ಕರೆದುಕೊಂದು ಹೋಗಿ ಎಂದು ಮನವಿ ಮಾಡಿದ್ದಾರೆ. ಅವರನ್ನೆಲ್ಲಾ ಮುಂದಿನವಾರ ಮುಂಬಯಿ, ದೆಹಲಿ, ಗೋವಾದಿಂದ ವಿಶೇಷ ವಿಮಾನಗಳ ಮೂಲಕ ಬ್ರಿಟನ್‌ಗೆ ಕರೆ ತರಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next