Advertisement

ಯುನೈಟೆಡ್‌ ಆಸ್ಪತ್ರೆ ದಶಮಾನೋತ್ಸವ-ಆರೋಗ್ಯ ಶಿಬಿರ

10:31 AM Feb 20, 2022 | Team Udayavani |

ಕಲಬುರಗಿ: ನಗರದ ಯುನೈಟೆಡ್‌ ಆಸ್ಪತ್ರೆಯ ದಶಮಾನೋತ್ಸವ ನಿಮಿತ್ತ ಶನಿವಾರ ಹೊಸ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

Advertisement

ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶದ ಅಂದಾಜು 2,200 ಜನ ಶಿಬಿರದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿದರು. ದಿನವಿಡಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 700 ಜನ ರೋಗಿಗಳು ಲ್ಯಾಬ್‌ ಪರೀಕ್ಷೆ ಮಾಡಿಕೊಂಡರು. 100ಕ್ಕೂ ಅಧಿಕ ಮಂದಿ ರೋಗಿಗಳನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಯಿತು. 260 ರೋಗಿಗಳು ಅಲ್ಟ್ರಸೌಂಡ್‌ ತಪಾಸಣೆ ಹಾಗೂ 12 ರೋಗಿಗಳಿಗೆ ಎಂಆರ್‌ಐ ಸ್ಕ್ಯಾನ್‌ ಮತ್ತು 250ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ಸೇರಿದಂತೆ ವಿವಿಧ ವೈದ್ಯಕೀಯ ತಪಾಸಣೆ ಕೈಗೊಳ್ಳಲಾಯಿತು.

ಡಿಸಿ ಯಶವಂತ ಗುರುಕರ್‌ ಉದ್ಘಾಟಿಸಿದರು. ಆಸ್ಪತ್ರೆಯ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ ಸಿದ್ಧಾರೆಡ್ಡಿ ಮಾತನಾಡಿದರು. ಶ್ರೀನಿವಾಸ ಸರಡಗಿ ಶಕ್ತಿ ಪೀಠದ ಡಾ| ಅಪ್ಪಾರಾವ ದೇವಿಮುತ್ಯಾ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ನಿರ್ದೇಶಕಿ ಡಾ| ವೀಣಾ ಸಿದ್ಧಾರೆಡ್ಡಿ ರೋಗಿಗಳು ತಪಾಸಣೆಯಲ್ಲಿ ತೊಡಗಿದ್ದರು.

ಡಾ| ವಿನಯಸಾಗರ ಶರ್ಮಾ, ಡಾ| ಅನಿಲ ಪಾಟೀಲ, ಡಾ| ಕೈಲಾಶ್‌ ಬಾನಾಲೆ, ಡಾ| ಬಸವಪ್ರಭು ಅಮರಖೇಡ್‌, ಡಾ| ಮೊಹಮ್ಮದ್‌ ಅಬ್ದುಲ್‌ ಬಸೀರ್‌, ಡಾ| ರಾಜು ಕುಲಕರ್ಣಿ, ಡಾ| ನಿಶಾಂತ್‌, ಡಾ| ಉಡುಪಿ ಕೃಷ್ಣ ಜೋಶಿ, ಡಾ| ವೀರೇಶ ಸಲಗರ, ಡಾ| ದಯಾನಂದ ರೆಡ್ಡಿ ಮತ್ತು ಡಾ| ಶಿವರಾಜ ಹಂಚಿನಾಳ, ಡಾ| ವಿವೇಕ ಪಾಟೀಲ, ಡಾ| ಶಿವಾನಂದ ಪಾಟೀಲ, ಡಾ| ಮಮತಾ ಪಾಟೀಲ, ಡಾ| ಪ್ರಶಾಂತ ಕುಲಕರ್ಣಿ, ಡಾ| ಕೇದಾರನಾಥ ರಟಕಲ್‌ ತಪಾಸಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next