ಕಾರ್ಕಳ: ವಿಜೇತ ವಿಶೇಷ ಶಾಲೆಯಲ್ಲಿ ಗಣ ರಾಜ್ಯೋತ್ಸವವನ್ನು ಮಂಗಳವಾರ ವಿಶೇಷವಾಗಿ ಆಚರಿಸಲಾಯಿತು.
ಮೇಕ್ ಸಂ ಒನ್ ಸ್ಟೈಲ್ ತಂಡದ ವತಿಯಿಂದ ವಿಜೇತ ವಿಶೇಷ ಶಾಲಾ ಗೋಡೆಯಲ್ಲಿ ಚಿತ್ರಿಸಿದ ಇಂಡಿಯಾ ಬಾರ್ಡರ್ (ಭಾರತದ ಗಡಿ ಪ್ರದೇಶ) ಚಿತ್ರಣವನ್ನು ವಿಜೇತ ವಿಶೇಷ ಶಾಲೆಗೆ ಸಮರ್ಪಿಸಿ, ದೇಶದ ಸೈನಿಕರಿಗೆ ಗೌರವ ಸಮರ್ಪಿಸುವ ಮೂಲಕ ಆಚರಿಸಿದರು.
ಧ್ವಜಾರೋಹಣವನ್ನು ಮೋಹನ್ ಶೆಣೈ ಮತ್ತು ಅರುಣಾ ಎಂ. ಶೆಣೈ ದಂಪತಿ ನೆರವೇರಿಸಿದರು. ಜಿಲ್ಲಾ ನಕ್ಸಲ್ ನಿಗ್ರಹ ದಳದ ಎಸ್.ಪಿ., (ಐಪಿಎಸ್) ಅಧಿಕಾರಿ ನಿಖೀಲ್ ಕುಮಾ ರ್‌ಬುಲ್ಲವರ್ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಕೆ.ಎಂ.ಇ.ಎಸ್. ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್, ದಂತವೈದ್ಯ ಡಾ| ವರ್ಣೋಧರ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಶಾಲಾ ಸಂಸ್ಥಾಪಕಿ ಡಾ| ಕಾಂತಿ ಹರೀಶ್, ರತ್ನಾಕರ್‌ಅಮೀನ್, ಸಂತೋಷ್ ನಾಯಕ್, ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೇಕ್ ಸಂ ಒನ್ ಸ್ಟೈಲ್ ತಂಡದ ವತಿಯಿಂದ ಡಾ| ವರ್ಣೋಧರ್ ಹಾಗೂ ಆರ್ಟಿಸ್ಟ್ ನವೀನ್ ಅವರನ್ನು ಗೌರವಿಸಲಾಯಿತು. ಮೋಹನ್ ಶೆಣೈ ದಂಪತಿ ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಿ, ಸಂಸ್ಥೆಗೆ ದೇಣಿಗೆ ನೀಡಿದರು.
ಮೇಕ್ ಸಂ ಒನ್ ಸ್ಟೈಲ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ನಾಯ್ಕ ವಂದಿಸಿದರು.