Advertisement

ಅನನ್ಯ ಕವಿತೆ: ಅಮ್ಮನ ಗುಡ್ಡ

03:45 AM Jan 15, 2017 | Harsha Rao |

ಆಧುನಿಕ ಕನ್ನಡದಲ್ಲಿ ವಿಪುಲವಾಗಿ ಬರೆದು ಹೆಸರು ಮಾಡಿದ ಕವಿಗಳಿ¨ªಾರೆ, ಅದೇ ರೀತಿ, ಅತ್ಯಂತ ಕಡಿಮೆ ಬರೆದೂ ಹೆಸರು ಮಾಡಿದವರಿ¨ªಾರೆ. ಈ ಎರಡನೆಯ ಗುಂಪಿನಲ್ಲಿ ಥಟ್ಟನೆ ನೆನಪಾಗುವುದು ಪೇಜಾವರ ಸದಾಶಿವ ರಾಯರು ಮತ್ತು ಯರ್ಮುಂಜ ರಾಮಚಂದ್ರ ಅವರು. ಇಬ್ಬರೂ ಬರೆದುದು ಒಂದೊಂದೇ ಕವನ ಸಂಕಲನ. ಆದರೆ ಈ ಇಬ್ಬರು ಕವಿಗಳೂ ತಮ್ಮ ಎಳವೆಯÇÉೇ ತೀರಿಹೋದರು. ಇನ್ನಷ್ಟು ಬದುಕಿರುತ್ತಿದ್ದರೆ ಅವರು ಹೆಚ್ಚು ಬರೆಯುತ್ತಿದ್ದರೋ ಏನೋ. ಆದರೆ, ನಮ್ಮ ನಡುವೆ ಜೀವಂತವಾಗಿದ್ದು, ಒಂದೇ ಕವನ ಸಂಕಲನದಿಂದ ಪ್ರಸಿದ್ಧಿ ಪಡೆದವರೆಂದರೆ ಚ. ಸರ್ವಮಂಗಳ. ನಾನು ಇಲ್ಲಿ ಉÇÉೇಖೀಸುತ್ತಿರುವುದು ಅವರ ಅಮ್ಮನ ಗುಡ್ಡ ಎಂಬ ಕವನ ಸಂಕಲನ (ಋಜುವಾತು ಪ್ರಕಾಶನ, 1988). ಸರ್ವಮಂಗಳ ಜನಕ್ಕೆ ಗೊತ್ತಿರುವುದು ಈ ಸಂಕಲನದಿಂದ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಇದರಲ್ಲಿ ಅಡಕವಾದ ಇದೇ ಹೆಸರಿನ ಕವನದಿಂದ ಎಂದು ಹೇಳಬಹುದು. ಒಟ್ಟು 48 ಸಣ್ಣ ದೊಡ್ಡ ಕವನಗಳ ಈ ಸಂಕಲನದಲ್ಲಿ ಅಮ್ಮನ ಗುಡ್ಡ ಒಂದು ನೀಳYವನ ಹಾಗೂ ಇಡೀ ಸಂಕಲನದÇÉೇ ಬಹು ವಿಶಿಷ್ಟವಾದ ಕವನ; ನ್ಯಾಯವಾಗಿಯೇ ಸಂಕಲನ ಈ ಕವಿತೆಯಿಂದ ಹೆಸರಿಸಲ್ಪಟ್ಟಿದೆ. 1970ರಲ್ಲಿ ಲಂಕೇಶ್‌ ಕನ್ನಡದ ಹೊಸ ಕವಿತೆಗಳ ಸಂಕಲನ “ಅಕ್ಷರ ಹೊಸ ಕಾವ್ಯ’ವನ್ನು ಸಂಪಾದಿಸಿ ಪ್ರಕಟಿಸಿದಾಗ ಈ ಕವನ ಇನ್ನೂ ಬರೆಯಲ್ಪಟ್ಟಿರಲಿಲ್ಲ. 1993ರ ದ್ವಿತೀಯ ಆವೃತ್ತಿಯಲ್ಲಿ ಲಂಕೇಶ್‌, ಸರ್ವಮಂಗಳ ಅವರ ಇತರ ಕೆಲವು ಕವಿತೆಗಳೊಂದಿಗೆ ಅಮ್ಮನ ಗುಡ್ಡಕ್ಕೂ ಅಕ್ಷರ ಹೊಸ ಕಾವ್ಯದಲ್ಲಿ ಸ್ಥಾನ ಕಲ್ಪಿಸಿಕೊಟ್ಟರು ಎನ್ನುವುದು ಗಮನಾರ್ಹ. ಯಾಕೆಂದರೆ, ಆ ಅಂತರದಲ್ಲಿ ಸರ್ವಮಂಗಳ ಕನ್ನಡದ ಒಬ್ಬ ಪ್ರಮುಖ ಕವಿಯಾಗಿ ಗುರುತಿಸಲ್ಪಟ್ಟಿದ್ದರು. ಅಮ್ಮನ ಗುಡ್ಡಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂದಿತ್ತು. 

Advertisement

    ಈ ಸಂಕಲನದೊಂದಿಗೆ, ಮುಖ್ಯವಾಗಿ ಈ ಕವನದೊಂದಿಗೆ, ನನಗೆ ವೈಯಕ್ತಿಕವಾಗಿ ಒಂದು ಸಂಬಂಧ ಇದೆ; ಸಂಕಲನಕ್ಕೆ ಮೌಲಿಕವಾದ ಮುನ್ನುಡಿ ಬರೆದವರು ಶಾಂತಿನಾಥ ದೇಸಾಯಿಯವರಾದರೆ, ಬೆನ್ನುಡಿ ಬರೆದವನು ನಾನು. ದೇಸಾಯಿಯವರು ತಮ್ಮ ಮುನ್ನುಡಿಯಲ್ಲಿ, ಇತರ ವಿಷಯಗಳೊಂದಿಗೆ, ಅಮ್ಮನ ಗುಡ್ಡ ಕವನದ ಪ್ರಶಂಸೆಗೂ ತಕ್ಕ ಜಾಗ ಕೊಟ್ಟಿ¨ªಾರೆ; ಈ ಕವನ ಸಂಕಲನದಲ್ಲಿನ ಅತ್ಯಂತ ಶ್ರೇಷ್ಠ ಕವನವೆಂದರೆ ಅಮ್ಮನ ಗುಡ್ಡ. ಬಾಲ್ಯದ ಭಯ-ದಿಗಿಲುಗಳ ಮುಗ್ಧ ಪ್ರಪಂಚ ಹಾಗೂ ಬೆಳೆದ ಬುದ್ಧಿಜನ್ಯ ಅನುಭವ ಪ್ರಪಂಚ ಇವುಗಳನ್ನು ಜೊತೆ ಜೊತೆಯಾಗಿ ಇರಿಸಿ, ಮನುಷ್ಯನ ಹಾಗೂ ನಾಗರಿಕತೆಯ ಬೆಳೆಯುವ ಪ್ರಕ್ರಿಯೆಯಲ್ಲಿ ಅನುಭವದ ಒಂದು ರಮ್ಯ ಆಯಾಮ ಕಳೆದುಹೋಗುತ್ತದೆ ಎಂಬ ಸತ್ಯವನ್ನು ಅತ್ಯಂತ ಮೂರ್ತವಾಗಿ, ದಟ್ಟವಾಗಿ, ಕಥಾರೂಪದ ಈ ಕವನದಲ್ಲಿ ಕವಿ ಬಿಚ್ಚಿಡುತ್ತಾಳೆ ಎನ್ನುತ್ತಾರೆ ಶಾಂತಿನಾಥ ದೇಸಾಯಿ. ನಾನು ನನ್ನ ಬೆನ್ನುಡಿಯಲ್ಲಿ ಸಹಾ ಈ ಕವನದ ವೈಶಿಷ್ಟ್ಯದ ಬಗ್ಗೆ ಮಾತಾಡಿದ್ದೇನೆ. ಒಂದು ಜನಕೂಟದ ಸಂಸ್ಕƒತಿಯ ಹಿನ್ನೆಲೆಯಲ್ಲಿ ಪಟ್ಟ ಅನುಭವಗಳನ್ನು ಪಡಿಮೂಡಿಸುವ…

ಸುದೀರ್ಘ‌ ಕವಿತೆ ಅಮ್ಮನ ಗುಡ್ಡ ಒಂದೇ ಸರ್ವಮಂಗಳಾ ಅವರನ್ನು ಕನ್ನಡ ಕಾವ್ಯದ ಮುಂಚೂಣಿಯಲ್ಲಿ ನಿಲ್ಲಿಸುವುದಕ್ಕೆ ಸಾಕು ಎಂಬ ಮಾತು ನನ್ನ ಬೆನ್ನುಡಿಯಲ್ಲಿ ಬರುತ್ತದೆ. ಇದು ಹೊಸ ಕವಿತೆಯೊಂದರ ಉತ್ಸಾಹದಲ್ಲಿ ಆಗ ಬರೆದಿರಬಹುದಾದರೂ, ಇಂದು ಕೂಡ ಸತ್ಯದೂರವಲ್ಲ ಎನ್ನುವ ನಂಬಿಕೆ ನನ್ನದು. ಮೂರು ದಶಕಗಳಷ್ಟು ಆಗಿದ್ದರೂ ಈ ಕವಿತೆ ನನ್ನ ಮನಸ್ಸಿನಲ್ಲಿ ಇನ್ನೂ ಬೇರೂರಿದೆ.

    ಏನಿದರ ಕಾರಣ ಎಂದು ಯೋಚಿಸುತ್ತೇನೆ. ಒಂದು ದೃಷ್ಟಿಯಿಂದ ನೋಡಿದರೆ ಇದರಲ್ಲಿ ಕವಿತೆಯಿಂದ ಸಾಮಾನ್ಯರು ನಿರೀಕ್ಷಿಸುವಂಥದು ಏನೂ ಇದರಲಿಲ್ಲ: ಆಕರ್ಷಿಸುವ ಪದಪ್ರಯೋಗಗಳಾಗಲಿ, ಇಮೇಜರಿಯಾಗಲಿ, ಸಂದೇಶವಾಗಲಿ ಧ್ವನಿಗಳಾಗಲಿ ಕಾಣಿಸುವುದಿಲ್ಲ; ದಟ್ಟವಾದ ವಸ್ತುವಿವರಗಳೇನೋ ಇವೆ, ಆದರೆ ಅವುಗಳನ್ನು ಕವಿತೆಯಾಗಿಸುವ ಪರಿಭಾಷೆಯಿಲ್ಲ. ನನ್ನನ್ನು ಕೇಳಿದರೆ ಈ ಅಕವಿತತ್ವವೇ ಅಮ್ಮನ ಗುಡ್ಡದ ಒಂದು ವೈಶಿಷ್ಟ್ಯ ಹಾಗೂ ಎಲ್ಲ ಕಾಲದಲ್ಲೂ ನಡೆಯುವ, ಈಗಲೂ ನಡೆಯುತ್ತಿರುವ ಸಾಂಸ್ಕƒತಿಕ ಬದಲಾವಣೆ: ಒಂದು ರೀತಿಯಿಂದ ಈ ಬದಲಾವಣೆಯೇ ಮನುಷ್ಯ ಜೀವನ. 

    ಇಲ್ಲಿ ಕೇಂದ್ರವಾಗಿರುವುದು “ಕುಕ್ಕಡದಮ್ಮ’ ಎಂಬ ಹೆಸರಿನ ಒಬ್ಬ ಮನೆದೇವತೆ; ಈಕೆ ಕುಲದೇವತೆ, ಗ್ರಾಮದೇವತೆ ಎಲ್ಲವೂ ಆಗಿ¨ªಾಳೆ. ಹಲವು ವರ್ಷಗಳ ಹಿಂದೆ ûಾಮಡಾಮರ ಆಗಿ¨ªಾಗ ಊರ ಗೌಡನಿಗೆ ಕಾಣಿಸಿಕೊಂಡು ನಂತರ ಹುತ್ತವ ಹೊಕ್ಕು ಕುಳಿತವಳು. ಈಕೆಗಾಗಿ ಒಂದು ಗುಡಿ ಏಳುತ್ತದೆ. ತಮಗೆ ಬಿಡುವಾದಾಗ‌ ವರ್ಷಕ್ಕೊಮ್ಮೆ ಇಲ್ಲಿಗೆ ಊರವರು ಬಂದು ನಡೆದುಕೊಳ್ಳುತ್ತಾರೆ. ಈ ಜಾಗದಲ್ಲಿ ಇತರ ದೈವಗಳೂ ಸೇರಿಕೊಳ್ಳುತ್ತವೆ, ಪರಶುರಾಮ, ಮಾತಂಗಿ ಮುಂತಾಗಿ. ಅವರಿಗೆಲ್ಲ ಅವರವರ ಕಲ್ಲುಗಳಿವೆ, ಪೂಜೆಗಳಿವೆ. ದಟ್ಟವಾದ ಕಾಡುಬೆಟ್ಟದ ಮೇಲಿರುವ ಕಡು ಕತ್ತಲ ಜಾಗ ಇದು, ಹತ್ತಿರವೇ ಒಂದು ಕೊಳವಿದೆ, ಸುತ್ತ ಎÇÉೆಲ್ಲೂ ಎದ್ದ ಹುತ್ತಗಳು, ಹಾವುಗಳು, ಬಿದಿರ ಹಿಂಡುಗಳು, ವಾಸ್ತವದಲ್ಲಿ ಇಲ್ಲಿಗೆ ಹೋಗಿ ಬರಲು ಸರಿಯಾದ ದಾರಿಯೇ ಇಲ್ಲ; ಹೋಗುವ ಜನ ಮುಳ್ಳುಗಿಡಗಳನ್ನು ಕಡಿದು ದಾರಿಮಾಡಿಕೊಂಡೇ ಹೋಗಬೇಕು; ಆಗಲೆಲ್ಲ ಎಳೆನಾಗರಗಳನ್ನೂ ಎದುರಿಸಬೇಕಾಗುತ್ತದೆ. ಕವಿತೆಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಕವಿ ಅಮ್ಮನ ಗುಡ್ಡಕ್ಕೆ ಹಿರಿಯರ ಜೊತೆ ಹಲವು ಸಲ ಹೋಗಿ ಬಂದ ಅನುಭವಗಳ ಒಟ್ಟಾರೆ ವಿವರಣೆಯಿದೆ. ಇವೆಲ್ಲವೂ ಭಾರತೀಯರಾದ ನಾವು ಒಂದೋ ಸ್ವತಃ ಅನುಭವಿಸಿದ ಇಲ್ಲವೇ ಇತರರಿಂದ ಕೇಳಿ ತಿಳಿದುಕೊಂಡ ಸಂಗತಿಗಳು. ಇಡೀ ದೇಶದ ಗ್ರಾಮಾಂತರ ಪ್ರದೇಶವೇ ಇಂಥ ಅಮ್ಮನ ಗುಡ್ಡಗಳಿಂದ ಚುಕ್ಕೆ ಬಿಡಿಸಿಕೊಂಡಿದೆ ಎನ್ನಬಹುದು. 

Advertisement

    ಕವಿತೆಯ ಎರಡನೆಯ ಭಾಗದಲ್ಲಿ ಮತ್ತೆ ಕವಿ ಅಮ್ಮನ ಗುಡ್ಡಕ್ಕೆ ಬರುವ ಅನುಭವದ ಒಂದು ಚಿತ್ರಣವಿದೆ; ಆದರೆ ಈಗ ಹಲವಾರು ವರ್ಷಗಳು ಕಳೆದಿವೆ, ಊರು ಬಿಟ್ಟು ಶಹರ ಸೇರಿದ ಕವಿಗೆ ಊರ ಜೊತೆ ಅಸಂಬಂಧವೊಂದು ಹುಟ್ಟಿಕೊಂಡಿದೆ. ಅಮ್ಮನ ಗುಡ್ಡವೂ ಈಗ ಮೊದಲಿನಂತಿಲ್ಲ: ಅಲ್ಲಿಗೆ ಹೋಗಲು ಶ್ರಮವಿಲ್ಲ, ರಸ್ತೆಯಾಗಿದೆ, ವಿದ್ಯುತ್ಛಕ್ತಿಯ ಬೆಳಕು ಜಗಜಗಿಸುತ್ತಿದೆ, ಗುಡಿಯಿರುವಲ್ಲಿ ದೇವಸ್ಥಾನ ಎದ್ದಿದೆ, ಕುಕ್ಕಡದಮ್ಮ ಹುತ್ತದಲ್ಲಿ ತಲೆಮರೆಸಿಲ್ಲ, ಹೊರಬಂದಿ¨ªಾಳೆ, ಅವಳ ಮುಖಕ್ಕೊಂದು ಮುಖವಾಡ ಬಂದಿದೆ; ಇತರ ಕೆಳವರ್ಗದ ದೇವತೆಗಳೂ ಅಕ್ಕಪಕ್ಕದಲ್ಲಿ ಇ¨ªಾವೆ. ಒಟ್ಟಾರೆಯಾಗಿ, ಹಿಂದೆ ನಿಗೂಢವೂ ಅದ್ಭುತರಮ್ಯವೂ, ಪವಿತ್ರ ಯಾತ್ರಾಸ್ಥಳವೂ ಆಗಿದ್ದ ತಾಣ ಈಗ ವಾಣಿಜ್ಯೀಕರಣಗೊಂಡಿದೆ. ಈ ಪರಿವರ್ತನೆಯೂ ನಮಗೆ ಹೊಸತೇನೂ ಅಲ್ಲ; ನಮಗೆ ಗೊತ್ತಿಲ್ಲದೇನನ್ನೂ ಕವಿ ನಮಗೆ ತೋರಿಸಹೊರಟಿಲ್ಲ. ನಮಗೆ ಗೊತ್ತಿರುವುದನ್ನೇ ತಮ್ಮ ಅನನ್ಯ ಅನುಭವ ನಿರೂಪಣೆಯೆಂಬಂತೆ ತೋರಿಸುತ್ತಿ¨ªಾರೆ.
    ಈ ಹಿಂದೆಯೇ ಹೇಳಿದಂತೆ ಇದು ವಸ್ತುವಿವರಗಳ ಶೈಲಿ; ಶಾಂತಿನಾಥ ದೇಸಾಯಿಯವರು ಇದನ್ನು ವಸ್ತುಧ್ವನಿ ಎನ್ನುತ್ತಾರೆ. ಉದಾಹರಣೆಗೆ, ಕವಿತೆಯ ಆರಂಭವೇ ಇಂತಿದೆ:

ವರ್ಷಕ್ಕೊಮ್ಮೆಯಾದರೂ ಮನೆದೇವತೆಯ ದರ್ಶನ.
ಪಯಣ ಎತ್ತಿನ ಬಂಡಿಯಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು.
ಚನ್ನಗಿರಿಯಿಂದ ಮೂರುತಾಸಿನ ಹಾದಿ ಜೋಳದಾಳು
ಕಾಡು; ಬಿದಿರು ಮೆಳೆ ತುಂಬಿದ ಕಾಡ ಸೀಮೆ; ಅಡಿ
ಇಟ್ಟಲೆಲ್ಲ ಆಳೆತ್ತರದ ಹುತ್ತ; ನಡುವೆ ಗುಡ್ಡ;
ನೆತ್ತಿಗೊಂದು ಗುಡಿ; ಒಳಗೊಂದು ಹುತ್ತ; ಗುಡ್ಡಕ್ಕೆ
ಗುಡ್ಡವೇ ಉಸಿರೆಳೆಯುವಂತೆ ಗಾಳಿ ಸುಯ್ನಾಟ;
ನಿಂತು ಲಂಗೋಟಿಯಗಲದಲ್ಲಿ ನಭಕ್ಕೆ ಹುಯ್ಯಲಿಡುವ
ಗಾಳಿಮರ. 

ಇಂಥ ವಿವರಗಳಲ್ಲಿ ಕೆಲವೊಂದು ನಮ್ಮನ್ನು ಪ್ರತ್ಯೇಕ ಗಮನಕ್ಕೆ ಒತ್ತಾಯಿಸುತ್ತವೆ: ದೇವತೆಗೆ ಮುಖವಾಡ ಬಂದಿರುವುದು ಒಂದು. ಇದರ ಅರ್ಥ ನಮಗೆ ಬಿಟ್ಟದ್ದು. ಕವಿತೆಯನ್ನು ಇಡಿಯಾಗಿ ಓದಿಯಾದ ಮೇಲೆ ನಮ್ಮ ಮನಸ್ಸಿನಲ್ಲಿ ಉಳಿಯುವ ಇನ್ನೊಂದು ಸಮಾನಾಂತರದ ವಿವರವಿದೆ: ಕವಿ ಬಾಲಕಿಯಾಗಿ¨ªಾಗಿನ ಯಾತ್ರೆಗಳಲ್ಲಿ ಆಕೆ ಊರಿಗೆ ಮರಳುವಾಗ ಲಂಗ ಹರಿದಿರುತ್ತದೆ; ಆದರೆ ನಂತರದ ಅನುಭವದಲ್ಲಿ ಉಟ್ಟ ಸೀರೆ ಸುಕ್ಕಾಗಿರುವುದಿಲ್ಲ, ನಿರಿಗೆ ಕೂಡ ಹಾಗೆಯೇ ಇರುತ್ತದೆ! ಈ ರೂಪಕದೊಂದಿಗೆ ಕವಿತೆಗೆ ಬಹು ದೊಡ್ಡದಾದೊಂದು ಅರ್ಥವ್ಯಾಪ್ತಿ ಬರುತ್ತದೆ. ಕವಿ ಅದನ್ನು ವಿವರಿಸುವುದಕ್ಕೆ ಹೋಗುವುದಿಲ್ಲ, ನಮ್ಮ ಕಲ್ಪನೆಗೆ ಬಿಡುತ್ತಾರೆ. 

    ಅಮ್ಮನ ಗುಡ್ಡದ ನಂತರ ಸರ್ವಮಂಗಳ ಯಾವ ಕವನ ಸಂಕಲನವನ್ನೂ ಪ್ರಕಟಿಸಲಿಲ್ಲ; ಅವರ ಬಿಡಿ ಕವಿತೆಗಳೂ ಎಲ್ಲೂ ಕಾಣಿಸುತ್ತಿಲ್ಲ. ಯಾಕೆ ಈ ಕವಿತಾ ಸನ್ಯಾಸ? ಬಹುಶಃ ಇದಕ್ಕೆ ಉತ್ತರ ಅವರ ವಸ್ತುಧ್ವನಿಯ ಮೂಲದÇÉೇ ಇದೆಯೆಂದು ಕಾಣುತ್ತದೆ. ವಾಸ್ತವಿಕ ಲೋಕದಲ್ಲಿ ಅವರು ಎಷ್ಟು ತೊಡಗಿಸಿಕೊಂಡವರೆಂದರೆ ಅದಕ್ಕೊಂದು ಕಲ್ಪನೆಯ ಮೆರುಗು ಅವರಿಗೆ ಕೃತಕವಾಗಿ ಕಾಣಿಸುತ್ತಿರಬಹುದು. ಇದೇ ಸಂಕಲನದ ನಾನು ನಾನೇ ಎಂಬ ಆರಂಭದ ಕವಿತೆ ಕೂಡ ಇಲ್ಲಿ ಪ್ರಸ್ತುತ; ಉನ್ನತ ಆದರ್ಶಗಳನ್ನು ತಿರಸ್ಕರಿಸುತ್ತ ಅವರನ್ನುವುದು;

ಅಯ್ನಾ ನನಗೆ ಬೇಕು:
ಕ್ಷಣ ತಿಕ್ಕಾಟದಲ್ಲಿ ಹೇಸಿಗೆ ನಡುವೆ
ಹುಟ್ಟಿ ಅಲ್ಲಿಯೇ ಇನ್ನೂ ಗಿರಗಿಟ್ಲೆ
ಆಡುತ್ತಿರುವ ನನ್ನ ನಾನೇ ಅರಿವುದಯ್ನಾ

– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next