Advertisement

ಮಡಿವಾಳ ಮಾಚಿದೇವರ ಕೊಡುಗೆ ಅನನ್ಯ

09:25 AM Feb 03, 2019 | |

ಹೊಳಲ್ಕೆರೆ: ಮಡಿವಾಳ ಮಾಚಿದೇವರು 12ನೇ ಶತಮಾನದ ಪ್ರಮುಖ ಬಸವಾದಿ ಶರಣರಾಗಿದ್ದಾರೆ. ಅನುಭವ ಮಂಟಪದ ಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್‌ ಚೇತನ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿದ್ದ ಜಾತಿವಾದಿಗಳ ಸಿದ್ದಾಂತಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಹಲವಾರು ಶರಣರು ಅನುಭವ ಮಂಟಪದ ಮೂಲಕ ಶ್ರಮಿಸಿದ್ದಾರೆ. ಮನುಕುಲಕ್ಕೆ ಮಾನವೀಯ ಸಂದೇಶಗಳನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯತ್‌ ಅಧ್ಯಕ್ಷೆ ಸವಿತಾ ಬಸವರಾಜ್‌, ಶರಣರು ಸಮಾಜದಲ್ಲಿ ಭಾವೈಕ್ಯತೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಿಶೇಷ ಸಂಧೇಶ ನೀಡಿದ್ದಾರೆ. ಜಾತಿ ಧರ್ಮ ಎನ್ನುವ ಕಲ್ಪನೆ ಇಲ್ಲದೆ ಎಲ್ಲವನ್ನು ಸಮಾನತೆಯಿಂದ ಕಂಡಿದ್ದಾರೆ. ಅವರುಗಳು ಅನುಭವ ಮಂಟಪದ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದಾರೆ. 12ನೇ ಶತಮಾನದಲ್ಲಿರುವ ಮಹಾನ್‌ ದಾರ್ಶನಿಕ ಶರಣರಲ್ಲಿ ಮಡಿವಾಳ ಮಾಚಿದೇವರೂ ಒಬ್ಬರು. ಸಮಾಜದ ಕಲ್ಯಾಣಕ್ಕೆ ಹಲವಾರು ವಚನಗಳ ಮೂಲಕ ಸಂದೇಶಗಳನ್ನು ಬಿತ್ತರಿಸುವ ಮೂಲಕ ಮಾನವ ಕುಲವೊಂದೇ ಎನ್ನುವ ಸಂದೇಶ ಸಾರಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ. ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್‌, ಮಡಿವಾಳ ಸಮಾಜದ ಮುಖಂಡ ತಿಪ್ಪೇಸ್ವಾಮಿ, ಪಪಂ ಮಾಜಿ ಸದಸ್ಯ ಗುರುಸ್ವಾಮಿ, ಎಚ್. ಬಸವರಾಜ್‌, ಸಿದ್ದಪ್ಪ, ಮಂಜುನಾಥ, ಶಿವಕುಮಾರ್‌, ಶಿಕ್ಷಕ ವೀರೇಶ್‌, ರಾಜ್ಯ ಮಡಿವಾಳ ಸಂಘದ ಯುವ ಘಟಕದ ಅಧ್ಯಕ್ಷ ಧ್ರುವಕುಮಾರ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next