Advertisement

ಕೇಂದ್ರ ಸಚಿವ ಶ್ರೀಪಾದ ನಾಯಕ್‌ ಜನ್ಮದಿನ: ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ

01:13 AM Oct 06, 2023 | Team Udayavani |

ಉಡುಪಿ: ಕೇಂದ್ರ ಪ್ರವಾಸೋದ್ಯಮ, ಜಲ ಸಾರಿಗೆ ಮತ್ತು ಬಂದರು (ರಾಜ್ಯ ಖಾತೆ) ಸಚಿವ ಶ್ರೀಪಾದ ಎಸೊÕà ನಾಯಕ್‌ ಅವರ ಜನ್ಮದಿನ ಹಾಗೂ ಅವರ ಸಾರ್ವಜನಿಕ ಸೇವೆಯ 25 ಸಂವತ್ಸರಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಗೋವಾದ ಮಾತೃಭೂಮಿ ಸೇವಾ ಪ್ರತಿಷ್ಠಾನ, ಉಡುಪಿಯ ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೆಬಲ್‌ ಟ್ರಸ್ಟ್‌, ಬೆಂಗಳೂರಿನ ಒನ್‌ ಸೈಟ್‌ ಎಸ್ಸಿಲಾರ್‌ ಲಕೊÕàಟ್ಟಿಕಾ ಫೌಂಡೇಶನ್‌ ಆಶ್ರಯದಲ್ಲಿ ಬೃಹತ್‌ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಶಿಬಿರ ಅ. 4ರಂದು ನಡೆಯಿತು.

Advertisement

ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್‌ ಸಾವಂತ್‌ ಶಿಬಿರಕ್ಕೆ ಚಾಲನೆ ನೀಡಿ, ಶ್ರೀಪಾದ ನಾಯಕ್‌ ರಾಜಕೀಯ ಅಧಿಕಾರ ಹುದ್ದೆಗೆ ತಮ್ಮನ್ನು ಸೀಮಿತಗೊಳಿಸದೇ 25 ವರ್ಷಗಳ ಕಾಲ ಕಳಂಕರಹಿತ ನಿಸ್ವಾರ್ಥ ಸಾರ್ವಜನಿಕ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು. ವರ್ಷಂಪ್ರತಿ ಅವರ ಜನ್ಮದಿನವೂ ಸೇರಿದಂತೆ ಕಳೆದ 7 ವರ್ಷಗಳಿಂದ ರಾಜ್ಯಾದ್ಯಂತ ಪ್ರಸಾದ್‌ ನೇತ್ರಾಲಯ ನಡೆಯುತ್ತಿರುವ ಉಚಿತ ನೇತ್ರ ಶಿಬಿರಗಳು ತಮ್ಮ ರಾಜ್ಯದ ಜನರ ಅಂಧತ್ವ ನಿವಾರಣೆಗೆ ಬಹಳಷ್ಟು ಕೊಡುಗೆ ನೀಡಿದೆ ಎಂದರು.

ಅಭಿನಂದನೆ ಸ್ವೀಕರಿಸಿದ ಶ್ರೀಪಾದ ನಾಯಕ್‌ ಮಾತನಾಡಿ, ರಾಜ್ಯದ ಜನರು ನನ್ನ ಮೇಲೆ ಇರಿಸಿರುವ ವಿಶ್ವಾಸವೇ ಸೇವೆಗೆ ಪ್ರೇರಣೆ. ಪ್ರಸಾದ್‌ ನೇತ್ರಾಲಯವು ಗೋವಾದಾದ್ಯಂತ ನಡೆಸುತ್ತಿರುವ ಉಚಿತ ನೇತ್ರ ಸೇವೆ ಹಾಗೂ ಕಳೆದ 7 ವರ್ಷಗಳಿಂದ ಸತತವಾಗಿ ತನ್ನ ಜನ್ಮದಿನದಂದು ನಡೆಸುತ್ತಿರುವ ಉಚಿತ ಶಿಬಿರವು ಬಹಳ ಶ್ಲಾಘನೀಯ ಎಂದರು.
ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು ಮಾತನಾಡಿ, ಗೋವಾದ ಜನತೆ, ಸರಕಾರ, ಶ್ರೀಪಾದ ನಾಯಕ್‌ ತಮ್ಮ ಮೇಲಿಟ್ಟಿರುವ ವಿಶ್ವಾಸ ತಮ್ಮ ಸೇವೆಗೆ ಪ್ರೇರಣೆಯಾಗಿದೆ ಎಂದರು.

ಮಾಜಿ ಸಂಸದ ಸದಾನಂದ ತನಾವಾಡೆ, ಬಿಚೋಲಿಮ್‌ ಶಾಸಕ ರಾಜೇಶ್‌ ಪಕ್ಲೃಕರ್‌, ಗೋವಾ ಸಚಿವ ರೋಹನ್‌ ಕಾಮ್ಟೆ, ಪ್ರಸಾದ್‌ ನೇತ್ರಾಲಯದ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್‌, ಮಾತೃಭೂಮಿ ಸೇವಾ ಪ್ರತಿಷ್ಠಾನದ ಸೂರಜ್‌ ನಾಯಕ್‌ ಉಪಸ್ಥಿತರಿದ್ದರು.

850ಕ್ಕೂ ಅಧಿಕ ಜನರ ನೇತ್ರ ತಪಾಸಣೆ ನಡೆಸಲಾಯಿತು, 515 ಜನರನ್ನು ಉಚಿತ ಕನ್ನಡಕ ವಿತರಣೆಗೆ ಗುರುತಿಸಲಾಯಿತು. 51 ಜನರಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಪ್ರಸಾದ್‌ ನೇತ್ರಾಲಯದಲ್ಲಿ ವ್ಯವಸ್ಥೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next