Advertisement

Matsya 6000; ಸಮುದ್ರಯಾನ ಹೋಗೋಣ ಬನ್ನಿ…

09:17 PM Sep 11, 2023 | Team Udayavani |

ಸಮುದ್ರದಾಳದ ಬೆರಗು, ಕುತೂಹಲ ಇಂದಿನದಲ್ಲ. ಹಿಂದಿನಿಂದಲೂ, ಬಹುತೇಕ ದೇಶಗಳು ಆಳಸಮುದ್ರದ ಶೋಧದಲ್ಲಿ ತೊಡಗಿವೆ. ಈಗ ಭಾರತವೂ ಇದಕ್ಕೆ ಸೇರ್ಪಡೆಯಾಗಿದೆ. ಭಾರತದ ಮೂವರು ಮತ್ಸ್ಯ 6000 ಎಂಬ ನೌಕೆಯಲ್ಲಿ ಆಳಸಮುದ್ರಕ್ಕೆ ಹೋಗಿ, ಶೋಧ ನಡೆಸಲಿದ್ದಾರೆ. 2024ರ ಆರಂಭದಲ್ಲಿ ಬಂಗಾಳಕೊಲ್ಲಿಯಲ್ಲಿ ಪರೀಕ್ಷಾರ್ಥವಾಗಿ ಜಲಾಂತರ್ಗಾಮಿ ಸಮುದ್ರಕ್ಕಿಳಿಯಲಿದೆ. ಈ ಮೂಲಕ ಎಲೈಟ್‌ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಲಿದೆ.

Advertisement

ಆಳಸಮುದ್ರ ಅಧ್ಯಯನ
ಚೆನ್ನೈ ಸನಿಹದಲ್ಲಿರುವ ಸಾಗರದ ನೀರಿನಲ್ಲಿ ಭಾರತ ಹೊಸ ಶೌರ್ಯಕ್ಕೆ ಸಜ್ಜಾಗಿದೆ. 2024ರ ಆರಂಭದಲ್ಲಿ ಮತ್ಸé 6000 ಎಂಬ ನೌಕೆಯಲ್ಲಿ ಸಮುದ್ರಯಾನ ಕೈಗೊಳ್ಳಲಿದೆ. ದೇಶೀಯವಾಗಿಯೇ ತಯಾರಿಸಲಾಗಿರುವ ಈ ನೌಕೆಯ ಮೂಲಕ ಸಮುದ್ರದಾಳಕ್ಕೆ ಹೋಗಿ ಅಧ್ಯಯನ ನಡೆಸಲು ಮುಂದಾಗಿದೆ.

2 ವರ್ಷಗಳ ಪರಿಶ್ರಮ
ಕಳೆದ ಎರಡು ವರ್ಷಗಳಿಂದ ಭಾರತ ಮತ್ಸ್ಯ 6000 ನೌಕೆಯನ್ನು ತಯಾರಿಸುತ್ತಿದೆ. ಇತ್ತೀಚೆಗಷ್ಟೇ ಟೈಟಾನಿಕ್‌ ಹಡಗಿನ ಅವಶೇಷಗಳ ಬಳಿ ಅಪಘಾಡಕ್ಕೀಡಾದ ಟೈಟನ್‌ನಂತೆಯೇ ಇದನ್ನೂ ರೂಪಿಸಲಾಗಿದೆ. ರಾಷ್ಟ್ರೀಯ ಸಮುದ್ರ ತಾಂತ್ರಿಕ ಸಂಸ್ಥೆ(ಎನ್‌ಐಒಟಿ) ಇದನ್ನು ಅಭಿವೃದ್ಧಿಗೊಳಿಸಿದೆ. ಸಮುದ್ರಯಾನ ಮಿಷನ್‌ನಡಿಯಲ್ಲಿ 2024ರಲ್ಲಿ ಮಾನವ ರಹಿತವಾಗಿ 500 ಮೀ. ಕೆಳಗೆ ಹೋಗಿ ಅಧ್ಯಯನ ನಡೆಸಲಿದ್ದೇವೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್‌ ಹೇಳಿದ್ದಾರೆ.

ಪ್ರಯೋಗ ನಡೆಸಿರುವ ಇತರೆ ದೇಶಗಳು
ಅಮೆರಿಕ, ರಷ್ಯಾ, ಜಪಾನ್‌, ಫ್ರಾನ್ಸ್‌ ಮತ್ತು ಚೀನಾ

ಯಾವುದರ ಅಧ್ಯಯನ?
ನಿಕ್ಕೆಲ್‌, ಕೊಬಾಲ್ಟ್, ಮ್ಯಾಂಗನೀಸ್‌, ಹೈಡ್ರೋಥರ್ಮಲ್‌ ಸಲ್ಫೆ„ಡ್ಸ್‌ ಮತ್ತು ಗ್ಯಾಸ್‌ ಹೈಡ್ರೇಟ್ಸ್‌. ಜತೆಗೆ, ಸಮುದ್ರದಾಳದ ಜೀವ ವೈವಿಧ್ಯತೆ ಕುರಿತಂತೆ ಶೋಧ ನಡೆಯಲಿದೆ.

Advertisement

ಮತ್ಸ್ಯ6000
ಇದು ಮಾನವಸಹಿತ ಸಬ್‌ಮರ್ಸಿಬಲ್‌ ಆಗಿದ್ದು, ಇದನ್ನು ರಾಷ್ಟ್ರೀಯ ಸಮುದ್ರ ತಾಂತ್ರಿಕ ಸಂಸ್ಥೆ ರೂಪಿಸಿದೆ. ಸಮುದ್ರಯಾನ ಯೋಜನೆಗಾಗಿ 4,077 ಕೋಟಿ ರೂ. ಮೀಸಲಿಟ್ಟಿದ್ದು, ಇದರ ಅಡಿ ಈ ಯೋಜನೆ ಕೈಗೆತ್ತಿಗೊಳ್ಳಲಾಗಿದೆ.

ಮಾನವ ಸಹಿತ ಅಧ್ಯಯನ
2024ರ ಆರಂಭದಲ್ಲಿ ಮಾನವರಹಿತವಾಗಿ ನೌಕೆ ಹೋಗಲಿದೆ. ಇದರ ಅಧ್ಯಯನ ಬಳಿಕ ಮಾನವ ಸಹಿತವಾಗಿ ಹೋಗಲಿದೆ. ಈ ನೌಕೆಯಲ್ಲಿ ಮೂವರು ತೆರಳಬಹುದು. ಒಬ್ಬರು ಚಾಲಕ, ಮತ್ತಿಬ್ಬರು ಪ್ರಯಾಣಿಕರು.

ನೌಕೆಯ ತೂಕ -25 ಟನ್‌
ಉದ್ದ – 9 ಮೀ.
ಎತ್ತರ – 4.5 ಮೀ.
ಅಗಲ – 4 ಮೀ.
ಸುತ್ತಳತೆ – 2.1ಮೀ.
ನೌಕೆಯೊಳಗೆ ಇರಬಹುದಾದ ಸಮಯ- 12 ಗಂಟೆ
ತುರ್ತು ಸ್ಥಿತಿಯಲ್ಲಿ ಇರಬಹುದಾದ ಸಮಯ – 96 ಗಂಟೆ
ಒತ್ತಡ ಹೆಚ್ಚು
6,000 ಮೀ. ಕೆಳಗೆ ನೌಕೆ ಮೇಲೆ ಭಾರೀ ಒತ್ತಡ ಬೀಳುತ್ತದೆ. ಅಂದರೆ, ಆಚೆಗಿಂತ 600 ಪಟ್ಟು ಹೆಚ್ಚು ಒತ್ತಡವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next