Advertisement

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

09:31 PM Sep 19, 2021 | Team Udayavani |

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಬಿಜೆಪಿ ಪಕ್ಷ ಸೇರುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಬಹಿರಂಗ ಆಹ್ವಾನ ನೀಡಿದ್ದಾರೆ.

Advertisement

ಭಾನುವಾರ (ಸೆ.19) ಮಾಧ್ಯಮದ ಎದುರು ಮಾತನಾಡಿರುವ ಅಠಾವಳೆ, ನಿಮ್ಮನ್ನು ಅವಮಾನಿಸಿದ ಪಕ್ಷವನ್ನು ತೈಜಿಸುವಂತೆ ಅಮರೀಂದರ್ ಅವರಿಗೆ ಮನವಿ ಮಾಡಿದರು. ನಿಮ್ಮನ್ನು ಅಪಮಾನ ಮಾಡಿದ ಪಕ್ಷದಲ್ಲಿ ಮುಂದುವರೆಯುವುದರಿಂದ ಏನು ಉಪಯೋಗ ? ಎಂದು ನಾನು ಅವರನ್ನು ಕೇಳಲು ಇಚ್ಛಿಸುತ್ತೇನೆ. ಕಾಂಗ್ರೆಸ್ ಪಕ್ಷವನ್ನು ತೊರೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಬರುವಂತೆ ನಾನು ಅಮರೀಂದರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಅಠಾವಳೆ ಹೇಳಿದರು.

‘ಎನ್‍ಡಿಎ’ಯಲ್ಲಿ ಎಲ್ಲರಿಗೂ ಸಮಾನ ಗೌರವ ಸಿಗುತ್ತದೆ. ಅವರು ಬಿಜೆಪಿ ಪಕ್ಷಕ್ಕೆ ಬಂದರೆ ಮುಂಬರುವ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಎನ್‍ಡಿಎ ಅಧಿಕಾರಕ್ಕೆ ತರುವಲ್ಲಿ ಅಮರೀಂದರ್ ಅವರು ಬಹುಮುಖ್ಯ ಪಾತ್ರ ವಹಿಸಬಹುದು ಎಂದರು.

ನವಜೋತ್ ಸಿಂಗ್ ಸಿಧು ಅವರು ದೇಶ ವಿರೋಧಿ ಎಂದು ಅಮರೀಂದರ್ ಸಿಂಗ್ ಕರೆದಿರುವುದರಲ್ಲಿ ಯಾವುದೇ ತಪ್ಪು ಇಲ್ಲ. ಅವರು ಹೇಳಿರುವುದು ಸರಿ ಇದೆ ಎಂದು ಅಠಾವಳೆ ಅವರು ಅಮರೀಂದರ್ ಅವರ ಹೇಳಿಕೆಯನ್ನು ಬೆಂಬಲಿಸಿದರು.

ಇನ್ನು ಶನಿವಾರ ಅಮರೀಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ಬಳಿಕ ಅಸಮಾಧಾನ ಹೊರಹಾಕಿದ ಅವರು, ಪಕ್ಷದಿಂದ ನಾನು ಅವಮಾನಿತನಾದೆ ಎಂದರು. ಜೊತೆಗೆ ತಮ್ಮ ರಾಜಕೀಯ ವಿರೋಧಿ ನವಜೋತ್ ಸಿಂಗ್ ಅವರ ಮೇಲೆ ಹರಿಹಾಯ್ದು, ಆತ ‘ದೇಶ ವಿರೋಧಿ’ ಎಂದು ಗಂಭೀರ ಆರೋಪ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next