Advertisement

ಬಿಜೆಪಿ ವಿಸ್ತಾರಕರಾಗಿ ಇಂದಿನಿಂದ ಕೇಂದ್ರ ಸಚಿವೆ ನಿರ್ಮಲಾ ಪ್ರಚಾರ

02:35 AM Jul 13, 2017 | Team Udayavani |

ಬೆಂಗಳೂರು: ಬೂತ್‌ ಮಟ್ಟದಿಂದ ಪಕ್ಷ ಸಂಘಟನೆಗೆ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ವಿಸ್ತಾರಕ ಯೋಜನೆಯಡಿ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರದಿಂದ
ಎರಡು ದಿನ ವಿಸ್ತಾರಕರಾಗಿ ಕೆಲಸ ಮಾಡಲಿದ್ದಾರೆ.

Advertisement

ನಿರ್ಮಲಾ ಸೀತಾರಾಮ್‌ ಅವರು ಗುರುವಾರ ಬೆಳಗ್ಗೆ ಮೈಸೂರಿನಲ್ಲಿ ಸ್ವತ್ಛ ಭಾರತ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ ಬೂತ್‌ ಮಟ್ಟಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಸಂಪರ್ಕಿಸಲಿದ್ದಾರೆ.
ಸಂಜೆ 5 ಗಂಟೆಗೆ ಜಿಎಸ್‌ಟಿ ಕುರಿತು ಉದ್ಯಮಿಗಳು, ವ್ಯಾಪಾರಿಗಳು, ವಕೀಲರು ಮತ್ತು ಆಡಿಟರ್‌ಗಳೊಂದಿಗೆ ಸಂವಾದ ನಡೆಸುವರು.

ಶುಕ್ರವಾರ (ಜು. 14) ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಸಚಿವರು, ಅಲ್ಲಿ ವಿಸ್ತಾರಕರಾಗಿ ಮನೆ,
ಮನೆಗೆ ಭೇಟಿ ನೀಡಲಿದ್ದಾರೆ. ಸಂಜೆ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ ನಡೆಯಲಿರುವ ಟೌನ್‌ಹಾಲ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next