Advertisement

ಸೂಫಿ ಸಂತ ಚಿಶ್ತಿಯವರ 809ನೇ ಉರೂಸ್ ಗೆ ಪ್ರಧಾನಿಯಿಂದ “ಚಾದರ” ಸಮರ್ಪಣೆ..!

05:28 PM Feb 16, 2021 | Team Udayavani |

ನವ ದೆಹಲಿ : ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯವರ ಅಜ್ಮೀರ್ ಶರೀಫ್ ದರ್ಗಾಕ್ಕೆ ಸಮರ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೇಸರಿ ಬಣ್ಣದ “ಚಾದರ”ವೊಂದನ್ನು ನೀಡಿದ್ದಾರೆ.

Advertisement

ಸಚಿವ ನಖ್ವಿ ಅವರಿಗೆ  ಖ್ವಾಜಾ ಮೊಯಿನುದ್ದೀನ್ ಚಿಶ್ತಿಯವರ 809ನೇ ಉರೂಸ್ ಸಂದರ್ಭದಲ್ಲಿ ಅಜ್ಮೀರ್ ಶರೀಫ್ ದರ್ಗಾಕ್ಕೆ ಸಮರ್ಪಿಸಲು “ಚಾದರ”ವನ್ನು ಹಸ್ತಾಂತರಿಸಿದ್ದೇನೆ ಎಂದು ಪ್ರಧಾನಿ ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಓದಿ : ಎಳನೀರು ಬಂಗಾರ ಪಲ್ಕೆ ಫಾಲ್ಸ್ ದುರಂತದಲ್ಲಿ ಕಣ್ಮರೆಯಾಗಿದ್ದ ಯುವಕನ ದೇಹ ಪತ್ತೆ

“ಚಿಸ್ತಿಯವರ 809ನೇ ಉರೂಸ್ ಸಂದರ್ಭದಲ್ಲಿ, ವಿಶ್ವ ವ್ಯಾಪಿ ಇರುವ ಅವರ ಅನುಯಾಯಿಗಳಿಗೆ ಶುಭಾಶಯಗಳು. ಈ ವಾರ್ಷಿಕ ಆಚರಣೆ ಐಕ್ಯತೆ ಹಾಗೂ ಸಹೋದರತ್ವಕ್ಕೆ ಉತ್ತಮ ಉದಾಹರಣೆ. ವಿವಿಧ ಧರ್ಮಗಳು, ಪಂಥಗಳು ಮತ್ತು ಅವುಗಳಿಗೆ ಸಂಬಂಧಿಸಿದ ನಂಬಿಕೆಗಳ ಸಾಮರಸ್ಯ ಸಹಬಾಳ್ವೆ ನಮ್ಮ ದೇಶದ ಭವ್ಯ ಪರಂಪರೆಯಾಗಿದೆ. ಈ ಪರಂಪರೆಯನ್ನು ರಕ್ಷಿಸುವಲ್ಲಿ ಮತ್ತು ಬಲಪಡಿಸುವಲ್ಲಿ ನಮ್ಮ ದೇಶದ ಸಂತರು, ಪಿರ್ ಮತ್ತು ಫಕೀರರು ಪ್ರಮುಖ ಪಾತ್ರ ವಹಿಸಿದ್ದಾರೆ. ಶಾಂತಿ ಮತ್ತು ಸಾಮರಸ್ಯದ  ಶಾಶ್ವತ ಸಂದೇಶವು ಯಾವಾಗಲೂ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮು ಶುಭ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು  ಅಲ್ಪ ಸಂಖ್ಯಾತ ವ್ಯವಹಾರ ಸಚಿವಾಲಯ ತಿಳಿಸಿದೆ.

Advertisement

ಇನ್ನು, “ತನ್ನ ಸೂಫಿ ತತ್ವದ ಚಿಂತನೆಯ ಮೂಲಕ ಅಳಿಸಲಾಗದ ಹೆಜ್ಜೆಗುರುತನ್ನು ಚಿಶ್ತಿಯವರು ಬಿಟ್ಟು ಹೋಗಿದ್ದಾರೆ. ಅವರು ಶ್ರೇಷ್ಠ ಆಧ್ಯಾತ್ಮಿಕ ಸಂಪ್ರದಾಯಗಳ ಆದರ್ಶದ ಪ್ರತೀಕ. ಪ್ರೀತಿ, ಏಕತೆ, ಸಾಮರಸ್ಯ ಮನೋಭಾವವನ್ನು ಉತ್ತೇಜಿಸುವುದು ಘರೀಬ್ ನವಾಝ್ ಅವರ ಜೀವನ ಮೌಲ್ಯಗಳು ಹಾಗೂ ದೃಷ್ಟಿಕೋನ ಎಂದಿಗೂ ಮಾನವೀಯತೆಯನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಚಿಶ್ತಿಯವರ ವಾರ್ಷಿಕ ಉರೂಸ್ ಸಂದರ್ಭದಲ್ಲಿ “ಚಾದರ”ವನ್ನು ಅರ್ಪಿಸುವುದರೊಂದಿಗೆ ಅವರಿಗೆ ಗೌರವ ಸಲ್ಲಿಸುತ್ತೇನೆ. ಮತ್ತು ದೇಶದ ಜನರ ಕ್ಷೇಮಕ್ಕಾಗಿ, ಸಮೃದ್ಧ ಬದುಕಿಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಮೋದಿ ತಮ್ಮ  ಸಂದೇಶದಲ್ಲಿ ತಿಳಿಸಿದ್ದಾರೆ.

ಓದಿ :  ಕೃಷಿ ವಿಸ್ತರಣಾ ಕೇಂದ್ರ ಸ್ಥಳಾಂತರಕ್ಕೆ ವಿರೋಧ

 

 

Advertisement

Udayavani is now on Telegram. Click here to join our channel and stay updated with the latest news.

Next